ಅರೆರೆರೆ ಗಿಣಿರಾಮ – Arerere Giniraama Song Lyrics – Gandhada Gudi

PK-Music

ಚಿತ್ರ: ಗಂಧದಗುಡಿ
ಗಾಯಕರು: ಪಿ.ಸುಶೀಲ
ಸಂಗೀತ: ರಾಜನ್ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್


ಅರೆ ರೆರೆ ರೆರೆ ಗಿಣಿರಾಮ
ಹೊಯ್ ಪಂಚರಂಗೀರಾಮ
ಅರೆ ರೆರೆ ಗಿಣಿರಾಮ
ಹೊಯ್ ಪಂಚರಂಗೀರಾಮ
ಮಾತಾಡೋ..
ಮಾತಾಡೋ ಮುದ್ದು ಗಿಣಿರಾಮ
ಆಹ ಮಾತಾಡೋ

ನನ್ನ ಪುಟ್ಟ ರಾಮ
ನಿನ್ನಾಸೆ ನನಗೈತೆ

ನಿನಮ್ಯಾಲೆ ಮನಸೈತೆ
ನಿನ್ನ ಕಂಡು ನಾ ಸೋತೆ ರಾಮ
ನನ್ನ ಬಿಟ್ಟೋಡೋ

ಬ್ಯಾಡಯ್ಯ ರಾಮ
ಅರೆ ರೆರೆ ರೆರೆ ಗಿಣಿರಾಮ
ಹೊಯ್ ಪಂಚರಂಗೀರಾಮ
ಮಾತಾಡೋ ಮುದ್ದು ಗಿಣಿರಾಮ
ಒಂದು ಮಾತಾಡೋ

ನನ್ನ ಪುಟ್ಟ ರಾಮ

♬♬♬♬♬♬♬♬♬♬♬♬

ನೆನೆತನಕ ಇಂಗಿಲ್ಲ

ನಾನು ನಾನಾಗಿಲ್ಲ

ನೆನೆತನಕ ಇಂಗಿಲ್ಲ

ನಾನು ನಾನಾಗಿಲ್ಲ
ನಿಂತಲ್ಲಿ ನಿಲಲಾರೆನಲ್ಲ
ತಳಮಳವ ನಾ ತಾಳೆ ನಲ್ಲ
ಮನ ಹಿಗ್ಗಿ ಹಗುರಾಗೆ
ತನು ಕಾದು ಕೆಂಪಾಗೆ
ಮೈ ಬಟ್ಟೆ ಬಿಗಿಯಾಗಿ ರಾಮ
ನನ್ನ ಎದೆ ಭಾರವಾಯಿತಲ್ಲ ರಾಮ
ಆಹ ಇರಲಾರೆ
ಇನ್ನು ಇರಲಾರೆ ನಿನ್ನ ಬಿಟ್ಟು ರಾಮ
ಒಂದು ಮಾತಾಡೋ

ನನ್ನ ಪುಟ್ಟ ರಾಮ
♬♬♬♬♬♬♬♬♬♬♬♬

ಸಣ್ಣಾದ ನಡು ಹಿಂಗೆ

ಆಡ್ಯಾಡಿ ಕುಣಿದಂಗೆ

ಸಣ್ಣಾದ ನಡು ಹಿಂಗೆ

ಆಡ್ಯಾಡಿ ಕುಣಿದಂಗೆ
ಮೈಯೆಲ್ಲಾ ಜುಮೆಂದು ನಂಗೆ
ನಿನ್ನ ತಬ್ಬಿಕುಂತಿರುವಾಸೆ ಹಿಂಗೆ
ಮುಂಜಾನೆ ಮಂಜುರಲಿ
ನೀರಲ್ಲೇ ಮುಳುಗಿರಲಿ
ಬಿಸಿಯುಸಿರ ಕಾವಿಂದ ರಾಮ
ಮೈ ಬಾಡಿದ ಹೂವಾಯ್ತು ರಾಮ
ಹುಂ ಹೂ ಬಿಡಲಾರೆ
ನಿನ್ನ ಬಿಡಲಾರೆ ಬಂಗಾರ ರಾಮ
ಒಂದು ಮಾತಾಡೋ

ನನ್ನ ಪುಟ್ಟ ರಾಮ
ನಿನ್ನಾಸೆ ನನಗೈತೆ

ನಿನಮ್ಯಾಲೆ ಮನಸೈತೆ
ನಿನ್ನ ಕಂಡು ನಾ ಸೋತೆ ರಾಮ
ನನ್ನ ಬಿಟ್ಟೋಡೋ

ಬ್ಯಾಡಯ್ಯ ರಾಮ
ಅರೆ ರೆರೆ ರೆರೆ ಗಿಣಿರಾಮ
ಹೊಯ್ ಪಂಚರಂಗೀರಾಮ
ಅರೆ ರೆರೆ ಗಿಣಿರಾಮ
ಹೊಯ್ ಪಂಚರಂಗೀರಾಮ
ಮಾತಾಡೋ ಮುದ್ದು ಗಿಣಿರಾಮ
ಒಂದು ಮಾತಾಡೋ

ನನ್ನ ಪುಟ್ಟ ರಾಮ
ಆಹ ಲಾಲಾಲ

ಲಾಲಲಲ ಲಾಲಾ
ಆಹ ಲಾಲಾಲ

ಲಾಲಲಲ ಲಾಲಾ

Leave a Reply

Your email address will not be published. Required fields are marked *