ಚಿತ್ರ: ದೇವರ ಆಟ
ಈ ಸೌಂದರ್ಯಕೆ
ನಿನ್ನ ಅನುರಾಗಕೆ
ನಾ ಸೋತುಹೋದೆ ಅಂದೇ
ಪ್ರೇಯಸಿ….
ಈ ಸೌಂದರ್ಯಕೆ
ನಿನ್ನ ಅನುರಾಗಕೆ
ನಾ ಸೋತುಹೋದೆ ಅಂದೇ
ನಾ ಸೋತುಹೋದೆ ಅಂದೇ
♫♫♫♫♫♫♫♫♫♫♫
ಸೂರ್ಯನ ಹೊನ್ನಿನ
ಬಣ್ಣವೇ ನಾಚಿದೆ
ತನುವಿನ ಈ ಕಾಂತಿಗೆ
ಗಗನದ ಕೆಂಪಿನ
ವರ್ಣವೂ ಸೋತಿದೆ
ಹವಳದ ನಿನ್ನದರಕೆ
ಲತೆಯಹಾಗೆ ಬಳುಕಿ ನೀನು ಆಡಿ
ಕುಣಿಯುವಾಗ ತನುವಿನಂದ ನೋಡಿ
ಊರ್ವಶಿ ನಾಟ್ಯವ ಮರೆತಳು ನೊಂದು
ಚೆಲುವೆ ನಿನಗೆ ಸಾಟಿ ಯಾರು ಎಂದು
ಈ ಸೌಂದರ್ಯಕೆ
ನಿನ್ನ ಅನುರಾಗಕೆ
ನಾ ಸೋತುಹೋದೆ ಅಂದೇ
ನಾ ಸೋತುಹೋದೆ ಅಂದೇ
♫♫♫♫♫♫♫♫♫♫♫
ಹೃದಯದ ವೀಣೆಯ
ತಂತಿಯ ಮೀಟುತ
ನುಡಿಸಿದೆ ಹೊಸ ರಾಗವ
ನನ್ನೆದೆ ತಾಳಕ್ಕೆ
ನಲಿಯುತ ಕುಣಿಯುತ
ತುಂಬಿದೆ ನೀ ಮೋಹವ
ಮನದ ಆಸೆ ಕಣಗಳಿಂದ ಹಾಡಿ
ಕಣ್ಣ ಬಾಷೆಯಿಂದ ಮೋಡಿ ಮಾಡಿ
ಹೊಸ ಹೊಸ ಕನಸಿನ ಉಡುಗೊರೆ ತಂದೆ
ಬಯಕೆ ಅರಳಿ ಸನಿಹ ಸೇವೆಗೆ ಬಂದ
ಈ ಸೌಂದರ್ಯಕೆ
ನಿನ್ನ ಅನುರಾಗಕೆ
ನಾ ಸೋತುಹೋದೆ ಅಂದೇ
ಪ್ರೇಯಸಿ……
ಈ ಸೌಂದರ್ಯಕೆ
ನಿನ್ನ ಅನುರಾಗಕೆ
ನಾ ಸೋತುಹೋದೆ ಅಂದೇ
ನಾ ಸೋತುಹೋದೆ ಅಂದೇ