ಊರ ಕಾಯೋ ಮುತ್ತೈದೆ – Oora Kaayo mutthaide Lyrics in Kannada – Naaga Devathe Song Lyrics – Prema



ಊರ ಕಾಯೋ ಮುತ್ತೈದೆ ಅಣ್ಣಮ್ಮ
ಅಣ್ಣಮ್ಮ

ಬಾರಮ್ಮ ಅಣ್ಣಮ್ಮ

ಮಳೆಯ ಕಾಯೋ ಮುತೈದೆ ಮಾರಮ್ಮ
ಮಾರಮ್ಮ

ಬಾರಮ್ಮ ಬಾರಮ್ಮ

ಕರೆದಾಗ ಮುತ್ತೈದೆ ಹೋಗದೇನೆ
ಇರಬೋದೇ

 

ಬಾರಮ್ಮ ಹೋಗೋಣ ಕುಂಕುಮ
ಕಾಯೋಣ

ಊರ ಕಾಯೋ ಮುತ್ತೈದೆ ಅಣ್ಣಮ್ಮ

ಅಣ್ಣಮ್ಮ ಬಾರಮ್ಮ ಅಣ್ಣಮ್ಮ

ಮಳೆಯ ಕಾಯೋ ಮುತ್ತೈದೆ
ಮಾರಮ್ಮ ಮಾರಮ್ಮ

ಬಾರಮ್ಮ ಬಾರಮ್ಮ

ಬನ ಬನ ಬನ ಬನ

ಬನ ಬನ ಬನ ಬನ

ಬನ ಬನ ಬನ ಬನ

ಬನಶಂಕರಿ…….ಬಾ

ಅಂಬಾ ಅಂಬಾ ಅಂಬಾ

ಎಲ್ಲಮ್ಮ ಎಲ್ಲಮ್ಮ ಬಾರಮ್ಮ
ಎಲ್ಲಮ್ಮ….ಅಂಬಾ

ದಿನ ಬೆಳಗಾಗಿ ಪ್ರತಿ
ಮುತ್ತೈದೆ

ನಮ್ಮನ್ನು ತಾನೆ ನೆನಿತಾಳೆ

ಎದೆಯೊಳಗಾಗೋ ಕದನವನ್ನೆಲ್ಲ

ನಮಗೆ ತಾನೆ ಹೇಳುತಾಳೆ

ನಾರಿಯ ಕುಲವಿರದೆ ಗುಡಿಗಳಿಗೆ
ಬೆಳಕಿಲ್ಲ

ಭಕ್ತರೇ ಇರದಿದ್ರೆ ದೈವಗಳ
ಕುಲವಿಲ್ಲ

ಅರಿಶಿಣ ಕುಂಕುಮ ಹೂವು
ಬಳೆ ಅಕ್ಷತೆ

ಉಡಿ ತುಂಬಿಕೊಳ್ಳೋಣ ತಾಳಿನ
ಕಾಯೋಣ

ತಾಳಿ ಕಾಯೋ ಮುತ್ತೈದೆ
ಎಲ್ಲಮ್ಮ ಎಲ್ಲಮ್ಮ

ಬಾರಮ್ಮ ಎಲ್ಲಮ್ಮ

ಹೊಸಿಲು ಕಾಯೋ ಮುತ್ತೈದೆ
ಲಕ್ಕಮ್ಮ ಲಕ್ಕಮ್ಮ

ಬಾಮ್ಮ ಅಟ್ಟಿ ಲಕ್ಕಮ್ಮ

 

ವ್ರತಗಳ ಮೇಲೆ ವ್ರತಗಳ
ಮಾಡಿ

ಪತಿವ್ರತೆಯಾಗಿ ಬಾಳುತಾಳೆ

ಕಲ್ಲೋ ಮಣ್ಣೋ ಮರವೋ ಮಟ್ಟೋ

ನಾವೆ ಎಂದು ಮುಗಿತಾಳೆ

ಅವಳ ಆ ನಂಬಿಕೆಯೇ ನಮ್ಮಗಳ
ಉಸಿರಮ್ಮ

ಆ ನಂಬಿಕೆಯ ಉಳಿಸಿದರೆ
ನಮಗೆ ತಾನೆ ಹೆಸರಮ್ಮ

ಕರೆದಾಗ ಮುತ್ತೈದೆ ಹೋಗದೇನೆ
ಇರಬೋದೇ

ಬಾರಮ್ಮ ಹೋಗೋಣ ಅರಿಶಿಣ
ಉಳಿಸೋಣ

ಊರ ಕಾಯೋ ಮುತ್ತೈದೆ ಅಣ್ಣಮ್ಮ
ಅಣ್ಣಮ್ಮ

ಅಣ್ಣಮ್ಮ ಅಣ್ಣಮ್ಮ

 

ಮಳೆಯ ಕಾಯೋ ಮುತ್ತೈದೆ
ಮಾರಮ್ಮ ಮಾರಮ್ಮ

ಮಾರಮ್ಮ ಮಾರಮ್ಮ

ತಾಳಿ ಕಾಯೋ ಮುತೈದೆ ಎಲ್ಲಮ್ಮ
ಎಲ್ಲಮ್ಮ

ಎಲ್ಲಮ್ಮ ಎಲ್ಲಮ್ಮ

ಹೊಸಿಲು ಕಾಯೋ ಮುತ್ತೈದೆ
ಅಮ್ಮ ಅಟ್ಟಿ ಲಕ್ಕಮ್ಮ

ಅಮ್ಮ ಅಟ್ಟಿ ಲಕ್ಕಮ್ಮ

ಕುಲವ ಕಾಯೋ ಮುತ್ತೈದೆ
ಚೌಡಮ್ಮ ಚೌಡಮ್ಮ

ಚೌಡಮ್ಮ ಚೌಡಮ್ಮ

ಬಸಿರು ಕಾಯೋ ಮುತ್ತೈದೆ
ಬೀರಮ್ಮ ಬೀರಮ್ಮ

ಬೀರಮ್ಮ ಬೀರಮ್ಮ

ಬಾಳ ಕಾಯೋ ಮುತ್ತೈದೆ
ಕಾಳಮ್ಮ ಕಾಳಮ್ಮ

ಕಾಳಮ್ಮ ಕಾಳಮ್ಮ

Leave a Reply

Your email address will not be published. Required fields are marked *