ನನಗಾಗಿ ಬಂದ – Nanagagi Banda Song Lyrics in Kannada – Benkiya Bale

ಚಿತ್ರ: ಬೆಂಕಿಯ ಬಲೆ
ಸಂಗೀತ : ರಾಜನ್ನಾಗೇಂದ್ರ
ಸಾಹಿತ್ಯಚಿ ಉದಯಶಂಕರ್
ಗಾಯಕರುSPB


ನನಗಾಗಿ ಬಂದಾ ಹೊ
ಆನಂದ ತಂದಾ ಹಾ
ನನಗಾಗಿ ಬಂದ
ಆನಂದ ತಂದ
ಹೆಣ್ಣೇ ಮಾತಾಡು ಬಾ
ನಾಚಿಕೆ ನಿನಗೇತಕೆ
ಮೌನವು ಇನ್ನೇತಕೆ
ನನಗಾಗಿ ಬಂದ ಆಆಆಆ
ಆನಂದ ತಂದ ಓಓಓಓ
ಹೆಣ್ಣೇ ಮಾತಾಡು ಬಾಬಾಬಾಬಾ
♫♫♫♫♫♫♫♫♫♫♫♫

ನಮಗಾಗೆ ಇಲ್ಲಿ ಮಂಚ ಹಾಕಿದೆ
ಘಮಘಮಿಸೊ ಮಲ್ಲೆ ಹೂವ ಚೆಲ್ಲಿದೆ
ಹಾಲಿದೆ ಹಣ್ಣಿದೆ ನಿನ್ನ ಹಸಿವೆಗೆ
ಹೇ ಕಾದಿಹೆ ಪ್ರೇಮದಿ ನಿನ್ನ ಸೇವೆಗೆ
ಮುಗಿಲಿಂದ ಚಂದ್ರ
ಇಣುಕಿ ನೋಡಿದೆ ಏಏಏ
ತಂಗಾಳಿ ತಂಪು ತಂದು ಚೆಲ್ಲಿದೆ
ಚಳಿ ತಾಳದೇ ತನುವು ನಡುಗಿದೆ
ಪ್ರೀತಿಯ ತೋರುತ ಅಪ್ಪಿಕೊಳ್ಳದೇ
ಬೆಚ್ಚುವೆ ಹೀಗೇಕೆ
ಕೆನ್ನೆಯು ಕೆಂಪೇಕೆ
ತುಟಿಯ ಬಳಿ ತುಟಿಗಳನು
ನಾನು ತಂದಾಗ ಹೊ
ನನಗಾಗಿ ಬಂದ ಹಹಹಹಹ
ಆನಂದ ತಂದ ಹೊಹೊಹೊ
ಹೆಣ್ಣೇ ಮಾತಾಡು ಬಾಬಾಬಾಬಾ
♫♫♫♫♫♫♫♫♫♫♫♫

ಕಣ್ಣಲ್ಲಿ ನೂರಾಸೆ ಸೇರಿಕೊಂಡಿದೆ
ಮೈಯಲ್ಲ ಬಿಸಿಯೇರಿ ನಿನ್ನ ಕೂಗಿದೆ
ಕಾತುರ ತಾಳದೆ ಮನವು ನೊಂದಿದೆ
ಹಾ ಆತುರ ನನ್ನೆದೆ ತುಂಬಿಕೊಂಡಿದೆ
ಅನುರಾಗದಾನಂದ
ಹೃದಯ ತುಂಬಿದೆ
ಮುತ್ತೊಂದು ಬೇಕೆಂದು
ತುಟಿಯು ಕೇಳಿದೆ
ಜೀವವು ನಿಲ್ಲದು
ಬಯಕೆ ಮುಗಿಯದೇ
ಬೇಡುವೆ ಬಾರೆಯಾ
ಬೇಗ ಸನಿಹಕೆ
ಅಂದದ ಹೆಣ್ಣೊಂದು ಅರೆ ಹಾ
ಬಳಿಯಲಿ ನಿಂತಾಗ
ಕೈಯ ಕಟ್ಟಿ ಕುಳಿತಿರಲು
ಕಲ್ಲು ನಾನಲ್ಲ ಹಾ ಹಹಹ
ನನಗಾಗಿ ಬಂದ
ಆನಂದ ತಂದ
ನನಗಾಗಿ ಬಂದ
ಆನಂದ ತಂದ
ಹೆಣ್ಣೇ ಮಾತಾಡು ಬಾ
ನಾಚಿಕೆ ನಿನಗೇತಕೆ
ಮೌನವು ಇನ್ನೇತಕೆ
ನನಗಾಗಿ ಬಂದ ಹಹಹಹಹ
ಆನಂದ ತಂದ ಹೊಹೊಹೊಹೊ
ಹೆಣ್ಣೇ ಮಾತಾಡು ಬಾಬಾಬಾಬಾ
ಹೆಣ್ಣೇ ಮಾತಾಡು ಬಾಬಾಬಾ

Leave a Reply

Your email address will not be published. Required fields are marked *