ತಲ್ಲಣಿಸದಿರು ಕಂಡ್ಯ – Thallanisadiru Kandya Lyrics – Purandaradaasru – Bhakthigeethe Lyrics


Song: Thallanisadiru Kandya
Album/Movie: Dasarendare Purandara Dasarayya Vol-II
Singer: Narasimha Nayak
Music Director: Narasimha Nayak
Lyricist: Purandara Daasaru
Music Label : Lahari Music


ತಲ್ಲಣಿಸದಿರು
ಕಂಡ್ಯ ತಾಳು ಮನವೇ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

ಎಲ್ಲರನು
ಸಲಹುವನು ಇದಕೆ ಸಂಶಯವಿಲ್ಲ

ಎಲ್ಲರನು
ಸಲಹುವನು ಇದಕೆ ಸಂಶಯವಿಲ್ಲ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

 

ಬೆಟ್ಟದ
ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ

ಕಟ್ಟೆಯನು
ಕಟ್ಟಿ ನೀರೆರೆದವರು ಯಾರು…

ಬೆಟ್ಟದ
ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ

ಕಟ್ಟೆಯನು
ಕಟ್ಟಿ ನೀರೆರೆದವರು ಯಾರು…

ಪುಟ್ಟಿಸಿದ
ದೇವ ತಾ ಹೊಣೆಗಾರನಾಗಿರಲು

ಗಟ್ಯಾಗೆ
ಸಲಹುವನು ಇದಕೆ ಸಂಶಯವಿಲ್ಲ

 

ತಲ್ಲಣಿಸದಿರು
ಕಂಡ್ಯ ತಾಳು ಮನವೇ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

 

ಅಡವಿಯೊಳಗಾಡುವ
ಮೃಗ ಪಕ್ಷಿಗಳಿಗೆಲ್ಲ

ಅಡಿಗಡಿಗೆ
ಆಹಾರ ಇತ್ತವರು ಯಾರು

ಅಡವಿಯೊಳಗಾಡುವ
ಮೃಗ ಪಕ್ಷಿಗಳಿಗೆಲ್ಲ

ಅಡಿಗಡಿಗೆ
ಆಹಾರ ಇತ್ತವರು ಯಾರು

ಹಡೆದ
ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿ

ಬಿಡದೆ
ರಕ್ಷಿಪನಿದಕೆ ಸಂದೇಹ ಬೇಡ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

 

ಕಲ್ಲೊಳಗೆ
ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ

ಅಲ್ಲಲ್ಲೆ
ಆಹಾರ ಇತ್ತವರು ಯಾರೋ

ಕಲ್ಲೊಳಗೆ
ಹುಟ್ಟಿರುವ ಕ್ರಿಮಿಕೀಟಗಳಿಗೆಲ್ಲ

ಅಲ್ಲಲ್ಲೆ
ಆಹಾರ ಇತ್ತವರು ಯಾರೋ

ಬಲ್ಲಿದನು
ಕಾಗಿನೆಲೆ ಆದಿಕೇಶವನು

ಬಲ್ಲಿದನು
ಕಾಗಿನೆಲೆ ಆದಿಕೇಶವನು

ಗಟ್ಯಾಗೆ
ಸಲಹುವನು ಇದಕೆ ಸಂಶಯವಿಲ್ಲ

 

ತಲ್ಲಣಿಸದಿರು
ಕಂಡ್ಯ ತಾಳು ಮನವೇ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

ಎಲ್ಲರನು
ಸಲಹುವನು ಇದಕೆ ಸಂಶಯವಿಲ್ಲ

ಎಲ್ಲರನು
ಸಲಹುವನು ಇದಕೆ ಸಂಶಯವಿಲ್ಲ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

ತಲ್ಲಣಿಸದಿರು
ಕಂಡ್ಯ ತಾಳು ಮನವೇ

 


Tallanisadiru Kandya Taalu manave Lyrics

Thallanisadiru Kandya Thalu manave Lyrics

Tallanisadiru Kandya Thaalu manave Lyrics

Leave a Reply

Your email address will not be published. Required fields are marked *