ಎಲ್ಲೋ ಅದು ಎಲ್ಲೋ – Ello Adu Ello Song Lyrics – Kanasugaara

ಚಿತ್ರ: ಕನಸುಗಾರ
ರವಿಚಂದ್ರನ್, ಪ್ರೇಮ, ಶಶಿಕುಮಾರ್
ಸಂಗೀತ: ರಾಜೇಶ್ ರಾಮನಾಥ್
ಗಾಯಕಿ: ಕೆ ಎಸ್ ಚಿತ್ರಾ
ಸಾಹಿತ್ಯ: ಕೆ ಕಲ್ಯಾಣ್

ಎಲ್ಲೋ ಅದು ಎಲ್ಲೋ

ಕಿವಿ ತುಂಬೋ ರಾಗ

ಕೇಳೋ ಕ್ಷಣವೆಲ್ಲಾ

ಸವಿ ನೆನಪಿನ ಶುಭಯೋಗ

ಎಲ್ಲೋ ಅದು ಎಲ್ಲೋ

ಕಿವಿ ತುಂಬೋ ರಾಗ

ಕೇಳೋ ಕ್ಷಣವೆಲ್ಲಾ

ಸವಿ ನೆನಪಿನ ಶುಭಯೋಗ

ಕಣ್ಗಳ ಗೂಡಿನಲಿ

ಹೊಸ ರಾಗದ ಚಿಲಿಪಿಲಿಯೋ

ಉಸಿರಿನ ಹಾಡಿನಲಿ

ಅನುರಾಗದ ಕಚಗುಳಿಯೋ

ನೆನಪೇ ನನ್ನ ಮೈ ಪುಳಕ

ನೆನಪೆ ನನ್ನ ಮೈ ಜಳಕ

ನೆನಪೇ ನನ್ನ ಧನಕನಕ

ನೆನಪು ಒಂದೆ ಕೊನೆತನಕ

ಎಲ್ಲೋ ಅದು ಎಲ್ಲೋ

ಕಿವಿ ತುಂಬೋ ರಾಗ

ಕೇಳೋ ಕ್ಷಣವೆಲ್ಲಾ

ಸವಿ ನೆನಪಿನ ಶುಭಯೋಗ

♬♬♬♬♬♬♬♬♬♬♬♬

321

ಅಮ್ಮ ಮುತ್ತಿಟ್ಟ

ಕೈ ತುತ್ತಿನ ಸವಿ ನೆನಪು

ಗುಮ್ಮಾ ಬಂದಾಗ

ಮಡಿಲೇರಿದ ಸವಿ ನೆನಪು

ಮರಳಿನ ಗೂಡಿಗೆ ಮಳೆ

ಸುರಿದಾಗ ಅತ್ತಂತ ನೆನಪು

ಸೀರೆಯುಟ್ಟು ಜಾರಿ ಬಿದ್ದ

ನೆನಪೇ ಸಂಭ್ರಮ

ಕಾಗದದ ದೋಣಿ ಕಟ್ಟೋ

ನೆನಪೇ ಅನುಪಮ

ಯಾರೋ ಬರೆದೋರು

ನನ್ನೆದೆಯ ಲಾಲಿ

ಕೇಳೋ ಕ್ಷಣವೆಲ್ಲಾ

ಸವಿ ನೆನೆಪಿನ ರಂಗೋಲಿ

♬♬♬♬♬♬♬♬♬♬♬♬

321

ಓಡೋ ರೈಲಿನಲಿ

ಪದ ಹಾಡಿದ ಸವಿ ನೆನಪು

ಸುತ್ತೋ ರಾಟೆಯಲಿ

ತಲೆ ಸುತ್ತಿದ ಸವಿ ನೆನಪು

ಓದದೇ ಪಾಸಾಗಲು

ನವಿಲುಗರಿ ಇಟ್ಟಂತ ನೆನಪು

ಕನಸಿನಲ್ಲಿ ಬೆಚ್ಚಿ ಬಿದ್ದ

ನೆನಪೇ ಸಂಭ್ರಮ

ಆಟದಲ್ಲಿ ಸೋತು ಗೆದ್ದ

ನೆನಪೇ ಅನುಪಮ

ಎಲ್ಲೋ ಅದು ಎಲ್ಲೋ

ಕಿವಿ ತುಂಬೋ ರಾಗ

ಕೇಳೋ ಕ್ಷಣವೆಲ್ಲಾ

ಸವಿ ನೆನಪಿನ ಶುಭಯೋಗ

ಎಲ್ಲೋ ಅದು ಎಲ್ಲೋ

ಕಿವಿ ತುಂಬೋ ರಾಗ

ಕೇಳೋ ಕ್ಷಣವೆಲ್ಲಾ

ಸವಿ ನೆನಪಿನ ಶುಭಯೋಗ

ಕಣ್ಗಳ ಗೂಡಿನಲಿ

ಹೊಸ ರಾಗದ ಚಿಲಿಪಿಲಿಯೋ

ಉಸಿರಿನ ಹಾಡಿನಲಿ

ಅನುರಾಗದ ಕಚಗುಳಿಯೋ

ನೆನಪೇ ನನ್ನ ಮೈ ಪುಳಕ

ನೆನಪೇ ನನ್ನ ಮೈ ಜಳಕ

ನೆನಪೇ ನನ್ನ ಧನಕನಕ

ನೆನಪು ಒಂದೆ ಕೊನೆತನಕ

ಎಲ್ಲೋ ಅದು ಎಲ್ಲೋ

ಕಿವಿ ತುಂಬೋ ರಾಗ

ಕೇಳೋ ಕ್ಷಣವೆಲ್ಲಾ

ಸವಿ ನೆನಪಿನ ಶುಭಯೋಗ

 

Leave a Reply

Your email address will not be published. Required fields are marked *