ಜಗದ ಶಕ್ತಿಗಳೆಲ್ಲ – Jagada Shaktigalella Ondaagi Nintitho Song Lyrics – Dr Rajkumar

PK-Music

ಗಾಯನ: ಡಾ.ರಾಜ್ ಕುಮಾರ್
ಸಾಹಿತ್ಯ: ಚಿ. ಉದಯಶಂಕರ್

ಜಗದ ಶಕ್ತಿಗಳೆಲ್ಲ

ಒಂದಾಗಿ ನಿಂತಿತೋ
ಜಗವೆಲ್ಲಾ ಆಕ್ರಮಿಸಿ

ಆಕಾರ ಬಂದಿತೋ
ಕರಿಮುಗಿಲೆ ಕೇಶವೊ
ಸೂರ್ಯಚಂದ್ರರೇ ನಯನಗಳೊ
ಸುಳಿವ ಮಿಂಚುಗಳೆ ನಗೆಯೊ
ಸಿಡಿಲುಗುಡುಗಳೆಲ್ಲ

ನೀನಾಡುವ ನುಡಿಯೊ
ಮೇರುಪರ್ವತವೇ ನೀ ಹಿಡಿದ
ಗದೆಯೊ ಪಾದಕಮಲಗಳೆರಡು

ಪಾತಾಳದಲ್ಲಿದೆಯೊ
ಅಂಜನಾ ತನಯ..

ವೀರಾಂಜನೇಯ ಮಾರುತಿರಾಯ

ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಆಕಾರವೇನು
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಆಕಾರವೇನು
ಕಣ್ಣುಗಳೆಲ್ಲ ಕೋರೈಸುವ ಕಾಂತಿ
ಚೆಲ್ಲುವ ಭವ್ಯ ರೂಪವೇನು..
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಆಕಾರವೇನು
♬♬♬♬♬♬♬♬♬♬♬♬

ನೋಡುವ ಬಗೆ ಹೇಗೆ ನಿನ್ನ
ಬೇಡುವ ಬಗೆ ಹೇಗೆ ನಿನ್ನ
ಪಾದ ಹುಡುಕಲಾರೆ ಹನುಮ

ಮೊಗವ ಕಾಣಲಾರೆ

ನೋಡುವ ಬಗೆ ಹೇಗೆ ನಿನ್ನ
ಬೇಡುವ ಬಗೆ ಹೇಗೆ ನಿನ್ನ
ಪಾದ ಹುಡುಕಲಾರೆ ಹನುಮ

ಮೊಗವ ಕಾಣಲಾರೆ
ಕೋಟಿ ಕಣ್ಣು ಸಾಲದಯ್ಯ

ನಿನ್ನ ರೂಪ ತುಂಬಿಕೊಳಲು
ಹೇಗೆ ನಿನ್ನ ಕಾಣಲಯ್ಯ ಹೀಗೆ ನಿಲ್ಲಲು
ನಿಂತ ರೀತಿಯೋ

ತನುವ ಕಾಂತಿಯೋ
ಉರಿವ ಸೂರ್ಯ ಹಣತೆ

ದೀಪದಂತೆ ಕಾಣುತಿರಲು ಹೀಗೆ
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಆಕಾರವೇನೋ
♬♬♬♬♬♬♬♬♬♬♬♬


ನಿನ್ನ ಉಸಿರ ಬಿಸಿಗೆ ಹೆದರಿ

ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ

ಗಿರಿಗಳೆಲ್ಲ ನಡುಗುತಿರಲು
ನಿನ್ನ ಉಸಿರ ಬಿಸಿಗೆ ಹೆದರಿ
ನದಿಗಳಾವಿಯಾಗುತಿರಲು
ದಿವ್ಯ ರೂಪ ಕಂಡ

ಗಿರಿಗಳೆಲ್ಲ ನಡುಗುತಿರಲು
ನಿನ್ನ ಭಾರ ತಾಳೆನೆಂದು
ಭೂಮಿ ಕುಸಿದು ಹೋಗುತಿರಲು
ಎಲ್ಲಿ ನಾನು ನಿಲ್ಲಲಯ್ಯ

ನಿನ್ನ ನೋಡಲು
ರೋಮ ರೋಮದಿ ರಾಮನಾಮವು
ರೋಮ ರೋಮದಿ ರಾಮನಾಮವು
ಶಂಖನಾದ ತಾಳವಾದ್ಯ

ಶಂಖನಾದ ತಾಳವಾದ್ಯ +

ದಶದಿಕ್ಕಲು ಮೊಳಗುತಿರಲು
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಆಕಾರವೇನು
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಆಕಾರವೇನು
ಕಣ್ಣುಗಳೆಲ್ಲ ಕೋರೈಸುವ ಕಾಂತಿ
ಚೆಲ್ಲುವ ಭವ್ಯ ರೂಪವೇನು..
ಆಕಾಶ ಭೂಮಿಗಳ ಒಂದು ಮಾಡಿ
ನಿಂತ ನಿನ್ನ ಆಕಾರವೇನು
ನಿನ್ನ ಆಕಾರವೇನು
ನಿನ್ನ ಆಕಾರವೇನು

Leave a Reply

Your email address will not be published. Required fields are marked *