Album : Haribhaktisara
Song : Ellaru Maduvudu Hottegagi Genu Battegagi
Singer : Shri Ananth Kulkarni
Lyricist : Shri Kanaka Dasaru
Music : —
Type : #KanakaDasaJayanti
Label / Banner : Gaanasampada Live Cassettes
Marketed by : Gaanasampada Devotional
ಎಲ್ಲಾರು
ಮಾಡುವುದು ಹೊಟ್ಟೆಗಾಗಿ
ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ಎಲ್ಲಾರು
ಮಾಡುವುದು ಹೊಟ್ಟೆಗಾಗಿ
ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ವೇದಶಾಸ್ತ್ರ
ಪಂಚಾಂಗವ ಓದಿಕೊಂಡು ಪರರಿಗೆ
ಬೋಧನೆಯ
ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ಚಂಡಭಟರಾಗಿ
ನಡೆದು ಕತ್ತಿ ಡಾಲು ಕೈಲಿ ಹಿಡಿದು
ಖಂಡ
ತುಂಡ ಮಾಡುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ಎಲ್ಲಾರು
ಮಾಡುವುದು ಹೊಟ್ಟೆಗಾಗಿ
ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ಎಲ್ಲಾರು
ಮಾಡುವುದು ಹೊಟ್ಟೆಗಾಗಿ
ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ಬೆಲ್ಲದಂತೆ
ಮಾತನಾಡಿ ಎಲ್ಲರನ್ನು ಮರುಳುಮಾಡಿ
ಸುಳ್ಳು
ಬೊಗಳಿ ತಿಂಬುವುದು ಹೊಟ್ಟೆಗಾಗಿ…
ಸನ್ಯಾಸಿ
ಜಂಗಮ ಜೋಗಿ ಜಟ್ಟಿ ಮೊಂಡ ಬೈರಾಗಿ
ನಾನ
ವೇಷ ಹಾಕುವುದು ಹೊಟ್ಟೆಗಾಗಿ ಗೇಣುಬಟ್ಟೆಗಾಗಿ
ಎಲ್ಲಾರು
ಮಾಡುವುದು ಹೊಟ್ಟೆಗಾಗಿ
ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ಎಲ್ಲಾರು
ಮಾಡುವುದು ಹೊಟ್ಟೆಗಾಗಿ
ಹೊಟ್ಟೆಗಾಗಿ
ಗೇಣು ಬಟ್ಟೆಗಾಗಿ
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ
ಮೆರೆಯುವುದು ಹೊಟ್ಟೆಗಾಗಿ
ಅಂದಣ ಪಲ್ಲಕ್ಕಿ ಏರಿ ಮಂದಿ ಮಾರ್ಬಲ ಕೂಡಿ
ಚಂದದಿಂದ
ಮೆರೆಯುವುದು ಹೊಟ್ಟೆಗಾಗಿ
ಉನ್ನತ
ಕಾಗಿನೆಲೆಯಾದಿ ಕೇಶವನಾ ದ್ಯಾನವನ್ನು
ಮನಮುಟ್ಟಿ
ಮಾಡುವುದು ಮುಕ್ತಿಗಾಗಿ ಆನಂದಕಾಗಿ