ಸಂಗೀತ:
ಎಂ ಎಸ್ ಮಾರುತಿ
ಸಾಹಿತ್ಯ:
ಗುರುರಾಜ್ ಹೊಸಕೋಟೆ
ಗಾಯನ:
ಗುರುರಾಜ್ ಹೊಸಕೋಟೆ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳತ ಕುಂತ್ಯಾಕ
ನಿನ್ನ ಕೈಯ ಹಿಡಿದವನ
ನಿನ್ನ ಕೈಯ ಹಿಡಿದವನ
ಮನೆಯನ್ನು ಸೇರಲಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ಕೊಟ್ಟ ಹೆಣ್ಣೈತೆ ಕುಲದೊರತ
ಬಿಡು ಬ್ಯಾಡವ್ವ ನೀ ಮರೆತ
ಅನುಗಾಲ ನಡೆದಂತ
ಹೆಣ್ಣು ಜನುಮದ ಈ ಮಾತು
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳತ ಕುಂತ್ಯಾಕ
♫♫♫♫♫♫♫♫♫♫♫♫
ಮಡಿಯಾಗ ಹುಟ್ಟಿದ ಬಳ್ಳಿ
ಮಡಿಯಾಗ ಉಳಿಯುವುದೇನಾ
ಗುಡಿ ಬಿಟ್ಟು ಹೊರಗೆ ಬಂದು
ಹೂವು ಹಣ್ಣು ಕೊಡದೇನು
ಹಿಡಿ ಮನದಾಗ ನನ್ನವ್ವ
ನಗನಗತ ಹೋಗವ್ವ
ಹಿಡಿ ಮನದಾಗ ನನ್ನವ್ವ
ನಗನಗತ ಹೋಗವ್ವ
ನಾ ಎಷ್ಟು ದಿನದಾಕೆವ್ವ
ಕಡಿತನಕ ನಿನಗಂಡವ್ವ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳತ ಕುಂತ್ಯಾಕ
♫♫♫♫♫♫♫♫♫♫♫♫
ಹೆಣ್ಣು ಸಣ್ಣಾಕಿ ಇರುವಾಗ
ತಂದಿ ತಾಯಿಯ ಮಡಿಲಾಗ
ನಿನ ಯವ್ವನೆಂಬ ಕಾಲ
ಅದು ಗಂಡನ ಪಾಲಾಗ
ಮುಂದ ಮುಪ್ಪಿನ ಬಾಳಿಗೆ
ಇಂಥ ಮಕ್ಕಳ ನೆರಳಿಗೆ
ಮುಂದ ಮುಪ್ಪಿನ ಬಾಳಿಗೆ
ಇಂಥ ಮಕ್ಕಳ ನೆರಳಿಗೆ
ಈ ಪರತಂತ್ರ ಜನುಮವನು
ಶಿವ ಕೊಟ್ಟಾನ ಹೆಣ್ಣಿಗೆ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
♫♫♫♫♫♫♫♫♫♫♫♫
ನೀ ಮೆಟ್ಟಿದ ಮನಿ ಬಿಟ್ಟ
ಆ ಈ ಮನಿ ಹೋಗಬ್ಯಾಡ
ಗಂಡ ಉಣುವಕ್ಕಿಂತ ಮೊದಲ
ನೀನೆಂದು ಉಣಬ್ಯಾಡ
ಅತ್ತೆ ಮಾವ ಮೈದುನಗೆಂದು
ಎದುರುತ್ತಿರಿ ಕೊಡಬೇಡ
ಅತ್ತೆ ಮಾವ ಮೈದುನ ಗೆಂದು
ಎದುರುತ್ತಿರಿ ಕೊಡಬೇಡ
ಮತ್ತ ಸಂತೋಷ ಅನಿಸಿದರು
ಎಂದು ಜೋರಾಗಿ ನಗಬ್ಯಾಡ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
♫♫♫♫♫♫♫♫♫♫♫♫
ಮನೆ ಇದ್ದಂತೆ ಮನಸಿರಲಿ
ಇರಗೊಡಬ್ಯಾಡ ಹೊಲಸಲ್ಲಿ
ಉಪವಾಸ ನಿನ್ನ ಇಟ್ಟರು
ತೋರಗೊಡಬ್ಯಾಡ ಮುಖದಲ್ಲಿ
ನಿನ ಪಾಲಿಗೆ ಬಂದದ್ದು
ಪಂಚಾಮೃತ ನೀ ತಿಳಿದು
ನಿನ ಪಾಲಿಗೆ ಬಂದದ್ದು
ಪಂಚಾಮೃತ ನೀ ತಿಳಿದು
ಹೆಸರನ್ನು ತಾ ಕೂಸೆ
ನೀ ಹುಟ್ಟಿರೋ ಮನೆತನದೆ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳತ ಕುಂತ್ಯಾಕ
♫♫♫♫♫♫♫♫♫♫♫♫
ನಿನ ಗಂಡಗ ಇರತಾರು
ಚಂದ ಶ್ರೀಮಂತ ಗೆಳೆಯರು
ನಿನ್ನ ಚೆಲುವ ರೂಪ ನೋಡಿ
ಮೋಹಿಸಿ ಬಿಡುತ್ತಾರೆ
ಗಟ್ಟಿ ಇರಲೆವ್ವ ನಿನ್ನ ಶೀಲ
ಗಂಡಗೊಬ್ಬಗ ಮೀಸಲ
ಗಟ್ಟಿ ಇರಲೆವ್ವ ನಿನ್ನ ಶೀಲ
ಗಂಡಗೊಬ್ಬಗ ಮೀಸಲ
ಇಟ್ಟ ಬಾಳೆವ್ವ ನನಮಗಳ
ಹೆಚ್ಚ ಹೇಳಾಕ ಏನಿಲ್ಲ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳಕೋತ ಕುಂತ್ಯಾಕ
ನನ್ನ ಕರುಳಿನ ಕುಡಿ ನೀನು
ಹಿಂಗ ಅಳತ ಕುಂತ್ಯಾಕ
ನನ್ನ ಮಗಳ… ಹೋಗಿ ಬಾ…
ಹೋಗಿ ಬಾ… ಹೋಗಿ ಬಾ…