Song: Amma Ninna Edeyaaladalli
Program: Sampada
Singer: B R Chaya
Music Director: C Ashwath
Lyricist: B R Lakshman Rao
Music Label : Lahari Music
ಅಮ್ಮ ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ
ಮೀನು
ಮಿಡುಕಾಡುತಿರುವೆ
ನಾನು
ಅಮ್ಮ ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ
ಮೀನು
ಮಿಡುಕಾಡುತಿರುವೆ
ನಾನು
ಕಡಿಯಲೊಲ್ಲೆ ನೀ
ಕರುಳ ಬಳ್ಳಿ
ಒಲವೂಡುತಿರುವ ತಾಯೆ
ಬಿಡದ ಭುವಿಯ ಮಾಯೆ
ಅಮ್ಮ ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ
ಮೀನು
ಮಿಡುಕಾಡುತಿರುವೆ
ನಾನು
ನಿನ್ನ ರಕ್ಷೆ ಗೂಡಲ್ಲಿ
ಬೆಚ್ಚಗೆ
ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ
ನಿನ್ನ ರಕ್ಷೆ ಗೂಡಲ್ಲಿ
ಬೆಚ್ಚಗೆ
ಅಡಗಲಿ ಎಷ್ಟು ದಿನ
ದೂಡು ಹೊರಗೆ ನನ್ನ
ಓಟ ಕಲಿವೆ ಒಳನೋಟ
ಕಲಿವೆ
ಓಟ ಕಲಿವೆ ಒಳನೋಟ
ಕಲಿವೆ
ನಾ ಕಲಿವೆ ಊರ್ಧ್ವಗಮನ
ಓ ಅಗಾಧ ಗಗನ
ಓ ಅಗಾಧ ಗಗನ
ಅಮ್ಮ ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ
ಮೀನು
ಮಿಡುಕಾಡುತಿರುವೆ
ನಾನು
ಮೇಲೆ ಹಾರಿ ನಿನ್ನ
ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ
ತಲುಪಿ
ಬ್ರಹ್ಮಾಂಡವನ್ನೇ
ಬೆದಕಿ
ಮೇಲೆ ಹಾರಿ ನಿನ್ನ
ಸೆಳೆತ ಮೀರಿ
ನಿರ್ಭಾರ ಸ್ಥಿತಿಗೆ
ತಲುಪಿ
ಬ್ರಹ್ಮಾಂಡವನ್ನೇ
ಬೆದಕಿ
ಇಂಧನ ತೀರಲು ಬಂದೇ
ಬರುವೆನು
ಇಂಧನ ತೀರಲು ಬಂದೇ
ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ
ಮೂರ್ತ ಪ್ರೇಮದೆಡೆಗೆ
ಅಮ್ಮ ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ
ಮೀನು
ಮಿಡುಕಾಡುತಿರುವೆ
ನಾನು
ಮಿಡುಕಾಡುತಿರುವೆ
ನಾನು