ಚೆಂದ ಚೆಂದ ಸಂಗಾತಿ – Chenda Chenda Sangathi Notave Song Lyrics in Kannada – Manasa Sarovara

PK-Music

ಚಿತ್ರ: ಮಾನಸ ಸರೋವರ
ಸಂಗೀತ: ವಿಜಯ ಭಾಸ್ಕರ್
ಸಾಹಿತ್ಯ: M N ವ್ಯಾಸರಾವ್
ಗಾಯನ:
ಜಯಚಂದ್ರನ್


ಚೆಂದ ಚೆಂದ
ಸಂಗಾತಿ ನೋಟವೆ ಚೆಂದ
ಅಂದ ಅಂದ
ಗುಲಾಬಿ ತೋಟವೆ ಅಂದ

ಚೆಂದ ಚೆಂದ
ಸಂಗಾತಿ ನೋಟವೆ ಚೆಂದ
ಅಂದ ಅಂದ
ಗುಲಾಬಿ ತೋಟವೆ ಅಂದ
♫♫♫♫♫♫♫♫♫♫♫♫

ಹಿಮದ ಮಣಿಗೆ
ಎಂದೆಂದು ತಾವರೆ ಧ್ಯಾನ
ರಸಿಕ ಮನಕೆ ಶೃಂಗಾರ

ಕಾವ್ಯದ ಧ್ಯಾನ
ಹಿಮದ ಮಣಿಗೆ
ಎಂದೆಂದು ತಾವರೆ ಧ್ಯಾನ
ರಸಿಕ ಮನಕೆ ಶೃಂಗಾರ

ಕಾವ್ಯದ ಧ್ಯಾನ
ದುಂಬಿಗೆ ಸುಮದ
ಮಕರಂದ ಹೀರುವ ಧ್ಯಾನ
ಗಿರಿಗೆ ಮುಗಿಲ

ಕೂಗಿ ಚುಂಬಿಸೊ ಧ್ಯಾನ
ಕೂಗಿ ಚುಂಬಿಸೊ ಧ್ಯಾನ
ಚೆಂದ ಚೆಂದ
ಸಂಗಾತಿ ನೋಟವೆ ಚೆಂದ
ಅಂದ ಅಂದ
ಗುಲಾಬಿ ತೋಟವೆ ಅಂದ
♫♫♫♫♫♫♫♫♫♫♫♫

ಬನಕೆ ಚೆಂದ ವಸಂತ

ಕೋಗಿಲೆ ಗಾನ
ಕವಿಯ ಕಲೆಗೆ ಚೆಲುವು

ನೀಡಿದ ಗಾನ
ಬನಕೆ ಚೆಂದ ವಸಂತ

ಕೋಗಿಲೆ ಗಾನ
ಕವಿಯ ಕಲೆಗೆ ಚೆಲುವು

ನೀಡಿದ ಗಾನ

ಭೂಮಿಗೆ ಸೂರ್ಯ
ಚೆಂದ್ರರ ಬೆಳಕಿನ ಗಾನ
ಪ್ರೇಮಿಗೆ ಪ್ರಿಯಳ
ಬಾಚಿ ಅಪ್ಪುವ ಧ್ಯಾನ
ಬಾಚಿ ಅಪ್ಪುವ ಧ್ಯಾನ
ಚೆಂದ ಚೆಂದ
ಸಂಗಾತಿ ನೋಟವೆ ಚೆಂದ
ಅಂದ ಅಂದ
ಗುಲಾಬಿ ತೋಟವೆ ಅಂದ
ಸಂಗಾತಿ ನೋಟವೆ ಚೆಂದ
ಗುಲಾಬಿ ತೋಟವೆ ಅಂದ
ಸಂಗಾತಿ ನೋಟವೆ ಚೆಂದ

Leave a Reply

Your email address will not be published. Required fields are marked *