ಚಿತ್ರ: ಸ್ಪಂದನ
ಸಂಗೀತ : ಸಿ.ಅಶ್ವಥ
ಸಾಹಿತ್ಯ : ಲಕ್ಷ್ಮೀನಾರಾಯಣಭಟ್ಟ
ಗಾಯನ : ಎಸ್.ಪಿ.ಬಾಲು
ಎಂಥಾ ಮರುಳಯ್ಯಾ
ಇದು ಎಂಥ ಮರುಳು…
ಬೆಳಗಿನ ಹಿಮದಂತೆ ಹರಿವ ನೆರಳು
ಥಳ ಥಳ ಮಿನುಗಿ ಸೋಕಲು ಕರಗಿ
ಥಳ ಥಳ ಮಿನುಗಿ ಸೋಕಲು ಕರಗಿ
ಹರಿವುದು ಈ ಬಾಳಿನೆಲ್ಲಾ ತಿರುಳು…
ಹರಿವುದು ಈ ಬಾಳಿನೆಲ್ಲಾ ತಿರುಳು…
ಎಂಥಾ ಮರುಳಯ್ಯಾ
ಇದು ಎಂಥ ಮರುಳು..
♫♫♫♫♫♫♫♫♫♫♫♫
ಹರಿಯುವ ನೀರಿಗೆ ಯಾವ ಹೊಣೆ..
ಹಾರುವ ಹಕ್ಕಿಗೆ ಎಲ್ಲಿ ಮನೆ…
ಬಾಳಿನ ಕಡಲಿನ…
ಬಾಳಿನ ಕಡಲಿನ ತೆರೆಗಳ ಸೀಳಿ
ತಲಪುವುದಾಚೆಯ ದಡದಾ ಕೊನೆ
ತಲಪುವುದಾಚೆಯ ದಡದಾ ಕೊನೆ
ಎಂಥಾ ಮರುಳಯ್ಯಾ
ಇದು ಎಂಥ ಮರುಳು…
♫♫♫♫♫♫♫♫♫♫♫♫
ಸಂಜೆಯ ನೇಸರ ಬಣ್ಣದ ನೀಲಿ
ನೀರಲಿ ಹಾರುತ ಬೆಳ್ಳಕ್ಕಿ ತೇಲಿ
ಕಡಲಿಗೆ ಸಾಲಾಗೀ….
ಕಡಲಿಗೆ ಸಾಲಾಗಿ
ಮೂಡುತ ಮುಳುಗುತ
ಬೆನ್ನಟ್ಟಿ ಸಾಗುವ ತೆರೆಗಳ ಹಾಡೇ
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ
ಸೃಷ್ಟಿಯ ಸುಂದರ ಸುಳ್ಳಿನ ಮಾಲೆ
ಎಂಥಾ ಮರುಳಯ್ಯಾ
ಇದು ಎಂಥ ಮರುಳು…
ಬೆಳಗಿನ ಹಿಮದಂತೆ
ಹರಿವ ನೆರಳು…
ಥಳ ಥಳ ಮಿನುಗಿ ಸೋಕಲು ಕರಗಿ
ಥಳ ಥಳ ಮಿನುಗಿ ಸೋಕಲು ಕರಗಿ
ಹರಿವುದು ಈ ಬಾಳಿನೆಲ್ಲಾ ತಿರುಳು
ಹರಿವುದು ಈ ಬಾಳಿನೆಲ್ಲಾ ತಿರುಳು
ಎಂಥಾ ಮರುಳಯ್ಯಾ
ಇದು ಎಂಥ ಮರುಳು..
ಆಆಆಆ……
ಆಆ………ಆ……