ತಂಗಾಳಿಯಂತೆ ಬಾಳಲ್ಲಿ ಬಂದೆ – Thangaaliyante Baalalli bande Song Lyrics in Kannada – Rajkumar – Guri Kannada Movie



ಚಿತ್ರ: ಗುರಿ

.. ಹೆ ಹೆ
ತನನಂ ತನನಂ ತನನಂ ತನನಂ


ತನನಂ ತನನಂ ತನನಂ ತನನಂ
....ಹಾ
ಹೊ

ತನನಂ ತನನಂ ತನನಂ ತನನಂ
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಅನುರಾಗವೇನೋ ಆನಂದವೇನೋ
ಅನುರಾಗವೇನೋ ಆನಂದವೇನೋ
ಹೊಸ ಹೊಸ ಸವಿನುಡಿಯಲಿ ನೀ ತಿಳಿಸಿದೆ

ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
♫♫♫♫♫♫♫♫♫♫♫♫

ಒಣಗಿದ ಹೂಬಳ್ಳಿ ಹಸಿರಾಯಿತು
ಸೊರಗಿದ ಮರಿದುಂಬಿ ಸ್ವರ ಹಾಡಿತು
ಹೊಸ ಜೀವ ಬಂದಂತೆ ಹಾರಾಡಿತು
ಎದೆಯಲಿ ನೂರಾಸೆ ಉಸಿರಾಡಿತು
ಹೊಸತನ ಬೇಕೆಂದು ಹಾರಾಡಿತು
ಕನಸನ್ನು ಕಂಡಂತೆ ಕುಣಿದಾಡಿತು
ಜೀವಕೆ ಹಿತವಾಯಿತು
ಅಮೃತ ಕುಡಿದಂತೆ
ಸ್ವರ್ಗವ ಕಂಡಂತೆ
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ

ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
♫♫♫♫♫♫♫♫♫♫♫♫
ಮಳೆಯಲಿ ಮಿಂಚೊಂದು ಸುಳಿದಾಡಿತು
ಚಳಿಯಲಿ ನವಿಲೊಂದು ಗರಿ ಬಿಚ್ಚಿತು
ಹೊಸ ಲೋಕ ಕಂಡಂತೆ ನಲಿದಾಡಿತು
ಮನಸಿನ ನೋವೆಲ್ಲ ದೂರಾಯಿತು
ಒಲವಿನ ಹಾಡೊಂದು ಸುಳಿದಾಡಿತು
ಕವಿಯಂತೆ ಮಾತಾಡೋ ಮನಸಾಯಿತು
ಜೀವನ ಜೇನಾಯಿತು
ನೋವನು ಮರೆತಂತೆ
ಸಂಭ್ರಮ ಬೆರೆತಂತೆ
ತಂಗಾಳಿಯಂತೆ ಬಾಳಲ್ಲಿ ಬಂದೆ
ಸಂಗೀತದಂತೆ ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ
ಅನುರಾಗವೇನೋ ಆನಂದವೇನೋ
ಅನುರಾಗವೇನೋ ಆನಂದವೇನೋ
ಹೊಸ ಹೊಸ ಸವಿನುಡಿಯಲಿ ನೀ ತಿಳಿಸಿದೆ
ತಂಗಾಳಿಯಂತೆ
ಬಾಳಲ್ಲಿ ಬಂದೆ
ಸಂಗೀತದಂತೆ
ಸಂತೋಷ ತಂದೆ
ಬೆಳಕಿಂದ ನಾ ದೂರವಾದಾಗ
ಬದುಕಲ್ಲಿ ಏಕಾಂಗಿಯಾದಾಗ

Leave a Reply

Your email address will not be published. Required fields are marked *