ಸೋಲೆ ಇಲ್ಲಾ – Sole Illa Ninna Haadu Song Lyrics in Kannada – Yudda Kaanda

PK-Music

ಚಿತ್ರ: ಯುದ್ಧ ಕಾಂಡ
ಗಾಯಕರು:SPB, S. ಜಾನಕಿ
ಸಂಗೀತ : ಹಂಸಲೇಖ
ಸಾಹಿತ್ಯ: ಹಂಸಲೇಖ

ಸೋಲೆ ಇಲ್ಲಾ..
ನಿನ್ನ ಹಾಡು ಹಾಡುವಾಗ
ಗೆಲುವೇ ಎಲ್ಲಾ..
ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ

ಲಲಲ ಲಲಲ ಲಲಲ
ಹೂವು ಮುಳ್ಳು ಜೋಡಿಯಾಗಿ

ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ

ಹೋರಾಡೋಕೆ ಕೇಳು
ಜೀವನ ಒಂದು ತೂಗುಯ್ಯಾಲೆ

ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು

ಯುದ್ಧಕಾಂಡ ಕೇಳು
ಸೋಲೆ ಇಲ್ಲಾ..
ನಿನ್ನ ಹಾಡು ಹಾಡುವಾಗ ಓಓಓ
ಗೆಲುವೇ ಎಲ್ಲಾ..
ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ

ಲಲಲ ಲಲಲ ಲಲಲ
ಹೂವು ಮುಳ್ಳು ಜೋಡಿಯಾಗಿ

ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು

♫♫♫♫♫♫♫♫♫♫♫♫
ಮೋಡ ಕವಿದಾ ಚಂದ್ರ
ಹೊರಗೆ ಬರದೆ ಇರಲು
ಬಾಳಲಿ ಶೂನ್ಯವೆ ತುಂಬಿರಲು
ಭೂಮಿಯೆ ಸಿಡಿಯುತ ಬಿರಿದಿರಲು
ಧೈರ್ಯ ಒಂದೆ ದೀಪಾ
ಶೌರ್ಯ ಅದರ ರೂಪಾ
ಸತ್ಯ ನಮಗೆ ದಾರಿ
ಸುಳ್ಳೆ ನಮಗೆ ವೈರಿ
ಹಾಡುವ ಈಗ ಜೀವನ ರಾಗ
ಲಲಲ ಲಲಲ ಲಲಲ
ಹೂವು ಮುಳ್ಳು ಜೋಡಿಯಾಗಿ
ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು
♫♫♫♫♫♫♫♫♫♫♫♫

ಆಆಆಆಆಆಆಅ
ಓಓಓಓಓಓಓ
ಬೆಳ್ಳಿ ರಥದ ಸೂರ್ಯ
ದಿನವು ನಗುತ ಬರುವಾ
ಆದರು ಅವನಿಗು ಮೇಘಗಳ
ಪರದೆಯ ಜೊತೆಯಲಿ ಇದೆ ಜಗಳ
ಬದುಕೆ ಯುದ್ಧಕಾಂಡ..
ಹೃದಯ ಯಜ್ಞ ಕುಂಡ
ಸಿಡಿಯೆ ಅಗ್ನಿಜ್ವಾಲೇ
ತೊಡಿಸೆ ವಿಜಯಮಾಲೆ
ಹಾಡುವ ಈಗ ಜೀವನ ರಾಗ
ಲಲಲ ಲಲಲ ಲಲಲ
ಹೂವು ಮುಳ್ಳು ಜೋಡಿಯಾಗಿ

ಬಾಳೋದೇಕೆ ಹೇಳು
ಬೇರೆ ಮಾಡೋ ಕೈಗಳ ಮೇಲೆ
ಹೋರಾಡೋಕೆ ಕೇಳು
ಜೀವನ ಒಂದು ತೂಗುಯ್ಯಾಲೆ
ಯಾಕೆ ನೀನು ಹೇಳು
ಭೂಮಿ ಮೇಲೆ ನಮ್ಮ ಬಾಳು
ಯುದ್ಧಕಾಂಡ ಕೇಳು
ಸೋಲೆ ಇಲ್ಲಾ…
ನಿನ್ನ ಹಾಡು ಹಾಡುವಾಗ ಓಓಓ
ಗೆಲುವೇ ಎಲ್ಲಾ…
ನಿನ್ನ ಪ್ರೀತಿ ಕಾಯುವಾಗ
ಹಾಡುವ ಈಗ ಜೀವನ ರಾಗ
ಲಲಲ ಲಲಲ ಲಲಲ

Leave a Reply

Your email address will not be published. Required fields are marked *