ನಗಲಾರದೇ ಅಳಲಾರದೇ – Nagalaarade Alalaarade Song Lyrics in Kannada – Shruthi Seridaaga Kannada Movie


ಚಿತ್ರ: ಶೃತಿ
ಸೇರಿದಾಗ

ನಗಲಾರದೇ…
ಅಳಲಾರದೇ…
ತೊಳಲಾಡಿದೆ ಜೀವಾ …


ನಗಲಾರದೇ ಅಳಲಾರದೇ
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ
ಮನದಾಳದಾ ನೋವಾ
♫♫♫♫♫♫♫♫♫♫♫♫

ದಿನಕ್ಕೊಂದು ಬಣ್ಣ
ಕ್ಷಣಕ್ಕೊಂದು ಬಣ್ಣ
ಏನೇನೋ ವೇಷ
ಮಾತಲ್ಲಿ ಮೋಸ
ದಿನಕ್ಕೊಂದು ಬಣ್ಣ
ಕ್ಷಣಕ್ಕೊಂದು ಬಣ್ಣ
ಏನೇನೋ ವೇಷ
ಮಾತಲ್ಲಿ ಮೋಸ
ಆ ಮಾತನೆಲ್ಲಾ ನಿಜವೆಂದು ನಂಬಿ
ಆ ಮಾತನೆಲ್ಲಾ ನಿಜವೆಂದು ನಂಬಿ
ಮನದಾಸೆಯೇ…
ಮಣ್ಣಾಯಿತೇ…
ಮನದಾಸೆಯೇ ಮಣ್ಣಾಯಿತೇ
ಮನ ನೆಮ್ಮದಿ ದೂರಾಯಿತೇ
ನಗಲಾರದೇ ಅಳಲಾರದೇ
ತೊಳಲಾಡಿದೆ ಜೀವಾ..
♫♫♫♫♫♫♫♫♫♫♫♫
ನಿಜವಾದ ಪ್ರೇಮ
ನಿಜವಾದ ಸ್ನೇಹ
ಅನುರಾಗವೇನೋ
ಬಲ್ಲೋರು ಇಲ್ಲಾ
ನಿಜವಾದ ಪ್ರೇಮ
ನಿಜವಾದ ಸ್ನೇಹ
ಅನುರಾಗವೇನೋ
ಬಲ್ಲೋರು ಇಲ್ಲಾ
ಬಾಳಲ್ಲೇ ನಟನೆ ಹೀಗೆಕೋ ಕಾಣೆ
ಬಾಳಲ್ಲೇ ನಟನೆ ಹೀಗೆಕೋ ಕಾಣೆ
ಬದುಕಲ್ಲಿಯೇ…
ಹುಡುಗಾಟವೇ…
ಬದುಕಲ್ಲಿಯೇ ಹುಡುಗಾಟವೇ
ಈ ಆಟಕೆ ಕೊನೆಯಿಲ್ಲವೇ…
ನಗಲಾರದೇ ಅಳಲಾರದೇ
ತೊಳಲಾಡಿದೆ ಜೀವಾ
ಬರಿ ಮಾತಲಿ ಹೇಳಲಾಗದೇ
ಮನದಾಳದಾ ನೋವ…


Nagalarade Alalarade Song Lyrics

Leave a Reply

Your email address will not be published. Required fields are marked *