ಎಲ್ಲೋ ದೂರದಿ ಜಿನುಗುವ ಹನಿಗಳೆ – Yello Dooradhi Song Lyrics – C Ashwath Song Lyrics

Song: Yello Dooradhi
Program: Nenapinaaladalli
Singer: Chinmay Athreyas
Music: C Ashwath
Lyricist: G S Shivarudrappa
Music Label : Lahari Music


ಎಲ್ಲೋ ದೂರದಿ ಜಿನುಗುವ ಹನಿಗಳೆ…
ಬನ್ನಿ ಬನ್ನಿ ಬಿರುಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಹಸುರೇಳಲಿ ನವುರಾಗಿ
ಹೊಸ ಹಸುರೇಳಲಿ ನವುರಾಗಿ
ಎಲ್ಲೋ ದೂರದಿ ಜಿನುಗುವ ಹನಿಗಳೆ…
ಬನ್ನಿ ಬನ್ನಿ ಬಿರುಮಳೆಯಾಗಿ
ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ
ಹೊಸ ಹಸುರೇಳಲಿ ನವುರಾಗಿ
ಹೊಸ ಹಸುರೇಳಲಿ ನವುರಾಗಿ
ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತಗಳಾಗಿ
ಎಲ್ಲೋ ದೂರದಿ ಜಿನುಗುವ ದನಿಗಳೆ
ಬನ್ನಿ ಬನ್ನಿ ರಸಗೀತಗಳಾಗಿ
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿರಿ ಚೆಲು ಬೆರಳಾಗಿ
ಮೌನದಿ ಮಲಗಿದ ವಾದ್ಯವೃಂದಗಳ
ಮೇಲಾಡಿರಿ ಚೆಲು ಬೆರಳಾಗಿ
ಎಲ್ಲೋ ದೂರದಿ ಜಿನುಗುವ ಹನಿಗಳೆ…
ಬನ್ನಿ ಬನ್ನಿ ಬಿರುಮಳೆಯಾಗಿ
ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಬೊಗರಾಗಿ
ಎಲ್ಲೋ ದೂರದಿ ಮಿನುಗುವ ಕಿಡಿಗಳೆ
ಬನ್ನಿ ಬನ್ನಿ ಹೊಂಬೊಗರಾಗಿ
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳ ಹೊರಗನು ಬೆಳಗಿ
ಹಣತೆ ಹಣತೆಗಳ ತುಟಿಯೊಳು ಕುಡಿನಗೆ
ಮಿಂಚಿಸಿ ಒಳಹೊರಗನು ಬೆಳಗಿ
ಎಲ್ಲೋ ದೂರದಿ ಜಿನುಗುವ ಹನಿಗಳೆ…
ಬನ್ನಿ ಬನ್ನಿ ಬಿರುಮಳೆಯಾಗಿ
ಎಲ್ಲೋ ದೂರದಿ ಚಿಕ್ಕೆಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೇ… ಬನ್ನಿ ನನ್ನೆದೆಗೆ
ಎಲ್ಲೋ ದೂರದಿ ಚಿಕ್ಕೆಗೆಜ್ಜೆಗಳ
ಕಟ್ಟಿ ನರ್ತಿಸುವ ಹೆಜ್ಜೆಗಳೇ… ಬನ್ನಿ ನನ್ನೆದೆಗೆ
ಲಾಸ್ಯವನ್ನಾಡಿರಿ ಚಿಮ್ಮಲಿ ನಲವಿನ ಬುಗ್ಗೆಗಳೇ
ಲಾಸ್ಯವನ್ನಾಡಿರಿ ಚಿಮ್ಮಲಿ ನಲವಿನ ಬುಗ್ಗೆಗಳೇ
ಚಿಮ್ಮಲಿ ನಲವಿನ ಬುಗ್ಗೆಗಳೇ
ಚಿಮ್ಮಲಿ ನಲವಿನ ಬುಗ್ಗೆಗಳೇ

Ello Dooradi Song Lyrics in Kannada
C Ashwath Song Lyrics 
Ello Dooradi Jinuguva hanigale Song Lyrics in Kannada
Yello Dooradhi Jinuguva hanigale Song Lyrics in Kannada

Leave a Reply

Your email address will not be published. Required fields are marked *