ಇದು ರಾಮ ಮಂದಿರ – Idu Raama Mandira Song Lyrics in Kannada – Ravichandra

PK-Music

Song: Idu Raama Mandira
Album/Movie: Ravi Chandra
Singer: Dr Rajkumar, Sulochana
Music Director: Upendra Kumar
Lyricist: Chi Udayashankar
Music Label: MRT Music
 

ಇದು ರಾಮ ಮಂದಿರ
ಹೂಂ ಆಮೇಲೆ
ನೀರಾಮಚಂದಿರ
 
ಇದು ರಾಮ ಮಂದಿರ
ನೀರಾಮಚಂದಿರ
ಜೊತೆಯಾಗಿ ನೀನಿರಲು
ಬಾಳು ಸಹಜ ಸುಂದರಾ
ಇದು ರಾಮ ಮಂದಿರ
ನೀರಾಮಚಂದಿರ
 
ಸ್ವಾಮಿ ನಿನ್ನ ಕಂಗಳಲಿ
ಸ್ವಾಮಿ ನಿನ್ನ ಕಂಗಳಲಿ
ಚಂದ್ರೋದಯ ಕಾಣುವೇ
ಸ್ವಾಮಿ ನಿನ್ನ ನಗುವಲಿ
ಅರುಣೋದಯ ನೋಡುವೇ
ಸರಸದಲ್ಲಿ ಚತುರ ಚತುರ
ಸರಸದಲ್ಲಿ ಚತುರ ಚತುರ
ನಿನ್ನ ಸ್ನೇಹ ಅಮರ
ನಿನ್ನ ಬಾಳ  ಕಮಲದಲೀ
ನಾನು ನಲಿವ ಭ್ರಮರ
ಇದು ರಾಮ ಮಂದಿರ
ನೀರಾಮಚಂದಿರ
 
ನನ್ನ ಸೀತೆ ಇರುವ ತಾಣ
ನನ್ನ ಸೀತೆ ಇರುವ ತಾಣ
ಕ್ಷೀರಸಾಗರದಂತೆ
ನನ್ನ ಸೀತೆ ಬೆರೆತ ಮನವು
ಹೊನ್ನ ಹೂವಿನಂತೆ
ನುಡಿವ ಮಾತು ಮಧುರ ಮಧುರ
ನುಡಿವ ಮಾತು ಮಧುರ ಮಧುರ
ನಿನ್ನ ಪ್ರೇಮ ಅಮರ
ನೀನು ಹೃದಯ ತುಂಬಿರಲು
ಬಾಳು ಪ್ರೇಮ ಮಂದಿರ
ಇದು ರಾಮ ಮಂದಿರ
ಆನಂದ ಸಾಗರ
 
ಇದು ರಾಮ ಮಂದಿರ
ಆನಂದ ಸಾಗರ
ಜೊತೆಯಾಗಿ ನೀನಿರಲು
ಬಾಳು ಸಹಜ ಸುಂದರಾ
ಇದು ರಾಮ ಮಂದಿರ
ನೀ ರಾಮಚಂದಿರ

Leave a Reply

Your email address will not be published. Required fields are marked *