Music: Ravi Basrur
Lyric: Ashok Neelavara
Singer : Vijaya Prakash, Priyanka Bharali
ಅನಿತಾ ಓ ಅನಿತಾ
ನನ್ ಅವಸ್ತಿ ನಿಂಗ್ ಗೊತಿತಾ
ನೀನಂದ್ರೆ ನಂಗ್ ಜೀವ ಅನಿತಾ
ಅನಿತಾ ಓ ಅನಿತಾ
ನಿನ್ ಹೆಸ್ರ್ ನಾ ಬರಿತಾ
ಮರತೆ ನಾ ನನ್ನೆ ಅನಿತಾ
ಕಣ್ಣ್ ಮುಚ್ಚ್ರು ನೀ ಕಾಂತೆ
ಎಲ್ ಕಂಡ್ರೂ ನೀ ತೊರ್ತೆ
ಮನಿಕಂಡ್ರು ನಿನ್ ಕನ್ಸೆ
ನಿನ್ ಗಿರಹಿಡದ್ ಗಂಡ್ ನಾನಾ ಅನಿತಾ
ಓ ಅನಿತಾ
ಕದ್ದ್ ಕದ್ದ್ ನನ್ನೆ ಕಾಂತೆ
ಹತ್ರ ಬಂದ್ರೆ ಎದ್ದ್ ಹ್ವಾತೆ
ಯಾಕ್ ಹೀಂಗೆ ಮಾಡ್ತೆ ಹೇಳುಲೆ
ನಂಗೆ ಗೊತಿತ್ ನೀ ಜೋರಿದ್ದೆ
ಹತ್ರ ಬಂದ್ರೆ ಕೈ ಹಿಡಿತೆ
ನಿನ್ನಾಟ ಇಲ್ ನೆಡಿತಿಲ್ಲೆ
ಓ . . . ಮಳಿ ಬಪ್ಪತಿಗು ಚಳಿ ಇಪ್ಪತಿಗು
ನಿಂದೆ ನೆನ್ಪಂಗೆ ಮೈ ಮರಿತೆ
ಹೀಂಗ್ ಮಾತಾಡಿ – ನನ್ನ ಮರಲ್ ಮಾಡಿ
ನನ್ನ್ ನಿದ್ರಿ ಹಾಳ್ ಮಾಡ್ದೆ
ಅನಿತಾ ಓ ಅನಿತಾ
ನಿನ್ನ್ ಮುದ್ದ್ ಮಾಡು ಆಸಿ
ಚಂದ ಗ್ವಾಂಪಿ ಓ ಅನಿತಾ
ನಿಂಗೆ ಹೀಂಗೆ ಏಗ್ಳಾರ್ ಅನ್ಸಿತಾ
ಆಗಳಿಂದ ನಾ ಕಾಂತಿದ್ದೆ
ಬಾಯಿಗ್ ಬಂದದ್ ಮಾತಾಡ್ತೆ
ಮದಿಯಾಗ್ ಮತ್ತೆ ಕಾಂಬಲೆ
ಓ . . . ಇಲ್ ಕೇಳ್ ಅನಿತಾ
ನೀ ನಂಗ್ ಅನಿತಾ
ಆ ಬ್ರಹ್ಮ ನಿಂಗ್ ನನ್ನ ಬರದಾಯ್ತ್
ಅದ್ ನಂಗ್ ಗೊತಿತ್
ನಂಗ್ ಆಸಿ ಇತ್ತ್
ಅದಕ್ ಗಳ್ಗಿ ಕೂಡಿ ಬರ್ಕ್
ಅನಿತಾ ಓ ಅನಿತಾ
ನನ್ ಅವಸ್ತಿ ನಿಂಗ್ ಗೊತಿತಾ
ನೀನಂದ್ರೆ ನಂಗ್ ಜೀವ ಅನಿತಾ
ಮನ್ಸ್ ನಿನ್ನ್ ಮ್ಯಾಲೆ
ಕನ್ಸ್ ಕಣ್ಣ್ ಮ್ಯಾಲೆ
ನಿಂಗೆ ನಾ ಇನ್ನ್ ಗೊತಿತಾ
ಕಣ್ಣ್ ಮುಚ್ಚ್ರು ನೀ ಕಾಂತೆ
ಎಲ್ ಕಂಡ್ರೂ ನೀ ತೊರ್ತೆ
ಮನಿಕಂಡ್ರು ನಿನ್ ಕನಸೆ
ಲಲ ಲಲಲಲ ಲಲಲಲಲಾ……