ದುಂಡು ಮಲ್ಲಿಗೆ – Dundu Mallige Lyrics – Nanna Devaru Kannada Movie song Lyrics

ಚಿತ್ರ: ನನ್ನ ದೇವರು

ಸಂಗೀತ : ರಾಜನ್ನಾಗೇಂದ್ರ


ದುಂಡು ಮಲ್ಲಿಗೆ ಮಾತಾಡೆಯ

ಕೆಂಡ ಸಂಪಿಗೆ ನೀನಾದೆಯ

ಕೆನ್ನೆ ಕೆಂಪಗಾಗಿ

ಸಂಕೋಚ ತುಂಬಿ ಹೋಗಿ

ನಾಚಿ ನೀನು ಮೊಗ್ಗಾದೆಯಾ

ದುಂಡು ಮಲ್ಲಿಗೆ ಮಾತಾಡೆಯ

ಕೆಂಡ ಸಂಪಿಗೆ ನೀನಾದೆಯ

ಕೆನ್ನೆ ಕೆಂಪಗಾಗಿ

ಸಂಕೋಚ ತುಂಬಿ ಹೋಗಿ

ನಾಚಿ ನೀನು ಮೊಗ್ಗಾದೆಯಾ

ದುಂಡು ಮಲ್ಲಿಗೆ ಮಾತಾಡೆಯ

♫♫♫♫♫♫♫♫♫♫♫♫

ನೀನಾಡೊ ಮಾತೆಲ್ಲ ಜೇನಂತೆ

ನೀ ಹಾಡೊ ಸಂಗೀತ ಇಂಪಂತೆ

ನೀನಾಡೊ ಮಾತೆಲ್ಲ ಜೇನಂತೆ

ನೀ ಹಾಡೊ ಸಂಗೀತ ಇಂಪಂತೆ

ಆಸೆ ಬಂದಂತೆ

ಸೋತು ನಾ ನಿಂತೆ

ಹೆಣ್ಣೆ ಬಲ್ಲೆಯಾ

ನಗುವಾಗ ಮೊಗವು ಶಶಿಯಂತೆ

ನಲಿದಾಗ ಕುಣಿದಾಡೊ ನವಿಲಂತೆ

ನಗುವಾಗ ಮೊಗವು ಶಶಿಯಂತೆ

ನಲಿದಾಗ ಕುಣಿದಾಡೊ ನವಿಲಂತೆ

ನಿನ್ನ ಕಂಡಂದೆ

ಒಲಿದು ನಾ ಬಂದೆ

ನಿನ್ನನ್ನು ಬಯಸಿದೆ

ಬಂದೀಗ ಸೇರಿದೆ

ದುಂಡು ಮಲ್ಲಿಗೆ ಮಾತಾಡೆಯ

ಕೆಂಡ ಸಂಪಿಗೆ ನೀನಾದೆಯ

ಕೆನ್ನೆ ಕೆಂಪಗಾಗಿ

ಸಂಕೋಚ ತುಂಬಿ ಹೋಗಿ

ನಾಚಿ ನೀನು ಮೊಗ್ಗಾದೆಯಾ

ದುಂಡು ಮಲ್ಲಿಗೆ ಮಾತಾಡೆಯ

♫♫♫♫♫♫♫♫♫♫♫♫

ನಿನ್ನಂಥ ಹೆಣ್ಣನ್ನು ಕಂಡಿಲ್ಲ

ಯಾರಲ್ಲು ನಾ ಹೀಗೆ ಸೇರಿಲ್ಲ

ನಿನ್ನಂಥ ಹೆಣ್ಣನ್ನು ಕಂಡಿಲ್ಲ

ಯಾರಲ್ಲು ನಾ ಹೀಗೆ ಸೇರಿಲ್ಲ

ಏಕೊ ನಾ ಕಾಣೆ

ನಂಬು ನನ್ನಾಣೆ

ಒಲವಿಂದ ಸೇರೆಯಾ

ನನ್ನಾಸೆ ನಿನ್ನಲ್ಲಿ ಏಕಿಲ್ಲ

ಮೌನ ನಿನಗಿನ್ನು ಸರಿಯಲ್ಲ

ನನ್ನಾಸೆ ನಿನ್ನಲ್ಲಿ ಏಕಿಲ್ಲ ಹಾ

ಮೌನ ನಿನಗಿನ್ನು ಸರಿಯಲ್ಲ

ನೋಡು ನೀನಿಲ್ಲೀ

ಬೇರೆ ಯಾರಿಲ್ಲ

ಕಣ್ಣಲ್ಲೇ ಕೊಲುವೆಯಾ

ಇಲ್ಲ ಮುತ್ತೊಂದಾ ಕೊಡುವೆಯಾ

ದುಂಡು ಮಲ್ಲಿಗೆ ಮಾತಾಡೆಯ

ಕೆಂಡ ಸಂಪಿಗೆ ನೀನಾದೆಯ

ಕೆನ್ನೆ ಕೆಂಪಗಾಗಿ

ಸಂಕೋಚ ತುಂಬಿ ಹೋಗಿ

ನಾಚಿ ನೀನು ಮೊಗ್ಗಾದೆಯಾ

ದುಂಡು ಮಲ್ಲಿಗೆ ಮಾತಾಡೆಯಾ


 Dundu Mallige Maatadeya Lyrics
 Dundu Mallige Maataadeya Lyrics
 Dundu Mallige Maathadeya Lyrics

Leave a Reply

Your email address will not be published. Required fields are marked *