ಇದೇ ಹುಡುಗಿ ಇದೇ ಬೆಡಗಿ – Ide hudugi ide bedagi Lyrics in Kannada – Hannele chiguridaaga Movie


ಚಿತ್ರ: ಹಣ್ಣೆಲೆ ಚಿಗುರಿದಾಗ

ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಇದೇ ಹುಡುಗ ಇದೇ ಸೊಬಗ
ಈ ಮೋಡಿಯ ಹೂಡಿದ ಗಾರುಡಿಗ
ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಇದೇ ಹುಡುಗ ಇದೇ ಸೊಬಗ
ಈ ಮೋಡಿಯ ಹೂಡಿದ ಗಾರುಡಿಗ
ಇದೇ ಹುಡುಗ..
♫♫♫♫♫♫♫♫♫♫♫♫

ಒಲವೆಂಬ ನಾಟಕದ ನಾಯಕಿ ನೀನೇ
ಅವಳನ್ನು ವರಿಸುವ ನಾಯಕ ನಾನೇ
ಒಲವೆಂಬ ನಾಟಕದ ನಾಯಕಿ ನೀನೇ
ಅವಳನ್ನು ವರಿಸುವ ನಾಯಕ ನಾನೇ
ಲೇಖಕನಾರೋ ದರ್ಶಕನಾರೋ ಈ ಕಥೆಗೆ
ಲೇಖಕನಾರೋ ದರ್ಶಕನಾರೋ ಈ ಕಥೆಗೆ
ಆ ಜಾಣ ಸುಮಬಾಣ ಅದೇ ಮನ್ಮಥ
ಇದೇ ಹುಡುಗ ಇದೇ ಸೊಬಗ
ಈ ಮೋಡಿಯ ಹೂಡಿದ ಗಾರುಡಿಗ
ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಇದೇ ಹುಡುಗಿ
♫♫♫♫♫♫♫♫♫♫♫♫
ಬಿಗಿದಾಗ ಕೊರಳಿಗೆ ಮಂಗಳಸೂತ್ರ
ಬರುವೆ ನಾ ವಹಿಸಲು ನಾಯಕಿ ಪಾತ್ರ
ಬಿಗಿದಾಗ ಕೊರಳಿಗೆ ಮಂಗಳಸೂತ್ರ
ಬರುವೆ ನಾ ವಹಿಸಲು ನಾಯಕಿ ಪಾತ್ರ
ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
ನಾಟಕ ನಾಳೆ ಧಾರೆಯ ವೇಳೆ ತಾನಿರಲಿ
ಅಭ್ಯಾಸ ಆರಂಭ ಇಂದೇ ಆಗಲಿ
ಇದೇ ಹುಡುಗಿ ಇದೇ ಬೆಡಗಿ
ಕುಡಿ ನೋಟದೆ ಸೆಳೆದಾ ಆ ಸೊಬಗಿ
ಇದೇ ಹುಡುಗ ಇದೇ ಸೊಬಗ
ಈ ಮೋಡಿಯ ಹೂಡಿದ ಗಾರುಡಿಗ



Leave a Reply

Your email address will not be published. Required fields are marked *