Album Name: Evare Mahanayaka
Singer: Vijay Prakash
Music Director: Neethu Ninaad
Lyricist, Concept & Direction: Somashekhar G S
ಕಾರ್ಮೋಡ ಕವಿದಿದೆ ಕತ್ತಲೆ ಆವರಿಸಿದೆ
ಕೋಲ್ಮಿಂಚಿನ ವೇಗದಲ್ಲಿ ಬೆಳಕೊಂದು ಹರಿದಿದೆ
ಕಾರ್ಮೋಡ ಕವಿದಿದೆ ಕತ್ತಲೆ ಆವರಿಸಿದೆ
ಕೋಲ್ಮಿಂಚಿನ ವೇಗದಲ್ಲಿ ಬೆಳಕಾಗಿ ಹರಿದಿದೆ
ನೀಲಿ ಬಾನಿಂದ ಧರೆಗೆ ಇಳಿದು ಬಂದ
ಸಮಾನತೆಯ ಸಂದೇಶವ ತಂದ
ನೀಲಿ ಬಾನಿಂದ ಧರೆಗೆ ಇಳಿದು ಬಂದ
ಸಮಾನತೆಯ ಸಂದೇಶವ ತಂದ
ಜೈ ಭೀಮ ಇವರೇ ನಮ್ಮ ನಾಯಕ
ಬದುಕು ಈಗ ಸಾರ್ಥಕ ಇವರೇ ನಮ್ಮ ನಾಯಕ
ಇವರೇ ಮಹಾನಾಯಕ
ನೀಲಿ ಬಾನಿಂದ ಧರೆಗೆ ಇಳಿದು ಬಂದ
ಸಮಾನತೆಯ ಸಂದೇಶವ ತಂದ
ಹುಟ್ಟಿಂದಲೇ ಹೋರಾಟ ಇನ್ನಿಲ್ಲದ ಪರದಾಟ
ಇವನ್ನೆಲ್ಲಾ ಮೆಟ್ಟಿ ನಿಂತವರೋ ಜೈ ಭೀಮಾ
ಧೂಳಿಂದ ಎದ್ದು ಬಂದವರೋ
ಜ್ಞಾನದ ಭಂಡಾರ ಹೆಸರು ಅಂಬೇಡ್ಕರ
ಛಲ ಬಿಡದೆ ಬದುಕು ಕಟ್ಟಿದರೋ ಜೈ ಭೀಮಾ
ಸಾಧನೆಯ ಶಿಖರವ ಏರಿದರೋ
ಅನುಭವವೇ ಜೀವ ಕನ್ನಡಿ
ಸಂವಿಧಾನಕೆ ಬರೆದ ಮುನ್ನುಡಿ
ಇವರೇ ನಮ್ಮ ನಾಯಕ ಬದುಕೇ ಈಗ ಸಾರ್ಥಕ
ಇವರೇ ನಮ್ಮ ನಾಯಕ ಇವರೇ ಮಹಾನಾಯಕ
ಅಕ್ಷರವ ಕಲಿಯಿರಿ ಕಾನೂನನ್ನು ನಂಬಿರಿ
ಈ ನೀತಿ ಭೋಧನೆ ಮಾಡಿದರೋ ಜೈ ಭೀಮಾ
ದಾರಿ ದೀಪವಾದರೋ
ಸ್ತ್ರೀ ಕುಲಕ್ಕೆ ಅಧಿಕಾರ ಮೀಸಲಾತಿ ಪರಿಹಾರ
ಸಾಮಾಜಿಕ ನ್ಯಾಯವ ನೀಡಿದರೋ ಜೈ ಭೀಮಾ
ನಡೆದಾಡುವ ದೇವರಾದರೋ
ಮನುಕುಲದ ಕ್ರಾಂತಿ ದ್ಯೋತಕ
ವಿಶ್ವಶಾಂತಿಯ ಪರಿಚಾರಕ ಇವರೇ ನಮ್ಮ ನಾಯಕ
ಬದುಕು ಈಗ ಸಾರ್ಥಕ ಇವರೇ ನಮ್ಮ ನಾಯಕ
ಬುದ್ದ ಧಮ್ಮ ಪರಿಪಾಲಕ
ಬುಧ್ದಂ ಶರಣಂ ಗಚ್ಚಾಮಿ
ಧಮ್ಮಂ ಶರಣಂ ಗಚ್ಚಾಮಿ
ಸಂಘಂ ಶರಣಂ ಗಚ್ಚಾಮಿ
ಬುಧ್ದಂ ಶರಣಂ ಗಚ್ಚಾಮಿ