ಆಸೆಯು ಕೈಗೂಡಿತು – Aaseyu Kaigooditu Song Lyrics in kannada – Naanobba Kalla

PK-Music

ಚಿತ್ರ: ನಾನೊಬ್ಬ ಕಳ್ಳ
ಸಂಗೀತ: ರಾಜನ್-ನಾಗೇಂದ್ರ
ಗಾಯನ: DR ರಾಜ್‌, S ಜಾನಕಿ
ಸಾಹಿತ್ಯ: ಚಿ.ಉದಯಶಂಕರ್

ಆಸೆಯು ಕೈಗೂಡಿತು

ಆಸರೆ ದೊರೆತಾಯಿತು
ಚಿಂತೆ ದೂರವಾಯಿತು

ಮನಸು ಹಗುರವಾಯಿತು
ನಿನ್ನೊಡನೆ ಸ್ನೇಹದಾಸೆ

ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ

ಒಂದಾಗಿ ಬಾಳುವಾಸೆ
ಇನ್ನೇನು ಕೇಳೆ ನಿನ್ನ

ನನ್ನಾಣೆ ನಂಬು ನನ್ನ
ಆಸೆಯು ಕೈಗೂಡಿತು

ಆಸರೆ ದೊರೆತಾಯಿತು
♫♫♫♫♫♫♫♫♫♫♫♫

ಕಂದ ನೊಂದು ಅತ್ತಾಗ

ಯಾರೂ ಕಾಣದಾದಾಗ
ಸಂತೈಸಲೆಂದು ಓಡೋಡಿ ಬರುವ

ತಾಯಂತೆ ನೀನು ಬಂದೆ
ಗಾಳಿ ಬೀಸಿ ಬಂದಾಗ

ಜ್ಯೋತಿ ಹೆದರಿ ಹೋದಾಗ
ದೀಪದಲ್ಲಿ ನೀ ಜೀವವಾಗಿ

ಹೋರಾಡಲೆಂದು ಬಂದೆ
ಉಸಿರಾಡುವಾಸೆ ತಂದೆ
ಆಸೆಯು ಕೈಗೂಡಿತು

ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು
♫♫♫♫♫♫♫♫♫♫♫♫

ನೀನೆ ನನ್ನ ಸಂತೋಷ
ನೀನೆ ನನ್ನ ಸೌಭಾಗ್ಯ
ನಿನ್ನಿಂದ ನಾನು ನಿನಗಾಗಿ
ನಾನು ನಿನ್ನಲ್ಲೆ ಸೇರಿ ಹೋದೆ
ಬಾಳೋ ಆಸೆ ನೀ ತಂದೆ,
ನನ್ನ ಸೇರಿ ಒಂದಾದೆ
ಸುಳಿಯಲಿ ನಾನು ಹೋರಾಡುವಾಗ
ಜೊತೆಯಾಗಿ ನೀನು ಬಂದೆ
ಇನ್ನೇನು ಕಾಣೆ ಮುಂದೆ
ಆಸೆಯು ಕೈಗೂಡಿತು

ಆಸರೆ ದೊರೆತಾಯಿತು
ಚಿಂತೆ ದೂರವಾಯಿತು

ಮನಸು ಹಗುರವಾಯಿತು
ನಿನ್ನೊಡನೆ ಸ್ನೇಹದಾಸೆ

ಒಂದಾಗಿ ಬಾಳುವಾಸೆ
ನಿನ್ನೊಡನೆ ಸ್ನೇಹದಾಸೆ

ಒಂದಾಗಿ ಬಾಳುವಾಸೆ
ಇನ್ನೇನು ಕೇಳೆ ನಿನ್ನ

ನನ್ನಾಣೆ ನಂಬು ನನ್ನ
ಆಸೆಯು ಕೈಗೂಡಿತು
ಆಸರೆ ದೊರೆತಾಯಿತು
ಚಿಂತೆ ದೂರವಾಯಿತು
ಮನಸು ಹಗುರವಾಯಿತು
ಮನಸು ಹಗುರವಾಯಿತು,
ಮನಸು ಹಗುರವಾಯಿತು,
ಮನಸು ಹಗುರವಾಯಿತು

Leave a Reply

Your email address will not be published. Required fields are marked *