ಒಂದೇ ಬಾರಿ ನನ್ನ ನೋಡಿ – Onde baari nanna nodi Lyrics in Kannada – Da Ra Bendre

ಒಂದೇ ಬಾರಿ ನನ್ನ ನೋಡಿ
ಮಂದ ನಗೆ ಹಾಂಗ ಬೀರಿ
ಒಂದೇ ಬಾರಿ ನನ್ನ ನೋಡಿ
ಮಂದ ನಗೆ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ
ಹಿಂದ ನೋಡದ ಗೆಳತಿ ಹಿಂದ ನೋಡದ
ಮುಂದ ಮುಂದ ಮುಂದ ಹೋದ
ಹಿಂದ ನೋಡದ ಗೆಳತಿ ಹಿಂದ ನೋಡದ
ಹಿಂದ ನೋಡದ ಗೆಳತಿ ಹಿಂದ ನೋಡದ..
ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತ ಅತ್ತ ಹೋಗುವಂಡ
ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತ ಅತ್ತ ಹೋಗುವಂಡ
ಹೋತಾ ಮನಸು ಅವನ ಹಿಂದ
ಹಿಂದ ನೋಡದ ಗೆಳತಿ ಹಿಂದ ನೋಡದ
ಹೋತಾ ಮನಸು ಅವನ ಹಿಂದ
ಹಿಂದ ನೋಡದ ಗೆಳತಿ ಹಿಂದ ನೋಡದ
ಹಿಂದ ನೋಡದ ಗೆಳತಿ ಹಿಂದ ನೋಡದ..
ನಾನದ ನನಗ ಎಚ್ಚರಿಲ್ಲ
ಮಂದಿ ಗೊಡವಿ ಏನ ನನಗ
ನಾನದ ನನಗ ಎಚ್ಚರಿಲ್ಲ
ಮಂದಿ ಗೊಡವಿ ಏನ ನನಗ
ಒಂದೇ ಅಳತಿ ನಡೆದಾದ ಚಿತ್ತ
ಹಿಂದ ನೋಡದ ಗೆಳತಿ ಹಿಂದ ನೋಡದ
ಒಂದೇ ಅಳತಿ ನಡೆದಾದ ಚಿತ್ತ
ಹಿಂದ ನೋಡದ ಗೆಳತಿ ಹಿಂದ ನೋಡದ
ಹಿಂದ ನೋಡದ ಗೆಳತಿ ಹಿಂದ ನೋಡದ..
ಸೂಜಿ ಹಿಂದ ದಾರಾಧಾಂಗ
ಕೊಳದೊಳಗ ಜಾರಿಧಾಂಗ
ಸೂಜಿ ಹಿಂದ ದಾರಾಧಾಂಗ
ಕೊಳದೊಳಗ ಜಾರಿಧಾಂಗ
ಹೋತಾ ಹಿಂದ ಬಾರಧಾಂಗ
ಹಿಂದ ನೋಡದ ಗೆಳತಿ ಹಿಂದ ನೋಡದ
ಹೋತಾ ಹಿಂದ ಬಾರಧಾಂಗ
ಹಿಂದ ನೋಡದ ಗೆಳತಿ ಹಿಂದ ನೋಡದ
ಹಿಂದ ನೋಡದ ಗೆಳತಿ.. ಹಿಂದ ನೋಡದ..
ಒಂದೇ ಬಾರಿ ನನ್ನ ನೋಡಿ
ಮಂದ ನಗೆ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ
ಹಿಂದ ನೋಡದ ಗೆಳತಿ.. ಹಿಂದ ನೋಡದ
ಹಿಂದ ನೋಡದ ಗೆಳತಿ.. ಹಿಂದ ನೋಡದ..
 

Leave a Reply

Your email address will not be published. Required fields are marked *