ಕನ್ನಡಕೆ ಹೋರಾಡು ಕನ್ನಡದ ಕಂದ – Kannadake horadu kannadada kanda Lyrics – C Ashwath Song Lyrics – KUVEMPU

Song: Kannadake Horadu
Program: Anantha Gaana
Singer: C. Ashwath
Music Director: Mysore Ananthaswamy
Lyricist : Kuvempu
Music Label : Lahari Music


ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹರಕೆಯಿದು………
ಜೋಗುಳದ ಹರಕೆಯಿದು ಮರೆಯದಿರು ಚಿನ್ನ
ಮರೆತೆಯಾದರೆ ಅಯ್ಯೊ
ಮರೆತಂತೆ
ನನ್ನ
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ರನ್ನ ಪಂಪರ ನಚ್ಚು ಕನ್ನಡದ ಸೊಲ್ಲು…
ಕನ್ನಡದ
ಸೊಲ್ಲು…
ಬಸವದೇವನ ಮೆಚ್ಚು ಹರಿಹರನ ಗೆಲ್ಲುಹರಿಹರನ ಗೆಲ್ಲು…
ನಾರಣಪ್ಪನ ಕೆಚ್ಚು ಬತ್ತಳಿಕೆ ಬಿಲ್ಲು…………
ಕನ್ನಡವ ಕೊಲ್ಲುವ ಮುನ್ ಓ ನನ್ನ ಕೊಲ್ಲು ನನ್ನ ಕೊಲ್ಲು
ಕನ್ನಡವ ಕೊಲ್ಲುವ ಮುನ್ ಓ ನನ್ನ ಕೊಲ್ಲು ನನ್ನ ಕೊಲ್ಲು
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ನೆವವು ಏನಾದರೇನ್ ಹೊರನುಡಿಯು ಹೊರೆಯೈ… ಹೊರನುಡಿಯು ಹೊರೆಯೈ…
ನಿನ್ನ ನಾಡೊಡೆಯನೀನ್ ವೈರಿಯನು ತೊರೆಯೈ… ವೈರಿಯನು ತೊರೆಯೈ…
ಕನ್ನಡದ ನಾಡಿನಲಿ ಕನ್ನಡವ ಮೆರೆಯೈ……..
ತಾಯ್ಗಾಗಿ ಹೋರಾಡಿ ತಾಯ್ನುಡಿಯ ಪೊರೆಯೈ… ತಾಯ್ನುಡಿಯ ಪೊರೆಯೈ…
ತಾಯ್ಗಾಗಿ ಹೋರಾಡಿ ತಾಯ್ನುಡಿಯ ಪೊರೆಯೈ… ತಾಯ್ನುಡಿಯ ಪೊರೆಯೈ…
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ದಮ್ಮಯ್ಯ ಕಂದಯ್ಯ ಬೇಡುವೆನು ನಿನ್ನ……..
ಕನ್ನಡಮ್ಮನ ಹರಕೆ ಮರೆಯದಿರು ಚಿನ್ನ, ಮರೆಯದಿರು ಚಿನ್ನ
ಮರೆತೆಯಾದರೆ ಅಯ್ಯೊ ಮರೆತಂತೆ ನನ್ನ…..
ಹೋರಾಡು ಕನ್ನಡಕೆ ಕಲಿಯಾಗಿ ರನ್ನ… ಕಲಿಯಾಗಿ ರನ್ನ…
ಹೋರಾಡು ಕನ್ನಡಕೆ ಕಲಿಯಾಗಿ ರನ್ನ… ಕಲಿಯಾಗಿ ರನ್ನ…
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ
ಜೋಗುಳದ ಹರಕೆಯಿದು………
ಜೋಗುಳದ ಹರಕೆಯಿದು ಮರೆಯದಿರು ಚಿನ್ನ
ಮರೆತೆಯಾದರೆ ಅಯ್ಯೊ
ಮರೆತಂತೆ
ನನ್ನ
ಕನ್ನಡಕೆ ಹೋರಾಡು ಕನ್ನಡದ ಕಂದ
ಕನ್ನಡವ ಕಾಪಾಡು ನನ್ನ ಆನಂದ

Kannadammana Harake Lyrics in kannada
Kannadake horadu kannadada kanda Lyrics
Kannadake horaadu kannadada kanda Lyrics
Kannadake horaadu kannadada kanda Lyrics in kannada
Kannadake horadu Song Lyrics
Kannadake horadu song Lyrics in Kannada
C Ashwath song Lyrics in kannada

Leave a Reply

Your email address will not be published. Required fields are marked *