ಚಿತ್ರ : ಮನ ಮೆಚ್ಚಿದ ಹುಡುಗಿ
ಗೌರಮ್ಮಾ…
ಗೌರಮ್ಮ ನಿನ್ನ ಗಂಡ ಯಾರಮ್ಮ
ಗೌರಮ್ಮ ನಿನ್ನ ಗಂಡ ಯಾರಮ್ಮ
ಗಂಡ ಎಂದ ಒಡನೆ
ಕೆನ್ನೆ ಕೆಂಪು ಯಾಕಮ್ಮ
ಗಂಡ ಎಂದ ಒಡನೆ
ಕೆನ್ನೆ ಕೆಂಪು ಯಾಕಮ್ಮ
ಓರೆ ನೋಟ ಏಕಮ್ಮ
ತುಟಿಯ ಮಿಂಚು ಏನಮ್ಮ
ಹೀಗೆ ನಾಚಿಕೆ… ಹೇಯ್
ಹೀಗೆ ನಾಚಿಕೆ ಏಕಮ್ಮಾ
ಇಂಥಾ ಮುದ್ದು ಹೆಣ್ಣಾ ಮನಸಾ
ಗೆದ್ದ ಭೂಪ ಯಾರಮ್ಮ
ಗೌರಮ್ಮ ನಿನ್ನ ಗಂಡ ಯಾರಮ್ಮ
ಗೌರಮ್ಮಾ ನಿನ್ನ ಗಂಡ ಯಾರಮ್ಮಾ
ಗಂಡ ಎಂದರವನೆ
ಗುಂಡು ಕಲ್ಲಿನಂತಮ್ಮ
ಗಂಡ ಎಂದರವನೆ
ಗುಂಡು ಕಲ್ಲಿನಂತಮ್ಮ
ಗಂಡು ಸಿಂಹ ಅವನಮ್ಮ
ಭಯದ ಮಾತೇ ಇಲ್ಲಮ್ಮ
ಎದುರು ನಿಲ್ಲೋರು…
ಎದುರು ನಿಲ್ಲೋರಿಲ್ಲಮ್ಮ
ಅವನ ಗೆಲ್ಲ ಬಲ್ಲ ಧೀರ
ಇನ್ನು ಹುಟ್ಟೆ ಇಲ್ಲಮ್ಮ
ಗೌರಮ್ಮ ನಿನ್ನ ಗಂಡ ಯಾರಮ್ಮ
ಗಂಗಮ್ಮ ನನ್ನ ಗಂಡ ಶಿವನಮ್ಮ
PK Music ಅರ್ಪಿಸುವ
ಕನ್ನಡ ಕರೋಕೆ
♫♫♫♫♫♫♫♫♫♫♫♫
321
ಏನಾ ಕಂಡು ಒಲಿದೆ
ನೀನು ಶಿವನಿಗೇ
ಅಪ್ಪ ಇಲ್ಲ ಅಮ್ಮ ಇಲ್ಲ
ಹೆಣ್ಣೇ ಅವನಿಗೆ
ಏನಾ ಕಂಡು ಒಲಿದೆ
ನೀನು ಶಿವನಿಗೇ
ಅಪ್ಪ ಇಲ್ಲ ಅಮ್ಮ ಇಲ್ಲ
ಹೆಣ್ಣೇ ಅವನಿಗೆ
ಹಣೆಯ ವಿಭೂತಿಯೋ
ಕೊರಳ ರುದ್ರಾಕ್ಷಿಯೋ
ತಿರಿದು ತಿನ್ನೋ ಗಂಡ ಕಂಡು
ಪ್ರೀತಿ ಹೇಗೆ ಬಂತಮ್ಮಾ
321
ಅವನ ಕಂಡ ಮೊದಲ
ದಿನವೇ ಸೋತೆನು
ಮೊಗ್ಗು ಹಿಗ್ಗಿ ಹೂವು
ಆದ ಹಾಗೇ ಆದೆನು
ಶಿವನ ಆಕಾರಕೆ
ಅವನ ಸವಿ ಮಾತಿಗೆ
ಎಲ್ಲಾ ಹೆಣ್ಣು ಸೋಲೋರೇನೆ
ನಾನೂ ಹಾಗೇ ಗಂಗಮ್ಮ
ಗೌರಮ್ಮ ನಿನ್ನ ಗಂಡ ಯಾರಮ್ಮಾ
ಗಂಗಮ್ಮ ನನ್ನ ಗಂಡ ಶಿವನಮ್ಮ
ಆಹಾ..
ಆಹಾ..
ಆಹಾ..
ಆಹಾ..
♫♫♫♫♫♫♫♫♫♫♫♫
321
ಬೆಳ್ಳಿ ಚಿನ್ನ ಕಂಡೋನಲ್ಲ
ಈ ತಿರುಕನು
ಹಾಲು ಹಣ್ಣು ಮಹಲು ಮಂಚ
ಒಂದೂ ಕಾಣನು
ಬೆಳ್ಳಿ ಚಿನ್ನ ಕಂಡೋನಲ್ಲ
ಈ ತಿರುಕನು
ಹಾಲು ಹಣ್ಣು ಮಹಲು ಮಂಚ
ಒಂದೂ ಕಾಣನು
ಗಂಡ ಅವನೆಂದರೆ
ನಿನಗೆ ಬಲು ತೊಂದರೆ
ನಾಳೆ ಬರುವ ಕಷ್ಟ ತಿಳಿಯದೆ
ಈಗ ದುಡುಕಬೇಡಮ್ಮಾ
321
ಹೊನ್ನು ಮಣ್ಣು ಎರಡೂ
ಒಂದೇ ಶಿವನಿಗೆ
ಮರದ ನೆರಳೆ ಮಹಲು
ಅವನ ಒಲಿದಾ ಹೆಣ್ಣಿಗೆ
ಊರೆ ಎದುರಾಗಲೀ
ಯಾರೇ ಹೋರಾಡಲೀ
ಶಿವನ ಕೈಯಾ ಹಿಡಿಯಲೆ ಭುವಿಗೆ
ಬಂದ ಹೆಣ್ಣು ಗೌರಮ್ಮ
ಗೌರಮ್ಮ ನಿನ್ನ ಗಂಡ ಯಾರಮ್ಮ
ಗಂಗಮ್ಮ ನನ್ನ ಗಂಡ ಶಿವನಮ್ಮ
ಗೌರಮ್ಮ ನಿನ್ನ ಗಂಡ ಯಾರಮ್ಮ
ಗಂಗಮ್ಮ ನನ್ನ ಗಂಡ ಶಿವನಮ್ಮಾ