ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ
ಹಾ ನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ
ಓ ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ
ಹಾ ನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ
ಓ ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು
ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ
ಓ ದೇವರು ವರವನು ಕೊಟ್ರೇ
ನಾ ನಿನ್ನೆ ಕೋರುವೆ ಚೆಲುವೆ
♫♫♫♫♫♫♫♫♫♫♫♫
ಮನಸು ನಿನ್ನ ಕಂಡೊಡನೆ
ತನ್ನ ಮೈಯ ಮರೆತೋಯ್ತು
ಒಂದು ಮಾತು ಕೇಳದೆಲೇ
ನಿನ್ನ ಜೀವ ಸೇರೋಯ್ತು
ಹಾ ನಿನ್ನ ಒಂದು ನಗೆಯೊಳಗೆ
ನನ್ನತನವೇ ಬೆಳಕಾಯ್ತು
ಯಾವ ಸ್ಪರ್ಶ ಇಲ್ಲದೆಲೇ
ಹೃದಯ ಅದಲು ಬದಲಾಯ್ತು
ನೀ ಮೇಘಗಳ ಹನಿಯೊಳಗೆ
ಅವಿತಿದ್ದರೂ
ಮಿಂಚುಗಳ ಏರಿ ಮಳೆಬಿಲ್ಲ
ಮೈಗುಡಿಸುವೆ
ಭೂಮಿ ಆಕಾಶದ ಆಚೆಗೂ
ನಿನ್ನ ನೆನಪಲ್ಲೇ ನಾ ಬದುಕುವೆ
ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ
ಹಾ ನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ
♫♫♫♫♫♫♫♫♫♫♫♫
ಏಳು ಹೆಜ್ಜೆ ಇಡುವೆ ಎಂದು
ಏಳು ಜನ್ಮ ಕಾಯುವೆನು
ಮೂರು ಗಂಟು ಬೆಸೆಯುವೆ ಎಂದು
ನೂರು ಕಾಲ ಬೇಡುವೆನು
ಹಾ ಎಲ್ಲ ಋತುಗೂ ಮನವಿ ಬರೆದು
ಗಟ್ಟಿಮೇಳ ನುಡಿಸುವೆನು
ಸೂರ್ಯ ಚಂದ್ರ ಚುಕ್ಕಿಯ ಕರೆದು
ಮಂತ್ರ ಘೋಷ ಹರಿಸುವೆನು
ನನ್ನ ಕನಸೆಲ್ಲ ನಿನ್ನ
ಕಂಗಳು ನೋಡಲು
ನಿನ್ನ ರೆಪ್ಪೆಯಲೇ ಬಾಯ್ತೆರೆದು
ಕಾದಿರುವೆ ನಾ
ಈ ಜಗದಲ್ಲೇ ನೀ ವಿಸ್ಮಯ
ಹೇಯ್ ಬಾ ಒಪ್ಪಿಕೊ ಪ್ರೀತಿಯ
ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ
ಓ ನಿದಿರೆಯ ಒಳಗೂ ನಿನ್ನ
ನೆರಳನ್ನೇ ಸೇರುವೆ ಚೆಲುವೆ
ಓ ತಿಂಗಳಿಗೆ ಕಂಗಳ ಬರೆದು
ತಂಗಾಳಿಗೆ ತುಟಿಗಳ ಬರೆದು
ಮುಂಜಾನೆಗೆ ನಗುವನು ಬರೆದು
ಮುಸ್ಸಂಜೆಗೆ ಲಜ್ಜೆಯ ಬರೆದು
ಪ್ರಕೃತಿಯಲಿ ಕಂಡೆ ನಿನ್ನನ್ನೇ
ಓ ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ
ದೇವರು ವರವನು ಕೊಟ್ರೇ
ನಾ ನಿನ್ನೇ ಕೋರುವೆ ಚೆಲುವೆ