ಓ ನಲ್ಲೆ ಸವಿನುಡಿಯ – O nalle savinudiya Lyrics in Kannada – Druvathaare Kannada Movie Songs Lyrics

ಚಿತ್ರ:
ಧೃವತಾರೆ

ಗಾಯನ : ಡಾ.ರಾಜ್, ವಾಣಿ ಜೈರಾಂ

ನಲ್ಲೆಸವಿನುಡಿಯ ಹೇಳೆ
ಮಾತಲ್ಲೇ ಹೊಸ ಹರುಷ ನೀಡೆ
ಬದುಕಲ್ಲಿ ಇಂದು ಸಡಗರವ
ನೀ ತಂದೆ ನನಗೆ
ನಲ್ಲೆ… ಸವಿನುಡಿಯ ಹೇಳೆ
ಮಾತಲ್ಲಿ ಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ
ನೀ ತಂದೆ ನನಗೆ
ನಲ್ಲೆಸವಿನುಡಿಯ ಹೇಳೆ
♫♫♫♫♫♫♫♫♫♫♫♫

ನಿನ್ನಾ ನಯನದಲ್ಲಿ ಏನೋ ಕಾಂತಿ
ನನ್ನ ಸೆಳೆವಂತೆ
ನಿನ್ನಾ ಅಧರದಲ್ಲಿ ಏನೋ ಹೊಳಪು
ನನ್ನ ಕರೆವಂತೆ
ನಿನ್ನಾ ಬಯಕೆ ಏನು ಆಸೆ
ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು
ಹೇಳು ಬಾ ಇಲ್ಲಿ
ಮರೆಯೊಳಗೆ ಅಡಗಿರುವ
ಹಸುಮಗುವು ನಗುವ ನಿಮ್ಮ ನುಡಿಗೆ

ನಲ್ಲಾ… ಸವಿನುಡಿಯ ಹೇಳಿ
ಮಾತಲ್ಲೇಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ
ನೀ ತಂದೆ ನನಗೆ
ನಲ್ಲೆಸವಿನುಡಿಯ ಹೇಳೆ
♫♫♫♫♫♫♫♫♫♫♫♫

ಕಂದಾ ಮನೆಗೆ ಬಂದ ಸುಖವ

ತಂದ ನಮ್ಮ ಬಾಳಲ್ಲಿ
ತನ್ನ ನಗುವಿನಿಂದ ಬೆಳಕ

ತಂದ ನಮ್ಮ ಮನದಲ್ಲಿ
ಲಾಲಿ ಹಾಡು ಕಂದ

ಇಂದಿನಿಂದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು

ಕಾಣುವಾಗ ಏನೋ ಸಂತೋಷ
ಮಗನಿರುವ ಸಡಗರದಿ

ಇನಿಯನನು ಮರೆಯಬೇಡ ಚೆಲುವೆ
ನಲ್ಲೇ… ಸವಿನುಡಿಯ ಹೇಳೆ
ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇಂದು ಸಡಗರವ
ನೀ ತಂದೆ ನನಗೆ
ನಲ್ಲೆ
ನಲ್ಲಾ
ನಲ್ಲೆ
ನಲ್ಲಾ
ಹ್ ನಲ್ಲೆ
ಹ್ ನಲ್ಲಾ
...

 

Leave a Reply

Your email address will not be published. Required fields are marked *