ಕನ್ನಡ ನಾಡಿನ ವೀರರಮಣಿಯ – Kannada Naadina VeeraRamaniya Song Lyrics in Kannada – Nagara Haavu Kannada Movie

ಚಿತ್ರ: ನಾಗರ ಹಾವು
ಗಾಯನ: ಪಿ ಬಿ ಶ್ರೀನಿವಾಸ್
ಸಾಹಿತ್ಯ: ಚಿ  ಉದಯ ಶಂಕರ್


ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ


ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಚಿತ್ರದುರ್ಗದ ಕಲ್ಲಿನ ಕೋಟೆ
ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ
ಮದಿಸಿದ ಕರಿಯ ಮದವಡಗಿಸಿದ
ಮದಕರಿ ನಾಯಕರಾಳಿದ ಕೋಟೆ
ಪುಣ್ಯ ಭೂಮಿಯು ಬೀಡು
ಸಿದ್ದರು ಹರಸಿದ ಸಿರಿನಾಡು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

ವೀರಮದಕರಿ ಆಳುತಲಿರಲು
ಹೈದಾರಾಲಿಯು ಯುಧ್ಧಕೆ ಬರಲು
ಕೋಟೆ ಜನಗಳ ರಕ್ಷಿಸುತಿರಲು
ಸತತ ದಾಳಿಯು ವ್ಯರ್ಥವಾಗಲು
ವೈರಿ ಚಿಂತೆಯಲಿ ಬಸವಳಿದ
ದಾರಿಕಾಣದೆ ಮಂಕಾದ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
♫♫♫♫♫♫♫♫♫♫♫♫
ಗೂಢಚಾರರು ಅಲೆದು ಬಂದರು
ಹೈದಾರಾಲಿಗೆ ವಿಷಯ ತಂದರು
ಚಿತ್ರದುರ್ಗದ ಕೋಟೆಯಲಿ
ವಾಯುವ್ಯ ದಿಕ್ಕಿನೆಡೆ ನೋಡು ಎಂದರು
ಕಳ್ಳಗಂಡಿಯ ತೋರಿದರು
ಲಗ್ಗೆ ಹತ್ತಲು ಹೇಳಿದರು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
♫♫♫♫♫♫♫♫♫♫♫♫
ಸುತ್ತ ಮುತ್ತಲು ಕಪ್ಪು ಕತ್ತಲೆ ಮುತ್ತಿರಲು
ವೀರ ಕಾವಲು ಗಾರ ಭೋಜನಕೆ ನಡೆದಿರಲು
ಸಿಹಿ ನೀರು ತರಲೆಂದು ಅವನ ಸತಿ ಬಂದಿರಲು
ಕಳ್ಳಗಂಡಿಯ ಹಿಂದೆ ಪಿಸುಮಾತು ಕೇಳಿದಳು
ಆಲಿಸಿದಳು ಇಣುಕಿದಳು
ವೈರಿ ಪಡೆಯು ಕೋಟೆಯತ್ತ
ಬರುವುದನ್ನು ಕಂಡಳು
♫♫♫♫♫♫♫♫♫♫♫♫
ಕೈಗೆ ಸಿಕ್ಕಿದ ಒನಕೆ ಹಿಡಿದಳು
ವೀರ ಗಚ್ಚೆಯ ಹಾಕಿ ನಿಂದಳು
ದುರ್ಗಿಯನ್ನು ಮನದಲ್ಲಿ ನೆನೆದಳು
ಕಾಳಿಯಂತೆ ಬಲಿಗಾಗಿ ಕಾದಳು
ಯಾರವಳು ಯಾರವಳು
ವೀರ ವನಿತೆ ಓಬವ್ವಾ
ದುರ್ಗವು ಮರೆಯದ ಓಬವ್ವಾ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

♫♫♫♫♫♫♫♫♫♫♫♫
ತೆವಳುತ ಒಳಗೆ ಬರುತಿರೆ ವೈರೀ
ಒನಕೆಯ ಬೀಸಿ ಕೊಂದಳು ನಾರಿ
ಸತ್ತವನನ್ನು ಎಳೆದು ಹಾಕುತಾ
ಮತ್ತೇ ನಿಂತಳು ಹಲ್ಲು ಮಸೆಯುತಾ
ವೈರಿ ರುಂಡ ಚೆಂಡಾಡಿದಳು
ರಕುತದ ಕೋಡಿ ಹರಿಸಿದಳು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ
♫♫♫♫♫♫♫♫♫♫♫♫

ಸತಿಯ ಹುಡುಕುತ ಕಾವಲಿನವನು
ಗುಪ್ತ ದ್ವಾರದ ಬಳಿಗೆ ಬಂದನೂ
ಮಾತು ಬಾರದೆ ಬೆಚ್ಚಿ ನಿಂತನೂ
ಹೆಣದ ರಾಶಿಯ ಬಳಿಯೇ ಕಂಡನು
ರಣಚಂಡಿ ಅವತಾರವನು
ಕೋಟೆ ಸಲುಹಿದ ತಾಯಿಯನು
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

♫♫♫♫♫♫♫♫♫♫♫♫
ರಣ ಕಹಳೆಯನು ಊದುತಲಿರಲೂ
ಸಾಗರದಂತೆ ಸೈನ್ಯ ನುಗ್ಗಲೂ
ವೈರಿಪಡೆಯು ನಿಷ್ಯೇಶವಾಗಲೂ
ಕಾಳಗದಲ್ಲಿ ಜಯವನು ತರಲೂ
ಅಮರಳಾದಳು ಓಬವ್ವ
ಚಿತ್ರದುರ್ಗದ ಓಬವ್ವ
ಕನ್ನಡ ನಾಡಿನ ವೀರರಮಣಿಯ
ಗಂಡು ಭೂಮಿಯ ವೀರ ನಾರಿಯ
ಚರಿತೆಯ ನಾನು ಹಾಡುವೆ

Leave a Reply

Your email address will not be published. Required fields are marked *