ಕರುನಾಡೇ ಕೈ ಚಾಚಿದೆ – Karunaade Kai Chaachide Node Song Lyrics in Kannada – Malla Kannada Movie

ಚಿತ್ರ: ಮಲ್ಲ

ಸಂಗೀತ: ವಿ.ರವಿಚಂದ್ರನ್
ಗಾಯನ: ಎಲ್.ಎನ್.
ಶಾಸ್ತ್ರಿ


ಕರುನಾಡೇ ಕೈ ಚಾಚಿದೆ ನೋಡೆ
ಹಸಿರುಗಳೇ ಆ ತೋರಣಗಳೇ
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ…
ಮಣ್ಣಿನಾ ಕೂಸು ನಾ
ಕರುನಾಡೇ ಎದೆ ಹಾಸಿದೆ ನೋಡೆ
ಹೂವುಗಳೇ ಶುಭ ಕೋರಿವೆ ನೋಡೆ
♫♫♫♫♫♫♫♫♫♫♫♫    
ಮೇಘವೇ ಮೇಘವೇ ಸೂಜಿಮಲ್ಲಿಗೆ
ಭೂಮಾತೆಯ ಮುಡಿಗೆ ಮೈಸೂರ ಮಲ್ಲಿಗೆ
ಸ೦ಪಿಗೆ ಸ೦ಪಿಗೆ ಕೆ೦ಡಸ೦ಪಿಗೆ
ಭೂಮಾತೆಯ ಕೆನ್ನೆಯೇ  ನಮ್ಮೂರಸ೦ಪಿಗೆ
ಕಾವೇರಿಯಾ ಮಡಿಲಲ್ಲಿ ಹ೦ಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಮಣ್ಣಿನಾ ಕೂಸು ನಾ
ಕರುನಾಡೇ ಎದೆ ಹಾಸಿದೆ ನೋಡೆ
ಹೂವುಗಳೇ ಶುಭ ಕೋರಿವೆ ನೋಡೆ
♫♫♫♫♫♫♫♫♫♫♫♫   
ಮೂಡಣ ಸೂರ್ಯನೇ  ಅರಿಶಿಣ ಭ೦ಡಾರ
ಪಡುವಣ ಸೂರ್ಯನೇ ಕು೦ಕುಮ ಭ೦ಡಾರ
ಕಾಮನ ಬಿಲ್ಲು ರ೦ಗೋಲಿ ಹಾಸಿದೆ
ಮಣ್ಣಿನ ವಾಸನೆ ಶ್ರೀಗ೦ಧದಂತಿದೆ
ಕಾವೇರಿಯಾ ಮಡಿಲಲ್ಲಿ ಹ೦ಬಲಿಸಿದೆ ನಾನೂ
ಕನಸುಗಾರನಾಗಿ ಕರುನಾಡಲ್ಲೇ
ಮತ್ತೇ ಹುಟ್ಟಬೇಕು ನಾನು
ಬೀಸೋ ಗಾಳಿ ಚಾಮರ ಬೀಸಿದೆ
ಹಾಡೋ ಹಕ್ಕಿ ಸ್ವಾಗತ ಕೋರಿದೇ
ಮಣ್ಣಿನಾ ಕೂಸು ನಾ

Leave a Reply

Your email address will not be published. Required fields are marked *