ಜಗವೆ ಒಂದು ರಣರಂಗ – Jagave ondu Ranaranga Lyrics in Kannada – Ranaranga Kannada Movie

ಚಿತ್ರ: ರಣರಂಗ

ಗಾಯಕರು: ರಾಜ್ ಕುಮಾರ್


ಜಗವೆ ಒಂದು ರಣರಂಗ
ಧೈರ್ಯ ಇರಲಿ ನಿನ್ನ ಸಂಘ
ಬಾರೊ ಬಾರೊ ನನ್ನ ರಾಜ
ನಿನಗೆ ನೀನೆ ಮಹಾರಾಜ
ತಿಳಿಯೊ ಆತ್ಮ ಬಲದಸ್ತ್ರ
ಅದುವೆ ಜಯದ ಮಹಾಮಂತ್ರ
ನಿನ್ನ ದಾರಿಯಲ್ಲಿ ಎಲ್ಲು ಸೋಲೆ ಇಲ್ಲ
ಬಾಳ ಯುದ್ದದಲ್ಲಿ ನಿನ್ನ ಗೆಲ್ಲೋರಿಲ್ಲ
ಚಲವೆ ಬಲವೊ ಮುಂದೆ ನುಗ್ಗಿ ನುಗ್ಗಿ ಬಾ
ಜಗವೆ ಒಂದು ರಣ ರಂಗ
ಧೈರ್ಯ ಇರಲಿ ನಿನ ಸಂಘ
ಬಾರೊ ಬಾರೊ ನನ್ನ ರಾಜ
♫♫♫♫♫♫♫♫♫♫♫♫

ತಿರುಗೊ ಭೂಮಿಯಲ್ಲಿ ನಡೆವ ಬಾಳಿನಲ್ಲಿ
ಏನು ನಿಲ್ಲದಮ್ಮ ರಾಜ
ಜನನ ಎಂಬುದಿಲ್ಲಿ ಮರಣ ಎಂಬುದನ್ನ

ಎಂದೂ ಗೆಲ್ಲದಮ್ಮ ರಾಜ
ಜನ ಇರುವ ಗೋಲವೊ ಇದು
ದಿನ ಕಳೆವ ಜಾಲವೊ ಇದು
ಜಯ ಭಯದ ಚಿಂತೆ ಮಾಡದೆ
ಸೆಣೆಸಾಡೊ ರಂಗವೊ ಇದು
ಇಲ್ಲಿ ದಾನವರ ಕೆಟ್ಟ ಮಾಯವಿದೆ
ಇಲ್ಲಿ ಮಾನವರ ಸುಟ್ಟ ಗಾಯವಿದೆ
ಇದ್ದರೆ ಗೆದ್ದರೆ ನ್ಯಾಯವನ್ನು ಉಳಿಸು ಬಾ
ಜಗವೆ ಒಂದು ರಣರಂಗ
ಧೈರ್ಯ ಇರಲಿ ನಿನ ಸಂಘ
ಬಾರೊ ಬಾರೊ ನನ್ನ ರಾಜ
♫♫♫♫♫♫♫♫♫♫♫♫

321

ದೇಹಿ ಎನ್ನುವಾಗ ನಿದ್ದೆ ಮಾಡುವಾಗ
ಕತ್ತಿ ಎತ್ತಬೇಡ ರಾಜ
ಶತ್ರು ಬೀಳುವಾಗ ಯುದ್ದ ಮಾಡುವಾಗ
ಕರುಣೆ ಕಟ್ಟಿ ಇಡು ರಾಜ
ಭೂಮಿಲಿ ಹುಟ್ಟಿ ಬಂದರೆ
ಋಣವ ಕಟ್ಟ ಬೇಡವೇ
ಅನ್ಯಾಯ ಗೆಲ್ಲುತ್ತಿದ್ದರೆ
ಸಿಡಿದೆದ್ದು ನಿಲ್ಲಬೇಡವೇ
ಇಲ್ಲಿ ದೂರತನ ಅಟ್ಟದಲ್ಲಿ ಇದೆ
ನಿನ್ನ ಜಾಣತನ ಮೆಟ್ಟುವಲ್ಲಿ ಇದೆ
ಮೆಟ್ಟು ಬಾ ಅಟ್ಟು ಬಾ
ದಿಟ್ಟ ಹೆಜ್ಜೆ ಇಟ್ಟು ಬಾ
ಜಗವೆ ಒಂದು ರಣರಂಗ
ಧೈರ್ಯ ಇರಲಿ ನಿನ್ನ ಸಂಘ
ಬಾರೊ ಬಾರೊ ನನ್ನ ರಾಜ
ನಿನಗೆ ನೀನೆ ಮಹಾರಾಜ
ತಿಳಿಯೊ ಆತ್ಮ ಬಲದಸ್ತ್ರ
ಅದುವೆ ಜಯದ ಮಹಾಮಂತ್ರ
ನಿನ್ನ ದಾರಿಯಲ್ಲಿ ಎಲ್ಲು ಸೋಲೆ ಇಲ್ಲ
ಬಾಳ ಯುದ್ದದಲ್ಲಿ ನಿನ್ನ ಗೆಲ್ಲೋರಿಲ್ಲ

ಚಲವೆ ಬಲವೊ ಮುಂದೆ ನುಗ್ಗಿ ನುಗ್ಗಿ ಬಾ
ಜಗವೆ ಒಂದು ರಣರಂಗ

ಧೈರ್ಯ ಇರಲಿ ನಿನ್ನ ಸಂಘ
ಬಾರೊ ಬಾರೊ ನನ್ನ ರಾಜ

Leave a Reply

Your email address will not be published. Required fields are marked *