ಕನಸಿನ ಹುಡುಗಿ – Kannada Kavanagalu – ಕನ್ನಡ ಕವನಗಳು – Kavana #1 – Kanasina Hudugi –


Kanasina Hudugi – ಕನಸಿನ ಹುಡುಗಿ

-ಪ್ರಸನ್ನ ಕುಮಾರ್


ಹೇ ಹುಡುಗಿ
ಯಾರೇ ನೀನು
ಕನಸಲಿ
ನೀನಾ..? ಕನಸೇ ನೀನಾ..??
ಕನಸಲಿ
ಕನವರಿಸಿದವನು ನಾನು
ಕನಸಿಗೆ
ಕನವರಿಕೆ ಕಲಿಸಿದವಳು ನೀನು
ಈ ಅನುಭವಕೆ
ಏನೆಂದು ಹೆಸರಿಡಲಿ
ಪ್ರೀತಿನಾ..?
ದ್ವೇಷನಾ..??
ಪ್ರೀತಿಯ
ಕಾವು ಕೊಡುತ್ತಿರುವೆಯೋ      
 

ದ್ವೇಷದ
ನೋವು ನೀಡುತ್ತಿರುವೆಯೋ..
ಕನಸಲಿ
ಕವನ ಬರೆದವನು ನಾನು
ಕನಸಿಗೆ
ಕಾಗುಣಿತ ಕಲಿಸಿದವಳು ನೀನು
ಚಂದಿರನ
ಬೆಳಕು ನೀನು
ಕಣ್ಣಿಗೆ
ಹೊಳಪು ನೀನು
ಕಾರಂಜಿ
ಕಡಲಲ್ಲಿ ಕಾರ್ಮೋಡ ನೀನು
ಕರಿಮೋಡ
ದಲ್ಲಿ ಬೆಳ್ಳಿಚುಕ್ಕಿ ನೀನು
ಸಮಯ ವ್ಯರ್ಥ
ವಾದರೂ ಅರ್ಥವಾಗುತ್ತಿಲ್ಲ
ಚರ್ಮ
ಸುಲಿದರೂ ಮರ್ಮ ತಿಳಿಯುತ್ತಿಲ್ಲ
ಹಸಿವಾದರೂ
ಊಟ ಸೇರುತ್ತಿಲ
ಕಣ್ಣಲ್ಲಿ
ಕಂಡರೂ ಎದುರಲ್ಲಿ ನೀನಿಲ್ಲ
ಆಡೋದು ಬಾಯಾದ್ರೂ ನುಡಿಯೋದು ಮನಸೇನೆ
ನೋಡೋದು ಕಣ್ಣಾದ್ರೂ ಮಿಡಿಯೋದು ಹೃದಯಾನೆ
ಕಾಣೋದು ನಾನಾದ್ರು ಜೀವ ನಿಂದೇನೆ
ನಾನೀಗ ಕವಿಯಾದ್ರೂ ಕಾವ್ಯ ನೀನೇನೆ
ದೇವರು ಹೃದಯಾನ ಬಚ್ಚಿಟ್ಟು
ಭಾವನೆಗಳ ಬಿಚ್ಚಿಟ್ಟು, ಕಣ್ಣಲ್ಲಿ ಕನಸಿಟ್ಟು
ನಿನ್ನನ್ನು ನನ್ನೆದುರು ಬಿಟ್ಟ
ನೀ ನನ್ನ ದೇವತೆ
ಬಚ್ಚಿಟ್ಟ ಹೃದಯ ದಲಿ ಗೂಡು ಕಟ್ಟಿ
ಬಿಚ್ಚಿಟ್ಟ ಭಾವನೆಗಳಿಗೆ ಬಣ್ಣ ಹಚ್ಚಿ
ಕನಸಿಗೆ ಜೋಗುಳ ಹಾಡಿ
ನಿನ್ನೆದುರು ಬಂದಾಗ ನಾಚುವ ಹಾಗೆ ಮಾಡಿದೆ
ನೀ ನನಗೆ ಸಿಕ್ಕರೆ ಬಾಳು ಸಕ್ಕರೆ
ನೀ ಸಿಗದಿದ್ದರೆ ಬಾಳೆಲ್ಲ ಕಣ್ಣೀರೆ
ನೀ ನನ್ನ ಬಾಳಲ್ಲಿ ಬಂದರೂ ದೂರಾದರೂ
ಕನಸಲ್ಲಾದರೂ ನೀ ನನ್ನವಳಾಗಿರು

  

ಬರೀ ಕನಸಲ್ಲೇ ಜೀವಿಸುತ್ತಿರುವ ಜೀವಕೆ
ಇದೆ ಕಣೆ ನಿನ್ನ ಸೇರುವ ಬಯಕೆ
ನೀನು ನನ್ನೆದುರು ಬಂದಾಗ
ಬಾಯಲ್ಲಿ ಮಾತೆ ಹೊರಡಲ್ಲ ಯಾಕೆ
ಪ್ರೀತಿಯಿಂದ ಬಂದಾಗ
ಸೃಷ್ಟಿಕರ್ತನಿಗೂ ಪ್ರೀತಿಯುಟ್ಟಬಹುದು
ಪ್ರೇಮದಿಂದ ಕಂಡಾಗ
ಯಮನೂ ಕೂಡ ಬದುಕಲು ಅವಕಾಶ ನೀಡಬಹುದು
ನಿನ್ನ ಪ್ರೀತಿಯಲ್ಲಿ ಬಿದ್ದಿರುವ ನನ್ನೊಳಗೆ
ಒಬ್ಬ ಪ್ರೇಮಿ ಸೃಷ್ಟಿ ಯಾಗಿರಬಹುದು
ನೀ ದೂರಾದ ಮರು ಕ್ಷಣವೇ
ನನ್ನನ್ನೇ ಕೊಲ್ಲಬಹುದು
ಕಣ್ಣಲ್ಲೇ ಒಂದು ಫೋಟೋ ತೆಗೆದೆ
ನಿನ್ನನ್ನು ಕೇಳಲಿಲ್ಲ
ಎದೆಯ ಗೋಡೆಯ ಮೇಲೆ ಅಂಟಿಸಿದೆ
ನಾನಿನ್ನೂ ಕೀಳಲಿಲ್ಲ
ನನ್ನ ಪ್ರೀತಿಯನ್ನು ಬಾಯಿಂದ ಹೇಳಲು ಹೊರಟರೆ
ನಾಲಿಗೆಗೆ ಪ್ರೀತಿಯ ಅರಿವಿಲ್ಲ
ಹೃದಯದಿಂದ ಹೇಳಲು ಹೊರಟರೆ
ಹೃದಯಕ್ಕೆ ಮಾತೇ ಇಲ್ಲ

 -ಪ್ರಸನ್ನ ಕುಮಾರ್

Kannada Kavanagalu
ಕನ್ನಡ ಕವನಗಳು
Kanasina Hudugi
ಕನಸಿನ ಹುಡುಗಿ
Kannada Kavithegalu
Kavitegalu
Kannada Saahitya
Love Quotes
Dream Girl
Love Poems
Love Poetry
Shayari 

Leave a Reply

Your email address will not be published. Required fields are marked *