ಜಯ ಭಾರತ – Jaya Bharatha Jananiya Tanujaate Song Lyrics – KUVEMPU

ರಾಷ್ಟ್ರಕವಿ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ| ಜಯ ಹೇ ಕರ್ನಾಟಕ ಮಾತೆ ಗೀತೆಯನ್ನು ಕರ್ನಾಟಕದ ನಾಡಗೀತೆಯನ್ನಾಗಿ ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಕೆ ವಿ ಪುಟ್ಟಪ್ಪ(ಕುವೆಂಪು) ಈ ಪದ್ಯವನ್ನು ೧೯೨೪ರಲ್ಲಿ ‘ಕಿಶೋರಚಂದ್ರವಾಣಿ’ ಎಂಬ ಕಾವ್ಯನಾಮದಡಿ ಬರೆದರು. ೨೦೦೪ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಮಾಡಲು ನಿರ್ಧರಿಸಿತು.

ರಾಷ್ಟ್ರಕವಿ ಕುವೆಂಪು ರಚಿಸಿದ ‘ಜಯ ಭಾರತ ಜನನಿಯ ತನುಜಾತೆ’ ಕವನವು ಅವರ ಕೈಯಲ್ಲೇ ಮುಂದೆ ಸಣ್ಣಪುಟ್ಟ ಮಾರ್ಪಾಡು­ಗಳನ್ನು ಪಡೆಯಿತು. 2004ರ ಫೆ. 23ರಂದು ರಾಜ್ಯ ಸರ್ಕಾರ ಅದನ್ನು ‘ನಾಡಗೀತೆ’ಯಾಗಿ ಗೌರವಿಸಿ ಅದಕ್ಕೊಂದು ವಿಶೇಷ ಸ್ಥಾನ ನೀಡಿತು.

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜಯ ಸುಂದರ ನದಿ ವನಗಳ ನಾಡೇ

ಜಯ ಹೇ ರಸಋಷಿಗಳ ಬೀಡೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಭೂದೇವಿಯ ಮಕುಟದ ನವಮಣಿಯೆ

ಗಂಧದ ಚಂದದ ಹೊನ್ನಿನ ಗಣಿಯೆ

ರಾಘವ ಮಧುಸೂಧನರವತರಿಸಿದ

ಭಾರತ ಜನನಿಯ ತನುಜಾತೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜನನಿಯ ಜೋಗುಳ ವೇದದ ಘೋಷ

ಜನನಿಗೆ ಜೀವವು ನಿನ್ನಾವೇಶ

ಜನನಿಯ ಜೋಗುಳ ವೇದದ ಘೋಷ

ಜನನಿಗೆ ಜೀವವು ನಿನ್ನಾವೇಶ

ಹಸುರಿನ ಗಿರಿಗಳ ಸಾಲೇ

ನಿನ್ನಯ ಕೊರಳಿನ ಮಾಲೆ

ಹಸುರಿನ ಗಿರಿಗಳ ಸಾಲೇ

ನಿನ್ನಯ ಕೊರಳಿನ ಮಾಲೆ

ಕಪಿಲ ಪತಂಜಲ ಗೌತಮ ಜಿನನುತ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಶಂಕರ ರಾಮಾನುಜ ವಿದ್ಯಾರಣ್ಯ

ಬಸವೇಶ್ವರರಿಹ ದಿವ್ಯಾರಣ್ಯ

ಶಂಕರ ರಾಮಾನುಜ ವಿದ್ಯಾರಣ್ಯ

ಬಸವೇಶ್ವರರಿಹ ದಿವ್ಯಾರಣ್ಯ

ರನ್ನ ಷಡಕ್ಷರಿ ಪೊನ್ನ

ಪಂಪ ಲಕುಮಿಪತಿ ಜನ್ನ

ರನ್ನ ಷಡಕ್ಷರಿ ಪೊನ್ನ

ಪಂಪ ಲಕುಮಿಪತಿ ಜನ್ನ

ಕುಮಾರವ್ಯಾಸರ ಮಂಗಳ ಧಾಮ

ಕವಿ ಕೋಗಿಲೆಗಳ ಪುಣ್ಯಾರಾಮ

ನಾನಕ ರಾಮಾ ನಂದ ಕಬೀರರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ತೈಲಪ ಹೊಯ್ಸಳರಾಳಿದ ನಾಡೇ

ಡಂಕಣ ಜಕಣರ ನೆಚ್ಚಿನ ಬೀಡೆ

ತೈಲಪ ಹೊಯ್ಸಳರಾಳಿದ ನಾಡೇ

ಡಂಕಣ ಜಕಣರ ನೆಚ್ಚಿನ ಬೀಡೆ

ಕೃಷ್ಣ ಶರಾವತಿ ತುಂಗಾ

ಕಾವೇರಿಯ ವರ ರಂಗಾ

ಕೃಷ್ಣ ಶರಾವತಿ ತುಂಗಾ

ಕಾವೇರಿಯ ವರ ರಂಗಾ

ಚೈತನ್ಯ ಪರಮಹಂಸ ವಿವೇಕರ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಸರ್ವ ಜನಾಂಗದ ಶಾಂತಿಯ ತೋಟ

ರಸಿಕರ ಕಂಗಳ ಸೆಳೆಯುವ ನೋಟ

ಸರ್ವ ಜನಾಂಗದ ಶಾಂತಿಯ ತೋಟ

ರಸಿಕರ ಕಂಗಳ ಸೆಳೆಯುವ ನೋಟ

ಹಿಂದೂ ಕ್ರೈಸ್ತ ಮುಸಲ್ಮಾನ

ಪಾರಸಿಕ ಜೈನರುದ್ಯಾನ

ಹಿಂದೂ ಕ್ರೈಸ್ತ ಮುಸಲ್ಮಾನ

ಪಾರಸಿಕ ಜೈನರುದ್ಯಾನ

ಜನಕನ ಹೋಲುವ ದೊರೆಗಳ ಧಾಮ

ಗಾಯಕ ವೈಣಿಕರಾರಾಮ

ಕನ್ನಡ ನುಡಿ ಕುಣಿದಾಡುವ ಗೇಹ

ಕನ್ನಡ ತಾಯಿಯ ಮಕ್ಕಳ ದೇಹ

ಕನ್ನಡ ನುಡಿ ಕುಣಿದಾಡುವ ಗೇಹ

ಕನ್ನಡ ತಾಯಿಯ ಮಕ್ಕಳ ದೇಹ

ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ

ಜಯ ಸುಂದರ ನದಿ ವನಗಳ ನಾಡೇ

ಜಯ ಹೇ ರಸಋಷಿಗಳ ಬೀಡೆ

ಜಯ ಭಾರತ ಜನನಿಯ ತನುಜಾತೆ

ಜಯ ಹೇ ಕರ್ನಾಟಕ ಮಾತೆ


———————————————————-

More Patriotic Songs Lyrics in Kannada

——————————————————-

Like My FaceBook Page : PK Music Lyrics

 

If you want any Kannada
Sing along Karaoke :

PK Music
Karaoke World

 

If you find any mistakes
in this Page of  Lyrics feel free to
correct it and Mention in the Comment Box.

Leave a Reply

Your email address will not be published. Required fields are marked *