ಹಾಡು
: ಎನ್ನ ಬಿನ್ನಪ ಕೇಳು
ಸಂಗೀತ :
ಪು. ನರಸಿಂಹ ನಾಯಕ್
ಸಾಹಿತ್ಯ
: ಶ್ರೀ ಗೋಪಾಲ ದಾಸರು
ಎನ್ನ ಬಿನ್ನಪ ಕೇಳು
ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲಾ
ಬಣ್ಣ ಬಡಿಸುವ ರೋಗವನ್ನುಮೋಚನ
ಮಾಡಿ ಚೆನ್ನಾಗಿ ಪಾಲಿಸುವುದು
ವಿಭುವೆ ಚೆನ್ನಾಗಿ ಪಾಲಿಸುವುದು
♫♫♫♫♫♫♫♫♫♫♫♫
ವಸುಮತಿಯ ಮೇಲಿನ್ನು
ಅಸುರ ಜನರೆ ಬಹಳ
ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ
ಶಿಶುಗಳು ನಾವಿರ್ಪೆವೋ
ಅಸುರಾರಿ ನಿನ್ನ ಕರುಣಾಮ್ರತದ
ಮಳೆಗರೆದು ಕುಶಲದಲಿ ಪಾಲಿಪುವುದೋ
ಕೆಸರಿಂದ ಕೆಸರ ತೊಳೆದಂತೆ
ಕರ್ಮದಪಥವು ಅಸುನಾಥ ಹರಿಯೆ
ಪೊರೆಯೋ ಸ್ವಾಮಿ
ಎನ್ನ ಬಿನ್ನಪ ಕೇಳು
ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲಾ
ಬಣ್ಣ ಬಡಿಸುವ ರೋಗವನ್ನುಮೋಚನ
ಮಾಡಿ ಚೆನ್ನಾಗಿ ಪಾಲಿಸುವುದು
ವಿಭುವೆ ಚೆನ್ನಾಗಿ ಪಾಲಿಸುವುದು
♫♫♫♫♫♫♫♫♫♫♫♫
ಆದಿವ್ಯಾಧಿಗಳು ಉನ್ಮಾದ ವಿಭ್ರಮ
ನಾನಾ ಬಾಧೆಗೌಷದನು ನೀನೆ
ಹೇ ದೇವ ನಿನ್ನ ಕರಕಲಶ ಸುಧೆಯನು
ಎರೆದು ಸಾಧುಗಳ ಸಂತೈಸುವೆ
ಮೋದ ಪಡಿಸುವಿ ನಿನ್ನ ಸಾಧಿಸುವರಿಗೆ
ಶುಭೋದಯಂಗಳನ್ನು ಮಾಡಿ
ಆದರಿಸಿ ಇವಗೆ ತವ ಪಾದ
ಧ್ಯಾನವನಿತ್ತು ಸಾಧುಗಳ ಒಳಗಿಟ್ಟು
ಮೋದ ಕೊಡು ಸರ್ವದ
ಎನ್ನ ಬಿನ್ನಪ ಕೇಳು
ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲಾ
ಬಣ್ಣ ಬಡಿಸುವ ರೋಗವನ್ನುಮೋಚನ
ಮಾಡಿ ಚೆನ್ನಾಗಿ ಪಾಲಿಸುವುದು
ವಿಭುವೆ ಚೆನ್ನಾಗಿ ಪಾಲಿಸುವುದು
♫♫♫♫♫♫♫♫♫♫♫♫
ನಿನ್ನವರಲಿ ಇವಗೆ ಇನ್ನು ರತಿಯನು
ಕಂಡು ನಿನ್ನವನೆಂದು ಅರಿದೂ
ನಿನ್ನ ನಾ ಪ್ರಾರ್ಥಿಸಿದೆ ಅನ್ಯರಿಗೆ
ಅಲ್ಪರಿಯೆ ಎನ್ನ ಪಾಲಿಸುವ ದೊರೆಯೇ
ಎನ್ನ ಮಾತಲ್ಲವಿದು
ಎನ್ನ ಹಿರಿಯರ ಮಾತು
ಮನ್ನಿಸಬೇಕು ಕರುಣಿ
ಅನಂತಗುಣಪೂರ್ಣ
ಗೋಪಾಲವಿಠ್ಠಲನೇ
ಇನ್ನಿದನು ಪಾಲಿಸಯ್ಯಾ ಜೀಯ
ಎನ್ನ ಬಿನ್ನಪ ಕೇಳು
ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲಾ
ಬಣ್ಣ ಬಡಿಸುವ ರೋಗವನ್ನುಮೋಚನ
ಮಾಡಿ ಚೆನ್ನಾಗಿ ಪಾಲಿಸುವುದು
ವಿಭುವೆ ಚೆನ್ನಾಗಿ ಪಾಲಿಸುವುದು
ವಿಭುವೆ ಚೆನ್ನಾಗಿ ಪಾಲಿಸುವುದು
ವಿಭುವೆ ಚೆನ್ನಾಗಿ ಪಾಲಿಸುವುದು
ವಿಭುವೆ ಚೆನ್ನಾಗಿ ಪಾಲಿಸುವುದು
Enna Binnapa Kelu Song Karaoke with Scrolling Lyrics
Yenna Binnapa Kelu Song Lyrics