ಕಾಣದ ಊರಲಿ… – Kaanada oorali Song Lyrics – Gandhinagara Kannada Movie Lyrics


ಚಿತ್ರ: ಗಾಂಧಿ ನಗರ
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಕಾಣದ ಊರಲಿನೀ ಕುಳಿತಿರುವೆ
ಎಲ್ಲರ ಕಥೆಯನೀ ಬರೆದಿರುವೆ
ಎಂದೂ ಮುಗಿಯದ
ಬಾಳ ನಾಟಕವ ಆಡಿಸುತಿರುವೆ
ನೀ ನೋಡುತಲಿರುವೆ  ಹ್ ಹ್ ಹ್ ದೇವಾ..
ಕಾಣದ ಊರಲಿನೀ ಕುಳಿತಿರುವೆ
ಎಲ್ಲರ ಕಥೆಯನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ…..ನೀ ನೋಡುತಲಿರುವೆ….
♫♫♫♫♫♫♫♫♫♫
ತಪ್ಪುಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ
ತಪ್ಪುಮಾಡುವುದು ಒಬ್ಬನಾದರೆ
ದಂಡನೆ ಪಡೆವುದು ಇನ್ಯಾರೋ
ದುಡಿಯುವ ಶಾಪಕೆ ಒಬ್ಬನಾದರೆ
ಸುಖಿಸುವ ವರಕೆ ಇನ್ಯಾರೋ
ನೀತಿ ನ್ಯಾಯವೆ ಕಾಣದಾಗಿದೆ
ಲೋಕದಲಿ ಕಾಲದಲಿ
ಕಾಣದ ಊರಲಿನೀ ಕುಳಿತಿರುವೆ
ಎಲ್ಲರ ಕಥೆಯ…. ನೀ ಬರೆದಿರುವೆ
ಎಂದೂ ಮುಗಿಯದ ಬಾಳ ನಾಟಕವ
ಆಡಿಸುತಿರುವೆ  ನೀ ನೋಡುತಲಿರುವೆ
♫♫♫♫♫♫♫♫♫♫
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಸತ್ಯಕಾಗಿ ಹೋರಾಡುವ ಜನರ
ಬಾಯಿಗೆ ಬೀಗವ ಹಾಕಿರುವೆ
ಒಲವಿನ ಮೊಗ್ಗು ಅರಳುವಾಗಲೆ
ಬಿರುಗಾಳಿಯನು ಬೀಸಿರುವೆ
ಪ್ರೀತಿ ಪ್ರೇಮವೆ ಇಲ್ಲವಾಗಿದೆ
ನಿನ್ನ ಕಥೆಯಲಿ ಏನು ಹೇಳಲಿ
ಕಾಣದ ಊರಲಿನೀ ಕುಳಿತಿರುವೆ
ಎಲ್ಲರ ಕಥೆಯನೀ ಬರೆದಿರುವೆ
ಎಂದೂ ಮುಗಿಯದ
ಬಾಳ ನಾಟಕವ ಆಡಿಸುತಿರುವೆ ಹ್ ಹ್
ನೀ ನೋಡುತಲಿರುವೆ
ನೀ ನೋಡುತಲಿರುವೆ
ನೀ ನೋಡುತಲಿರುವೆ

Kaanada oorali Song Karaoke ⇩

Kaanada oorali Nee kulitiruve Song Lyrics
Kanada oorali Nee kulitiruve Song Lyrics
Kanada urali Nee kulitiruve Song Lyrics
Gandhinagara Kannada Movie Lyrics
Gaandhinagara Kannada Movie Lyrics
Gaandinagara Kannada Movie Lyrics
Gandinagara Kannada Movie Lyrics in Kannada

Leave a Reply

Your email address will not be published. Required fields are marked *