ದೋಣಿ ಸಾಗಲಿ – Doni saagali Munde hogali Song Lyrics in Kannada – Miss Leelaavathi Kannada Movie

ಚಿತ್ರ: ಮಿಸ್ ಲೀಲಾವತಿ

ಹ ಹಾ ಹಾ
ಹಾ
ಹೂಂಹೂಂಹೂಂ ಹಾಹಾ
ಹೂಂ…. ಹೂಂ ಹೂಂ
ದೋಣಿ ಸಾಗಲಿ ಮುಂದೆ ಹೋಗಲಿ

ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳು ತೇಲುವ

ತೆರೆಯ ಮೇಗಡೆ ಹಾರಲಿ
ದೋಣಿ ಸಾಗಲಿ ಮುಂದೆ ಹೋಗಲಿ

ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳು ತೇಲುವ

ತೆರೆಯ ಮೇಗಡೆ ಹಾರಲಿ
ಆಹಾ ಹಹಹಹ ಆಹಾಹ
ಉಹೂ೦ಹು ಉಹೂ೦ಹೂ೦



ಹೊನ್ನ ಗಿಂಡಿಯ ಹಿಡಿದು ಕೈಯೊಳು

ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ

ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದ ದಿಗಂತದಿ

ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ
ಸುಪ್ರಭಾತವ ಬಯಸಿರಿ
ದೋಣಿ ಸಾಗಲಿ ಮುಂದೆ ಹೋಗಲಿ

ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳು ತೇಲುವ
ತೆರೆಯ ಮೇಗಡೆ ಹಾರಲಿ
♫♫♫♫♫♫♫♫♫♫♫♫

ಕೆರೆಯ ಅಂಚಿನ ಮೇಲೆ ಮಿಂಚಿನ

ಹನಿಗಳಂದದಿ ಹಿಮಮಣಿ
ಹಾಂ ಕೆರೆಯ ಅಂಚಿನ ಮೇಲೆ
ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚು ತೀರ್ಪು ಮೂಡುತೈತರೇ

ಬಾಲ ಕೋಮಲ ದಿನಮಣಿ
ಹಸಿರು ಜೋಳದ ಹೊಲದ ಗಾಳಿಯು
ತೀಡಿ ತಣ್ಣಗೆ ಬರುತಿದೆ
ಹುದುಗಿ ಹಾಡುವ ಮತ್ತ ಕೋಕಿಲ
ಮಧುರವಾಣಿಯ ತರುತಿದೆ
ದೋಣಿ ಸಾಗಲಿ ಮುಂದೆ ಹೋಗಲಿ

ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳು ತೇಲುವ

ತೆರೆಯ ಮೇಗಡೆ ಹಾರಲಿ
♫♫♫♫♫♫♫♫♫♫♫♫

ದೂರ ಬೆಟ್ಟದ ಮೇಲೆ ತೇಲುವ
ಬಿಳಿಯ ಮೋಡವ ನೋಡಿರಿ
ಹಾಂ ದೂರ ಬೆಟ್ಟದ ಮೇಲೆ
ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೇ ತೇಲುತ

ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು

ನಮ್ಮ ಜೀವನ ಲೀಲೆಗೆ
ನೆನ್ನೆ ನಿನ್ನೆಗೆ ಇಂದು ಇಂದಿಗೆ

ಇರಲಿ ನಾಳೆಯು ನಾಳೆಗೆ
ದೋಣಿ ಸಾಗಲಿ ಮುಂದೆ ಹೋಗಲಿ

ದೂರ ತೀರವ ಸೇರಲಿ
ಬೀಸುಗಾಳಿಗೆ ಬೀಳು ತೇಲುವ

ತೆರೆಯ ಮೇಗಡೆ ಹಾರಲಿ
ಆಹಾ ಹಹಹಹ ಆಹಾಹ
ಉಹೂ೦ಹೂ೦ ಉಹೂ೦ಹೂ೦

ಉಹೂ೦ಹೂ೦ಹೂ೦ಹೂ೦

ಉಹೂ೦ಹೂ೦

Leave a Reply

Your email address will not be published. Required fields are marked *