ಒಂದು ಅನುರಾಗದ ಕಾವ್ಯ – Ondu anuragada kavya Song Lyrics in kannada – Shrigandha Movie song Lyrics

ಚಿತ್ರ: ಶ್ರೀಗಂಧ

ಒಂದು ಅನುರಾಗದ ಕಾವ್ಯ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ

ಒಂದು ಅಪರೂಪದ ಶಿಲ್ಪ ಅಂದ
ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ

ಶ್ರೀಗಂಧ ಶ್ರೀಗಂಧ ಶ್ರೀಗಂಧ
ಅಂದ ಅಂದ ಶ್ರೀಗಂಧ


ಒಂದು ಅನುರಾಗದ ಕಾವ್ಯ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
♬♬♬♬♬♬♬♬♬♬♬♬♬♬♬♬

ಸರಳವಾಗಿ ಸಾಗುವ
ಹೃದಯ ತುಂಬಿ ಅರಳುವ
ಕುಸುಮ ಕಾವ್ಯ ಕನ್ನಿಕೆ

ಒಂದು ಮೂಕ ಭಂಗಿಗೆ
ಕೋಟಿ ಭಾವ ತೆರೆಯುವ
ಚತುರ ಶಿಲಾ ಬಾಲಿಕೆ
ಓದಿದರೆ ಓಲೈಸುವ
ನೋಡಿದರೆ ಪೂರೈಸುವ
ಮೆಚ್ಚಿದರೆ ಮನ್ನಿಸುವ
ಮುಟ್ಟಿದರೆ ಕಂಪಿಸುವ
ಕವಿ ಶಿಲ್ಪಿ ಕಾಣಿಕೆ…..

ಶ್ರೀಗಂಧ ಶ್ರೀಗಂಧ ಶ್ರೀಗಂಧ
ಅಂದ ಅಂದ ಶ್ರೀಗಂಧ

ಒಂದು ಅನುರಾಗದ ಕಾವ್ಯ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ
♬♬♬♬♬♬♬♬♬♬♬♬♬♬♬♬


ಕಮಲಕೊಂದು ಸೊಗಸಿದೆ
ನವಿಲಿಗೊಂದು ಚೆಲುವಿದೆ
ಎರಡು ನಿನ್ನಲಡಗಿದೆ

ಹಣ್ಣಿಗೊಂದು ರಂಗಿದೆ
ಮಣ್ಣಿಗೊಂದು ಸೊಗಡಿದೆ
ಎರಡು ನಿನಗೆ ಒಲಿದಿದೆ
ಕೋಗಿಲೆಗೆ ಕಂಠವಿದೆ
ಕಸ್ತೂರಿಗೆ ಕಂಪು ಇದೆ
ಭೂರಮೆಗೆ ಚೈತ್ರವಿದೆ
ರಮೆಗೆ ಅಂದವಿದೆ
ನಿನ್ನಂದ ನಿನ್ನದೆ …….

ಶ್ರೀಗಂಧ ಶ್ರೀಗಂಧ ಶ್ರೀಗಂಧ
ಅಂದ ಅಂದ ಶ್ರೀಗಂಧ

ಒಂದು ಅನುರಾಗದ ಕಾವ್ಯ ಅಂದ
ಕಾವ್ಯದ ಮೈಯ ತುಂಬೆಲ್ಲಾ ಶ್ರೀಗಂಧ

ಒಂದು ಅಪರೂಪದ ಶಿಲ್ಪ ಅಂದ
ಶಿಲ್ಪದ ಮೈಯ ತುಂಬೆಲ್ಲಾ ಶ್ರೀಗಂಧ

Leave a Reply

Your email address will not be published. Required fields are marked *