ಚಿತ್ರ: ಚೋರ ಚಿತ್ತ ಚೋರ
ಸಾಹಿತ್ಯ: ಶ್ರೀಚಂದ್ರು
ಸಂಗೀತ: ವಿ ರವಿಚಂದ್ರನ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಂ
ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ
ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ
ಸೊಗಸು ಅನ್ನೋದೇ ಅಂದದಾ
ಪ್ರಣಯ ಸಿಂಧೂರವೋ
ಹೇಳಮ್ಮ ಸಿರಿಸಿಂಗಾರಿ
ನೀ ಸಿಂಧೂರವೋ
ಹೃದಯ ಅನ್ನೋದೇ ಪ್ರೀತಿಯ
ಹೂವು ಶ್ರೀಗಂಧವೋ
ಹೇಳಮ್ಮ ಓ ಒಲವಮ್ಮ
ನೀ ಶ್ರೀಗಂಧವೋ
ಯಾವ ರೂಪ ನಿನ್ನದು ಹೇಳು ನೀನೀಗ
ನಿನ್ನ ತವರು ಎಲ್ಲಿದೆ ಹೇಳೇ ನೀ ಬೇಗ
ಹಸಿವು ನಿದುರೆ ದೂರ ಮಾಡೋ
ಸವತಿ ಯಾರೇ ನೀ ಯಾರೇ ಹೇ
ಹೇಳು ಬಾರೇ
ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ
ವಿರಹ ಅನ್ನೋದೇ ನಿನ್ನಯ
ಮಧುರ ಸಂಗೀತವೋ
ಹೇಳಮ್ಮ ಚೆಲುಚೆಲುವಮ್ಮ ನೀ ಸಂಗೀತವೋ
ಹರೆಯ ಅನ್ನೋದೇ ಪ್ರೇಮದ
ಧರೆಗೆ ಹೂಚೈತ್ರವೋ
ಹೇಳಮ್ಮ ಓ ಮನಸಮ್ಮ
ನೀ ಹೂಚೈತ್ರವೋ
ಕಾಳಿದಾಸ ಹಾಡಿದ ಪ್ರೀತಿ ನೀನೇನ
ಕುಂಚದಿಂದ ಮಿಂಚಿದ ಅಂದ ನೀನೇನ
ಚೆಂದಗಾತಿ ಪ್ರೇಮದೊಡತಿ
ಹೇಳೇ ಯಾರೇನೀ ಯಾರೇ ಹೇ
ಬಾರೇ ನೀರೇ
ಚೆಲುವಮ್ಮ ಚೆಂದದಮ್ಮ
ನಿನ್ನ ಹೆಸರೇ ಅಂದವಾ
ಮನಸಮ್ಮ ಮಾಸದಮ್ಮ
ನಿನ್ನ ಹೆಸರೇ ಪ್ರೇಮವಾ
ಕೇಳೋ ಕಾತುರ ಹಾಡೋ ಆತುರ
ನಿನ್ನ ಪ್ರೇಮದೋಲೆ ಹೆಸರ ಮೇಘಮಾಲೆ
Cheluvamma Chendadamma Lyrics
Cheluvamma Chendavamma Lyrics
Chaluvamma Chandavamma Lyrics