ಚಿತ್ರ : ಅಮ್ಮ ಐ ಲವ್ ಯು
ಸಂಗೀತ: ಗುರುಕಿರಣ್
ಸಾಹಿತ್ಯ: ವಿ. ನಾಗೇಂದ್ರ ಪ್ರಸಾದ್
ಗಾಯನ: ಸುನಿಲ್ ಕಶ್ಯಪ್
ಅಮ್ಮ ನನ್ನೀ ಜನುಮ
ನಿನ್ನಾ ವರದಾನವಮ್ಮ
ಅಮ್ಮನಿನಗ್ಯಾರು ಸಮ
ನನ್ನಾ ಜಗ ನೀನೆ ಅಮ್ಮ
ನಿನ್ನ ಆ ಲಾಲಿಪದ
ನನ್ನ ಒಳಗೆ ಸದಾ
ನಿಲದೇ ಮಿಡಿದಿದೆ ಅಮ್ಮ
ಗುಡಿಯಾ ಹಂಗಿರದ
ಕೀರ್ತನೆ ಬೇಕಿರದ
ನಡೆವಾ ದೈವವೇ ಅಮ್ಮ
ಅಮ್ಮ ನನ್ನೀ ಜನುಮ
ನಿನ್ನಾ ವರದಾನವಮ್ಮ
ಅಮ್ಮ
♫♫♫♫♫♫♫♫♫♫♫♫
ನಿನ್ನ ಒಂದು ಕೈ ತುತ್ತು ಸಾಕು
ಈ ಜನ್ಮ ಪೂರ್ತಿ
ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು
ಆ ನೆನಪಿನಲ್ಲಿ
ಸೆರೆವಾಸ ಇರುವೆನು
ನೀನೆ ನನ್ನ ಲೋಕವು
ನೀನೆ ನನ್ನ ಜೀವವು
ನೀನೆ ನನಗೆ ಎಲ್ಲವೂ ಅಮ್ಮ
ಅಮ್ಮ ನಿನಗ್ಯಾರು ಸಮ
ನನ್ನಾ ಜಗ ನೀನೆ ಅಮ್ಮ
ಅಮ್ಮ
♫♫♫♫♫♫♫♫♫♫♫♫
ನಿನ್ನ ಒಂದು ಸಾಂತ್ವನವೇ ಸಾಕು
ನೋವನೆಲ್ಲ ನಾ ನುಂಗಿ ನಗುವೆನು
ನೀನು ಒಮ್ಮೆ ಬೆನ್ ತಡವು ಸಾಕು
ಜಗವನೆಲ್ಲ ನಾ ಗೆದ್ದು ಬರುವೆನು
ನೂರು ನೂರು ದೇವರು
ನಿನ್ನ ಒಳಗೆ ಇರುವರು
ಎಂಬ ನಿಜವ ಅರಿತೆನು ಅಮ್ಮ
ಅಮ್ಮ ನನ್ನೀ ಜನುಮ
ನಿನ್ನಾ ವರದಾನವಮ್ಮ
ಅಮ್ಮನಿನಗ್ಯಾರು ಸಮ
ನನ್ನಾಜಗ ನೀನೆ ಅಮ್ಮ
ನಿನ್ನ ಆ ಲಾಲಿಪದ
ನನ್ನ ಒಳಗೆ ಸದಾ
ನಿಲದೇ ಮಿಡಿದಿದೆ ಅಮ್ಮ
ಗುಡಿಯಾ ಹಂಗಿರದ
ಕೀರ್ತನೆ ಬೇಕಿರದ
ನಡೆವಾ ದೈವವೆ ಅಮ್ಮ
ಅಮ್ಮ