ಒಲುಮೆ ಪೂಜೆಗೆಂದೆ – Olume Poojegende Lyrics – Anupama Kannada Movie – Ananth Nag – S Janaki



ಒಲುಮೆ ಪೂಜೆಗೆಂದೆ ಕರೆಯ ಕೇಳಿ ಬಂದೆ

ರಾಗ ತಾನ ಪ್ರೇಮ ಗಾನ ಸಂಜೀವನ

ಒಲುಮೆ ಪೂಜೆಗೆಂದೆ ಕರೆಯ ಕೇಳಿ ಬಂದೆ

ರಾಗ ತಾನ ಪ್ರೇಮ ಗಾನ ಸಂಜೀವನ

 

ಮಮತೆ ಮೀಟಿ ಮಿಲನ ಕಂಡೆ

ನಿನ್ನ ಸ್ನೇಹ ಸೌಭಾಗ್ಯ ಮುಂದೆ

ಹರೆಯ ಕೂಗಿ ಸನಿಹ ಬಂದೆ

ಎಲ್ಲಾ ಪ್ರೀತಿ 
ಸಮ್ಮೋಹ ತಂದೆ

ಹರುಷ ತಂದ ಹಾದಿಯೇ ಚಂದ

ಹರುಷ ತಂದ ಹಾದಿಯೇ ಚಂದ

ಒಲವಿನಾಸರೆ ರೋಮಾಂಚ ಬಂಧ

 

ಒಲುಮೆ ಪೂಜೆಗೆಂದೆ ಕರೆಯ ಕೇಳಿ ಬಂದೆ

ರಾಗ ತಾನ ಪ್ರೇಮ ಗಾನ ಸಂಜೀವನ

 

ಜೊತೆಯ ಸೇರಿ ಬರುವೆ ನಾನು

ನನ್ನ ಬಾಳ ಬಂಗಾರ ನೀನು

ಬೆಳಕು ನೀನು ಕಿರಣ ನಾನು

ನಿನ್ನ ಕೂಡಿ ಹೊಂಬಿಸಲ ಬಾನು

ನಿನಗೆ ನಾನು ನನಗೆ ನೀನು

ನಿನಗೆ ನಾನು ನನಗೆ ನೀನು

ಪ್ರೇಮ ಜೀವನ ಎಂದೆಂದೂ ಜೇನು

ಒಲುಮೆ ಪೂಜೆಗೆಂದೆ ಕರೆಯ ಕೇಳಿ ಬಂದೆ

ರಾಗ ತಾನ ಪ್ರೇಮ ಗಾನ ಸಂಜೀವನ


Olume poojegende karaoke 

 

Leave a Reply

Your email address will not be published. Required fields are marked *