ಚಿತ್ರ: ಮನ ಮೆಚ್ಚಿದ ಹುಡುಗಿ
ಗಾಯಕ: ಎಸ್. ಪಿ. ಬಾಲಸುಬ್ರಮಣ್ಯಂ
ಕೇಳಿ ಎಲ್ಲ ಕೇಳಿ… ಕೇಳಿ ಎಲ್ಲ ಕೇಳಿ…
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
ಕೇಳಿ ಎಲ್ಲ ಕೇಳಿ… ಕೇಳಿ ಎಲ್ಲ ಕೇಳಿ…
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
♫♫♫♫♫♫♫♫♫♫♫♫
ಹಾಲ ಕಡಲನ್ನು ಸುರರು ಕಡೆದಾಗ
ವಿಷವು ಯಮನಂತೆ ಮೇಲೆ ಬಂದಾಗ
ಹಾಲ ಕಡಲನ್ನು ಸುರರು ಕಡೆದಾಗ
ವಿಷವು ಯಮನಂತೆ ಮೇಲೆ ಬಂದಾಗ
ಅಯ್ಯೋ ಗತಿಯೇನು ನಮಗೆಂದು ಸುರರೆಲ್ಲ ಕೂಗಿ
ಸಾವು ಬಂತೆಂದು ನಡುಗುತ್ತ ಓಡೋಡಿ ಹೋಗಿ
ದೇವ ಜಗದೀಶ ಸರ್ವೇಶ ಕಾಪಾಡು ಏನೇ
ಶಿವನೇ ದಯೆ ತೋರಿದಾ… ಅಭಯವ ನೀಡಿದ
ಕ್ಷಣದಲೇ ವಿಷವನ್ನು ಹಾಲಂತೆ ಕುಡಿದಾ
ಸುರರನ್ನು ಕಾಪಾಡಿ ಶಿವನೇ ವಿಷಕಂಠ ತಾನಾದ
ಕೇಳಿ ಎಲ್ಲ ಕೇಳಿ… ಕೇಳಿ ಎಲ್ಲ ಕೇಳಿ….
♫♫♫♫♫♫♫♫♫♫♫♫
ಸಾವು ನೋವಿಲ್ಲಾ ನಿನಗೆ ಎದುರಿಲ್ಲಾ
ಶಿವನ ನಂಬಿದರೆ ಯಾರ ಭಯವಿಲ್ಲಾ
ಸಾವು ನೋವಿಲ್ಲಾ ನಿನಗೆ ಎದುರಿಲ್ಲಾ
ಶಿವನ ನಂಬಿದರೆ ಯಾರ ಭಯವಿಲ್ಲಾ
ವಯಸು ಹದಿನಾರು ಮುಗಿದಾಗ ಮುನಿ ಬಾಲನನ್ನು
ಕಂಡು ಯಮಧರ್ಮ ತನ್ನ ಪಾಶ ಎಸೆದಾಗ ಅವನು
ಅಯ್ಯೋ ಮಹಾದೇವ ಸಾಕೆಂದು ಅತ್ತಾಗ ಮಗುವು
ಶಿವನು ತನ್ನ ಶೂಲವ… ಬೀಸಿ ಎಸೆದಾಗಲೇ
ಯಮನು ಅಪರಾಧ ತನ್ನದೆಂದು ತಲೆ ಬಾಗಿದಾಗ
ಮಾರ್ಕಂಡೇಯ ಕೈ ಮುಗಿದ ಆ ಶಿವನ ಕೊಂಡಾಡಿದ
ಕೇಳಿ ಎಲ್ಲ ಕೇಳಿ… ಕೇಳಿ ಎಲ್ಲ ಕೇಳಿ…
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
ಕೇಳಿ ಎಲ್ಲ ಕೇಳಿ… ಕೇಳಿ ಎಲ್ಲ ಕೇಳಿ…
ಶಿವನೆಂದು ಹಾಡಿದರೆ ಸಂತೋಷ
ಶಿವನೆಂದು ಕೂಗಿದರೆ ಉಲ್ಲಾಸ
ಶಿವ ನಾಮ ಒಂದೇ ನಿನ್ನನ್ನು
ಕಾಪಾಡೋ ಶಕ್ತಿ ಎಂದೆಂದೂ
ನಂಬಿದರೇ ಕೈಲಾಸ
ಶಿವನ ನಂಬಿದರೇ ಕೈಲಾಸ
Keli yella Keli Song Lyrics