ಚಂದಿರನಿಲ್ಲದ – Chandiranillada Song Lyrics In Kannada – Sogasugaara Movie Song Lyrics


ಚಿತ್ರ: ಸೊಗಸುಗಾರ

ಚಂದಿರನಿಲ್ಲದ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಒಬ್ಬ ಕುರುಡನು ನಾನಿಲ್ಲಿ
ಚಂದಿರನಿಲ್ಲದ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು …ಸುಳ್ಳು
ಕಾಣದ್ದು…ಸುಳ್ಳು
ನಿಜ ಹೇಳಲು ಬಾಯಿಲ್ಲ ನನಗಿಲ್ಲಿ
ದಿಕ್ಕಿಲ್ಲ ದೆಸೆಯಿಲ್ಲ
ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಒಬ್ಬ ಕುರುಡನು ನಾನಿಲ್ಲಿ
♫♫♫♫♫♫♫♫♫♫♫♫♫♫
ರಾತ್ರಿಗಳೆಲ್ಲ ಸುಖದ ಕನಸುಗಳಾಗಿ
ಮತ್ತೆ ಹಗಲುಗಳೆಲ್ಲ ದುಃಖದ
ನೆನಪುಗಳಾಗಿ

ಪಾಪದ ಎತ್ತಿನ ಬಂಡಿಯ ತಕ್ಕಡಿಯಾಗಿ
ಈ ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ
ಬಾಳೋದೆ……
ಇಲ್ಲಿ ದಿನದಿನಕ್ಕೂ ಕತೆಗಳಾಗಿ
ಕಾಣುತ್ತಮ್ಮ

ಮನುಷ್ಯನ ನಾಶಗಳೇ ವ್ಯತೆಗಳಾಗಿ
ಉಳಿಯುತ್ತಮ್ಮ

ವಿಧಿಯಾಟ ಹುಡುಗಾಟ
ಹೆತ್ತವರೆದೆಯಲಿ ಬೆಂಕಿಯ ಊಟ
ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಒಬ್ಬ ಕುರುಡನು ನಾನಲ್ಲಿ.
♫♫♫♫♫♫♫♫♫♫♫♫♫♫
ಅರ್ಥವಿಲ್ಲದಿರುವ ಲೋಕ ನಮ್ಮದು
ಇಲ್ಲಿ ಸ್ವಾರ್ಥ ಒಂದೇ ಬಡವನ ಆಳುವಂತದು
ಎಲ್ಲ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು
ಬಂದ ಹಾಗೆ ಪಡೆಯೋದೆ ದೇವರು ಕೊಟ್ಟಿದು
ನಂಬಿಕೆಯೇ…………
ಇಂತ ಮೂರು ಬಿಟ್ಟವರ ಕಾಯೋ ಊರುಗೋಲು
ಆದರೆ ಮೂರು ಬಿಟ್ಟವರ ಮುಂದೆ ಬುಡಮೇಲು
ಅದು ಯಾರೋ ಬರೆದೋರು
ಗಾಯದ ಮೇಲೆ ಬರೆ ಎಳೆದೋರು
ಚಂದಿರನಿಲ್ಲದ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಒಬ್ಬ ಕುರುಡನು ನಾನಿಲ್ಲಿ
ಕಂಡಿದ್ದು …ಸುಳ್ಳು
ಕಾಣದ್ದು…ಸುಳ್ಳು
ನಿಜ ಹೇಳಲು ಬಾಯಿಲ್ಲ ನನಗಿಲ್ಲಿ
ದಿಕ್ಕಿಲ್ಲ ದೆಸೆಯಿಲ್ಲ
ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ

ಚಂದಿರನಿಲ್ಲದ ಆ ಬಾನಿನಲ್ಲಿ
ಬೆಳದಿಂಗಳ ಹುಡುಕುವ
ಒಬ್ಬ ಕುರುಡನು ನಾನಿಲ್ಲಿ

Chandiranillada aa Baaninalli Song Lyrics
Chandira nillada Baaninalli Song Lyrics in kannada

Leave a Reply

Your email address will not be published. Required fields are marked *