ಇಂಥಾ ಪ್ರಭುವ ಕಾಣೆನೋ – Intha Prabhuva kaneno Lyrics in Kannada | Puttur Narasimhanayak


ಇಂಥಾ ಪ್ರಭುವ ಕಾಣೆನೋ
ಈ ಜಗದೊಳಗಿಂಥಾ
ಪ್ರಭುವ ಕಾಣೆನೋ
ಇಂಥಾ ಪ್ರಭುವ ಕಾಣೆನೋ
ಈ ಜಗದೊಳಗಿಂಥಾ
ಪ್ರಭುವ ಕಾಣೆನೋ
ಇಂಥಾ ಪ್ರಭುವ ಕಾಣೆ
ಶಾಂತ ಮೂರುತಿ
ಜಗದಂತರಂಗನು ಲಕ್ಷ್ಮೀಕಾಂತ
ಸರ್ವಾಂತರ್ಯಾಮಿ
ಇಂಥಾ ಪ್ರಭುವ ಕಾಣೆ
ಶಾಂತ ಮೂರುತಿ
ಜಗದಂತರಂಗನು ಲಕ್ಷ್ಮೀಕಾಂತ
ಸರ್ವಾಂತರ್ಯಾಮಿ
ಇಂಥಾ ಪ್ರಭುವ ಕಾಣೆನೋ
ಈ ಜಗದೊಳ ಗಿಂಥಾ
ಪ್ರಭುವ ಕಾಣೆನೋ
♫♫♫♫♫♫♫♫♫♫♫♫♫♫
ಬೇಡಿದಿಷ್ಟವ ಕೊಡುವ
ಭಕ್ತರ ತಪ್ಪು ನೋಡದೆ
ಬಂದು ಪೊರೆವ
ಬೇಡಿದಿಷ್ಟವ ಕೊಡುವ
ಭಕ್ತರ ತಪ್ಪು ನೋಡದೆ
ಬಂದು ಪೊರೆವ
ಗಾಡಿಕಾರನು ಗರುಡಾ
ರೂಢ್ಯ ಗುಣವಂತ ಮಹಾ
ಪ್ರೌಢ ಪ್ರತಾಪಿ ಜಗದಿ
ಗೂಢದಿಂ ಸಂಚರಿಪ
ಪಾಡಿ ಪೊಗಳಿ ಕೊಂಡಾಡುವವರ
ಮುಂದಾಡುತಲಿಪ್ಪನು
ನಾಡೊಳಗಿದ್ದರು
ಕೇಡಿಗನೇ ನಾಡಾಡಿಗಳಂದದಿ
ಈಡುಂಟೇನೋ ವೆಂಕಟಗೆ
ಇಂಥಾ ಪ್ರಭುವ ಕಾಣೆನೋ
ಈ ಜಗದೊಳ ಗಿಂಥಾ
ಪ್ರಭುವ ಕಾಣೆನೋ
ಇಂಥಾ ಪ್ರಭುವ ಕಾಣೆನೋ
ಈಜಗದೊಳ ಗಿಂಥಾ
ಪ್ರಭುವ ಕಾಣೆನೋ
♫♫♫♫♫♫♫♫♫♫♫♫♫♫
ನಿಗಮ ತತಿಗಳರಿಯದ
ನೀರಜಭವಾದ್ಯಗಣಿತ
ಸುರರು ಕಾಣದ
ನಿಗಮ ತತಿಗಳರಿಯದ
ನೀರಜಭವಾದ್ಯಗಣಿತ
ಸುರರು ಕಾಣದ
ಜಗದೊಡೆಯನು
ಭಕ್ತರುಗಳಿಗೊಲಿದು
ತ್ರಿಸ್ಥಾನಗಳ ತ್ಯಜಿಸಿ
ಕಲಿಯುಗದಿ ಭೂಮಿಗೆ ಬಂದು
ಅಗಣಿತ ಸುಗುಣಾರ್ಣವ
ಶ್ರೀ ಹರಿಯೇ
ಜಗದೊಳು ಸೇವಾದಿಗಳನು ಕೊಳುತಿಹ
ಅಘಹರ ಮೋಕ್ಷಾದಿಗಳನೆ ನೀಡುತ
ನಗೆಮೊಗದಲಿ ಚನ್ನಿಗನಿಂತಹನೊ
ಇಂಥಾ ಪ್ರಭುವ ಕಾಣೆನೋ
ಈ ಜಗದೊಳ ಗಿಂಥಾ
ಪ್ರಭುವ ಕಾಣೆನೋ
ಇಂಥಾ ಪ್ರಭುವ ಕಾಣೆನೋ
ಈ ಜಗದೊಳ ಗಿಂಥಾ
ಪ್ರಭುವ ಕಾಣೆನೋ
♫♫♫♫♫♫♫♫♫♫♫♫♫♫
ವಾರಿಜಾಸನ ಮನೋಜಾ
ಈರ್ವರು ಸುತರು
ಸುರತರಂಗಿಣಿ ತನುಜೆ
ವಾರಿಜಾಸನ ಮನೋಜಾ
ಈರ್ವರು ಸುತರು
ಸುರತರಂಗಿಣಿ ತನುಜೆ
ಪುರವೇ ವೈಕುಂಠ ಇಂದ್ರಾದ್
ಯಮರರು ಕಿಂಕರರು
ಗರುಡವಾಹನ ಉರಗ
ಪರಿಯಂಕ ನಿಷ್ಕಳಂಕ
ಸರಿದೊರೆಗಳ ನಾನರಿಯೆನು ವೆಂಕಟ
ಗಿರಿಯಲಿ ಇರುತಿಹ ಕರುಣೆಗಳರಸನೆ
ಮರೆಯದೆ ಸಲಹೋ ಶರಣಾಗತರನು
ಮರುತಾಂತರ್ಗತ
ಸಿರಿ ವಿಜಯವಿಠ್ಠಲಾ
ಇಂಥಾ ಪ್ರಭುವ ಕಾಣೆನೋ
ಈಜಗದೊಳ ಗಿಂಥಾ
ಪ್ರಭುವ ಕಾಣೆನೋ
ಇಂಥಾ ಪ್ರಭುವ ಕಾಣೆನೋ
ಈಜಗದೊಳ ಗಿಂಥಾ
ಪ್ರಭುವ ಕಾಣೆನೋ
ಇಂಥಾ ಪ್ರಭುವ ಕಾಣೆ
ಶಾಂತ ಮೂರುತಿ
ಜಗದಂತರಂಗನು ಲಕ್ಷ್ಮೀಕಾಂತ
ಸರ್ವಾಂತರ್ಯಾಮಿ
ಇಂಥಾ ಪ್ರಭುವ ಕಾಣೆ
ಶಾಂತ ಮೂರುತಿ
ಜಗದಂತರಂಗನು ಲಕ್ಷ್ಮೀಕಾಂತ
ಸರ್ವಾಂತರ್ಯಾಮಿ
ಇಂಥಾ ಪ್ರಭುವ ಕಾಣೆನೋ
ಈಜಗದೊಳ ಗಿಂಥಾ
ಪ್ರಭುವ ಕಾಣೆನೋ

Leave a Reply

Your email address will not be published. Required fields are marked *