Music : B Ajaneesh Lokanath
ಕಾಗದದ ದೋಣಿಯಲ್ಲಿ
ನಾ ಕೂರುವಂತ ಹೊತ್ತಾಯಿತೇ…
ಕಾಣಿಸದ ಹನಿಯೊಂದು
ಕಣ್ಣಲ್ಲೇ ಕೂತು ಮುತ್ತಾಯಿತೇ…
ಹಗುರಾದೀತೇನೋ ನನ್ನೆದೆಯ ಭಾರ
ಕಂಡಿತೇನೋ ತಂಪಾದ ತೀರಾ…
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೆ ವಿಸ್ಮಯ ತೋರಿ
ಹಾದಿಯಲಿ ಹೆಕ್ಕಿದ ನೆನಪಿನ
ಪುಟ್ಟ ಜೋಳಿಗೆ ಬೆನ್ನಲ್ಲಿದೆ
ಆಡದಿರೊ ಸಾವಿರ ಪದಗಳ
ಮೂಖ ಸೇತುವೆ ಕಣ್ಮುಂದಿದೆ
ಈ ಹೆಜ್ಜೆಯ ಗುರುತೆಲ್ಲವ
ಅಳಿಸುತ್ತಿರೋ ಮಳೆಗಾಲವೇ
ನಾ ನಿನ್ನಯ ಮಡಿಲಲ್ಲಿರೋ
ಬರಿಗಾಲಿನ ಮಗುವಾಗುವೆ
ಮನಸಾದೀತೇನೋ ಇನ್ನೂ ಉದಾರ
ಬಂದಿತೇನೋ ನನ್ನ ಬಿಡಾರ
ಸಿಕ್ಕೀತೆ ಮುಂದಿನ ದಾರಿ
ನನ್ನೆಲ್ಲ ಕಲ್ಪನೆ ಮೀರಿ
ಇನ್ನೊಂದೆ ವಿಸ್ಮಯ ತೋರಿ