ನನ್ನೆರಡು ಕಣ್ಣು ನೀನೆ – Nanneradu Kannu neene Song Lyrics in Kannada – Janapada geethe Lyrics

ನನ್ನೆರಡು ಕಣ್ಣು ನೀನೆ ಎನುತ್ತಿದ್ದೆ ನನ್ನಣ್ಣ
ಅತ್ತಿಗೆಯ ಕೈಗೊಂಬೆಯಾಗಿ ಮರೆತೆಯಾ ನನ್ನ
ತಂಗಿ ಅತ್ತಿಗೆಯು ನಿನ್ನ ತವರೀನ ಬೆಳಕಮ್ಮ
ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ
ನನ್ನೆರಡು ಕಣ್ಣು ನೀನೆ ಎನುತ್ತಿದ್ದೆ ನನ್ನಣ್ಣ
ಅತ್ತಿಗೆಯ ಕೈಗೊಂಬೆಯಾಗಿ ಮರತೆಯ ನನ್ನ
ತಂಗಿ ಅತ್ತಿಗೆಯು ನಿನ್ನ ತವರೀನ ಬೆಳಕಮ್ಮ
ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ


ಹಸುಗೂಸಲಿ ಅಪ್ಪ ಅಮ್ಮ ಅಸುನೀಗಿದಾಗ

ಅಪ್ಪಿ ಮುದ್ದಾಡಿ ನೀನು ಸಾಕಿದೆ ಮಡಿಲಾಗ
ಹಸುಗೂಸಲಿ ಅಪ್ಪ ಅಮ್ಮ ಅಸುನೀಗಿದಾಗ

ಅಪ್ಪಿ ಮುದ್ದಾಡಿ ನೀನು ಸಾಕಿದೆ ಮಡಿಲಾಗ
ಎಲ್ಲೋಯ್ತು ಅಣ್ಣ ಆ ಪ್ರೀತಿ ಈಗ
ಎಲ್ಲೋಯ್ತು ಅಣ್ಣ ಆ ಪ್ರೀತಿ ಈಗ
ಅತ್ತಿಗೆ ಜೊತೆ ಸೇರಿ ನೀ
ಕಾಣುವೆ ನನ್ನ ಪರರಾಂಗ




ಹಾಲುಗಲ್ಲದ ಹಸುಳೆ ನೀ ಅವ್ವ ಸತ್ತಾಗ
ಬೆಳೆಸಿದೆ ನಾ ನಿನ್ನ ತಂಗಿ ನನ್ನ ಒಡಲಾಗ
ಹಾಲುಗಲ್ಲದ ಹಸುಳೆ ನೀ ಅವ್ವ ಸತ್ತಾಗ
ಬೆಳೆಸಿದೆ ನಾ ನಿನ್ನ ತಂಗಿ ನನ್ನ ಒಡಲಾಗ
ನೆಲೆಸಿರುವೆ ತಂಗಿ ಈ ಅಣ್ಣನ ಎದೆಯಾಗ
ನೆಲೆಸಿರುವೆ ತಂಗಿ ಈ ಅಣ್ಣನ ಎದೆಯಾಗ
ಹೆಂಗೆ ಮರೆಯಲಿ ನಿನ್ನ ಒಂದೆ ಬಳ್ಳಿ ಹೂಗಳು ನಾವು

ನನ್ನೆರಡು ಕಣ್ಣು ನೀನೆ ಎನುತ್ತಿದ್ದೆ ನನ್ನಣ್ಣ
ಅತ್ತಿಗೆಯ ಕೈಗೊಂಬೆಯಾಗಿ ಮರೆತೆಯಾ ನನ್ನ
ತಂಗಿ ಅತ್ತಿಗೆಯು ನಿನ್ನ ತವರೀನ ಬೆಳಕಮ್ಮ
ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ


ಯಾವ ಜನುಮದ ಪಾಪ ಪರದೇಸಿ ನಾನಾದೆ

ಬೆಳಗು ಬಿಡುವಿಲ್ಲ ಹಿಂಸೆಗೆ ಕೊನೆಯಿಲ್ಲ
ಯಾವ ಜನುಮದ ಪಾಪ ಪರದೇಸಿ ನಾನಾದೆ

ಬೆಳಗು ಬಿಡುವಿಲ್ಲ ಹಿಂಸೆಗೆ ಕೊನೆಯಿಲ್ಲ
ಅತ್ತೆ ಆಡುವ ಮಾತು ನೆತ್ತಿ ಕಾದಾಂಗ


ಅತ್ತೆ ಆಡುವ ಮಾತು ನೆತ್ತಿ ಕಾದಾಂಗ
ಗಂಡನಯೆಂಬುವನ ನಡತೆ ಕಹಿ ಬೇವಿನ ಹಾಂಗ
ತಂಗಿ ಹೆಣ್ಣಿನ ಜನುಮ ಕುದಿಯುವ ಸುಣ್ಣದಾಂಗ

ನೋವೇನೆ ಬಂದರು ಇರು ಗಂಡನ ಜೊತೆಯಾಗ
ತಂಗಿ ಹೆಣ್ಣಿನ ಜನುಮ ಕುದಿಯುವ ಸುಣ್ಣದಾಂಗ

ನೋವೇನೆ ಬಂದರು ಇರು ಗಂಡನ ಜೊತೆಯಾಗ
ಹೆಣ್ಣಿಗೆ ತವರು ಸ್ಥಿರವಲ್ಲ ತಂಗಿ
ಹೆಣ್ಣಿಗೆ ತವರು ಸ್ಥಿರವಲ್ಲ ತಂಗಿ
ಅತ್ತೆಯ ಮನೆಯಲ್ಲಿ ಮುತ್ತಿನಂತೆ ನೀ ಬಾಳವ್ವಾ
ನನ್ನೆರಡು ಕಣ್ಣು ನೀನೆ ಎನುತ್ತಿದ್ದೆ ನನ್ನಣ್ಣ
ಅತ್ತಿಗೆಯ ಕೈಗೊಂಬೆಯಾಗಿ ಮರೆತೆಯಾ ನನ್ನ
ತಂಗಿ ಅತ್ತಿಗೆಯು ನಿನ್ನ ತವರೀನ ಬೆಳಕಮ್ಮ
ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ
ನನ್ನೆರಡು ಕಣ್ಣು ನೀನೆ ಎನುತ್ತಿದ್ದೆ ನನ್ನಣ್ಣ
ಅತ್ತಿಗೆಯ ಕೈಗೊಂಬೆಯಾಗಿ ಮರೆತೆಯಾ ನನ್ನ
ತಂಗಿ ಅತ್ತಿಗೆಯು ನಿನ್ನ ತವರೀನ ಬೆಳಕಮ್ಮ
ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ
ಈ ಅಣ್ಣನ ಪ್ರೀತಿಲಿ ಸಂಶಯವೂ ಬ್ಯಾಡಮ್ಮ

 


Leave a Reply

Your email address will not be published. Required fields are marked *