ಅರ್ಪಣೆ ನಿನಗೆ ಅರ್ಪಣೆ – Arpane ninage Arpane Song Lyrics in Kannada – Swapna Kannada Movie Song Lyrics

ಚಿತ್ರ : ಸ್ವಪ್ನ 


ಗಾಯಕರು :ಎಸ್.ಪಿ.ಬಾಲು




ಅರ್ಪಣೆ
ನಿನಗೆ ಅರ್ಪಣೆ

ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ…..
ಅರ್ಪಣೆ ನಿನಗೆ ಅರ್ಪಣೆ
ಓ ಪ್ರಿಯೆ …
ಓ ಪ್ರಿಯೆ …
ಓ ಪ್ರಿಯೆ …
♫♫♫♫♫♫♫♫♫♫

ಲಕ್ಷ ದೀಪ
ಜೊತೆಯಾಗಿ ಬೆಳಗಿ

ಮೆರೆವಂತೆ ಕಣ್ಣಮಿಂಚು
ಮುತ್ತು ರತ್ನ ಮಳೆಯಾಗಿ ಚೆಲ್ಲಿ
ಹೊಳೆವಂತೆ ನಗೆಯ ಸಂಚು
ಅರಳಿ ನಿಂತ ಕಮಲದಂತೆ ಪಾದ
ಇಡಲು ಹೆಜ್ಜೆ ಉಲಿವ ಗೆಜ್ಜೆ ನಾದ
ಶ್ರುತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭಾ….
ಶ್ರುತಿಯು ಸ್ವರವು ಕಲೆತಿರಲು
ಹೊಸ ರಾಗದ ಪ್ರಾರಂಭ
ಮನಸು ಮನಸು ಬೆರೆತಿರಲು
ಅನುರಾಗದ ಆರಂಭ
ಆ ಮನಸೇ ಒಂದು

ಆಲಯವಾಗೇ…..

ಆ ಆಲಯ ದೇವತೆ ನೀನಾಗೇ….
ಆ ಆಲಯ ದೇವತೆ ನೀನಾಗೆ
ಧೂಪ ದೀಪ ವೇದ ನಾದ
ಎಲ್ಲಾ ಅರ್ಪಣೆ…
ಅರ್ಪಣೆ ನಿನಗೆ ಅರ್ಪಣೆ
♫♫♫♫♫♫♫♫♫♫

ಒಡಲಿನಲ್ಲಿ
ಕಣ ಕಣವು ನಿನ್ನ

ಪ್ರತಿಬಿಂಬ ತುಂಬಿದಾಗ
ಒಲವಿನಿಂದ ಕ್ಷಣ ಕ್ಷಣವೂ ನಿನ್ನ
ಹೆಸರನ್ನೆ ಜಪಿಸುವಾಗ
ನಿದಿರೆ ಇಂದು ನಯನದಿಂದ ದೂರ
ಪಡೆವುದೆಂದು ತುಟಿಯ ಜೇನ ಸಾರ
ಬಾನು ಭೂಮಿ ಸೇರಿದರೆ
ಅದು ಪ್ರಕೃತಿಯ ಸಮ್ಮಿಲನ
ಜೀವ ಜೀವ ಸೇರಿದರೆ
ಅದು ಪ್ರಣಯದ ಶುಭ ಮಿಲನಾ…
ಬಾನು ಭೂಮಿ ಸೇರಿದರೆ
ಅದು ಪ್ರಕೃತಿಯ ಸಮ್ಮಿಲನ
ಜೀವ ಜೀವ ಸೇರಿದರೆ
ಅದೆ ಪ್ರಣಯದ ಶುಭ ಮಿಲನ
ಆ ಪ್ರಣಯವೇ ಒಂದು

ಗೋಪುರವಾಗೇ
…..
ಆ ಗೋಪುರ ಕಳಶವು ನೀನಾಗೇ…
ಆ ಗೋಪುರ ಕಳಶವು ನೀನಾಗೆ
ಹಣ್ಣು ಹೂವು ಹೋಮ ಹವನ
ಎಲ್ಲಾ ಅರ್ಪಣೆ…
ಅರ್ಪಣೆ ನಿನಗೆ ಅರ್ಪಣೆ
ಈ ಬಾಳ ಆರಾಧನೆ …
ಅರ್ಪಣೆ ನಿನಗೆ ಅರ್ಪಣೆ
ಓ ಪ್ರಿಯೆ …
ಓ ಪ್ರಿಯೆ …
ಓ ಪ್ರಿಯೆ …

Leave a Reply

Your email address will not be published. Required fields are marked *