ಸಂತೋಷ ಅಹಾ ಅಹಾ – Santhosha aha aha Song Lyrics in Kannada – Edakallu guddada mele Kannada Movie

ಚಿತ್ರ: ಎಡಕಲ್ಲು ಗುಡ್ಡದ ಮೇಲೆ
ಸಾಹಿತ್ಯ :ವಿಜಯನಾರಸಿಂಹ
ಸಂಗೀತ : ಎಂ.ರಂಗರಾವ್
ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ




ಸಂತೋಷ ಅಹಾ ಅಹಾ
ಸಂಗೀತ ಒಹೋ ಒಹೋ
ರಸಮಯ ಸಂತೋಷ
ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ
ಮೈ ತುಂಬಿದೆ…….
♫♫♫♫♫♫♫♫♫♫♫♫

ಏಳು ಸ್ವರಗಳ ಭಾವಗೀತೆಯ ಸಂಗೀತ
ಏಳು ಬಣ್ಣದ ಭೂಮಿ ರಮಣಿಗೆ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ರಾಗ ಸಂಗೀತ ಗೆಲುವಿನ ಯೋಗ ಸಂತೋಷ
ಹಾದಿಗೆಲ್ಲಾ ಹೂವು ಚೆಲ್ಲಿ
ಹಾದಿಗೆಲ್ಲಾ ಹೂವು ಚೆಲ್ಲಿ ಓಡಿ ಓಡಿ ಸಾಗುವಲ್ಲಿ
ಹಾಡಿ ಹಾಡಿ ಮೂಡಿ ಬಂತು
ಏನೋ ಮೋಡಿ….
ಸಂತೋಷ ಅಹಾ ಅಹಾ
ಸಂಗೀತ ಹೆಹೇ..ಹೆಹೇ..
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ….
♫♫♫♫♫♫♫♫♫♫♫♫

ಜುಳು ಜುಳು ಹರಿಯುವ ನೀರಿನ ಅಲೆಗಳ ಸಂಗೀತ
ಸುಯ್ ಸುಯ್ ಎನ್ನುತ ಬೀಸುವ ಗಾಳಿಗೆ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸ್ವರ್ಗ ಸಂಗೀತ ನಿಸರ್ಗ ಸಂತೋಷ
ಸನ್ನೇ ಮಾಡಿ ಹೋ ಕೈ ಬೀಸಿ
ಸನ್ನೇ ಮಾಡಿ ಕೈ ಬೀಸಿ
ಗುಟ್ಟು ಹೇಳಿ ಬೆಟ್ಟ ಸಾಲು
ಹಾಡಿ ಹಾಡಿ ಮೂಡಿ ಬಂತು
ಏನೋ ಮೋಡಿ

ಸಂತೋಷ ಅಹಾ ಅಹಾ
ಸಂಗೀತ ಒಹೋ ಒಹೋ
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ
ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ
♫♫♫♫♫♫♫♫♫♫♫♫

ಕದ್ದು ಹಾಡುವ ಕೋಗಿಲೆ ಕೊರಳಿನ ಸಂಗೀತ
ಮುದ್ದು ಜಿಂಕೆಗೆ ಜಿಗಿದು ನೆಗೆಯುವ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ನಾದ ಸಂಗೀತ ಉನ್ಮಾದ ಸಂತೋಷ
ಉಬ್ಬಿ ಹಬ್ಬಿ ಬಾಚಿ ತಬ್ಬಿ
ಉಬ್ಬಿ ಹಬ್ಬಿ ಬಾಚಿ ತಬ್ಬಿ ನಾಚಿ ನಿಂತ ಹೂವೂ ಬಳ್ಳಿ
ಹಾಡಿ ಹಾಡಿ ಮೂಡಿ ಬಂತು ಏನೋ ಮೋಡಿ
ಸಂತೋಷ ಅಹಾ ಅಹಾ
ಸಂಗೀತ ಹೆಹೇ ಹೆಹೇ..
ರಸಮಯ ಸಂತೋಷ ಸುಖಮಯ ಸಂಗೀತ
ಹೊಸ ಹೊಸ ಭಾವ ತುಂಬಿ

ನಸು ನಗೆ ಹೊಮ್ಮಿ ಚಿಮ್ಮಿ ಮೈ ತುಂಬಿದೆ

Leave a Reply

Your email address will not be published. Required fields are marked *