ಅಮ್ಮ ಎಂಬ ಮಾತಿಗಿಂತ – Amma emba Maathigintha Lyrics – Bhavageethe

Song: Amma Emba Maathigintha
Album/Movie: Abhinandana
Singer: Garthikere Raghanna
Music Director: Garthikere Raghanna
Lyricist: N.S. Lakshminarayana Bhatta
Music Label : Lahari Music

ಅಮ್ಮ
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

ಅಮ್ಮ
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

ಅದು
ನೀಡುವ ಶಾಂತಿ ಕಾಂತಿ

ಅದು
ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ

ಅಮ್ಮ
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 

ಹಾಲು
ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ

ಹಾಲು
ಕುಡಿಸಿ ಹೃದಯ ಬಿಡಿಸಿ ಪ್ರೀತಿ ಉಣಿಸಿ ಮನಸಿಗೆ

ಬಾಳ
ತೇದು ಮಕ್ಕಳಿಗೆ

ಬಾಳ
ತೇದು ಮಕ್ಕಳಿಗೆ ಬೆರೆದಳಲ್ಲ ಕನಸಿಗೆ

 

ಅಮ್ಮ
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 

ಗಾಳಿಯಲ್ಲಿ
ನೀರಿನಲ್ಲಿ ಮಣ್ಣು ಹೂವು ಹಸಿರಲ್ಲಿ

ಗಾಳಿಯಲ್ಲಿ
ನೀರಿನಲ್ಲಿ ಮಣ್ಣು ಹೂವು ಹಸಿರಲ್ಲಿ

ಕಾಣದೇನು
ಕಾಯ್ವ ಬಿಂಬ

ಕಾಣದೇನು
ಕಾಯ್ವ ಬಿಂಬ ಆಡುತಿರುವ ಉಸಿರಲ್ಲಿ

 

ಅಮ್ಮ
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 

ಮರೆವೆ
ಹೇಗೆ ಹೇಳೆ ತಾಯೆ ನಿನ್ನೀ ವಾತ್ಸಲ್ಯವ

ಮರೆವೆ
ಹೇಗೆ ಹೇಳೆ ತಾಯೆ ನಿನ್ನೀ ವಾತ್ಸಲ್ಯವ

ಅರಿವೆ
ಹೇಗೆ ಹೇಳೆ ತಾಯೆ

ಅರಿವೆ
ಹೇಗೆ ಹೇಳೆ ತಾಯೆ ನಿನ್ನ ಪ್ರೀತಿ ಎಲ್ಲೆಯ

 

ಅಮ್ಮ
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

ಅದು
ನೀಡುವ ಶಾಂತಿ ಕಾಂತಿ

ಅದು
ನೀಡುವ ಶಾಂತಿ ಕಾಂತಿ ಯಾವ ತಾರೆ ರವಿಗಿದೆ

ಅಮ್ಮ
ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ

 


Amma yemba Mathigintha Lyrics

Amma emba Maatiginta Lyrics

Leave a Reply

Your email address will not be published. Required fields are marked *