ಚಿತ್ರ : ತಾಯಿ ಕರುಳು
ಸಾಹಿತ್ಯ : ಜಿ ವಿ ಅಯ್ಯರ್
ಸಂಗೀತ ; ಜಿ ಕೆ ವೆಂಕಟೇಶ್
ಗಾಯಕರು : ಪಿ ಬಿ ಶ್ರೀನಿವಾಸ್
ಬಾ ತಾಯಿ ಭಾರತಿಯೇ
ಭಾವ ಭಾಗೀರಥಿಯೇ
ಹೃದಯವೀಣೆಯ ಮೀಟಿ
ಮಧುರ ಗೀತೆಯ ನೀಡೆ
ಬಾ ತಾಯಿ ಭಾರತಿಯೇ
ಭಾವ ಭಾಗೀರಥಿಯೇ
ಕನ್ನಡದ ಕಸ್ತೂರಿ ತಿಲಕವಿಟ್ಟೂ
ಕನ್ನಡದ ಕಾವ್ಯಗಳ ಮಾಲೆ ತೊಟ್ಟೂ
ಕನ್ನಡದ ಕಸ್ತೂರಿ ತಿಲಕವಿಟ್ಟೂ
ಕನ್ನಡದ ಕಾವ್ಯಗಳ ಮಾಲೆ ತೊಟ್ಟೂ
ಕನ್ನಡದ ಕಾಲ್ಗೆಜ್ಜೆ ನಾದ ಕೊಟ್ಟೂ
ಹೊನ್ನುಡಿಯ ಭೂಮಿಯಲಿ ಹೆಜ್ಜೆಯಿಟ್ಟೂ
ಬಾ ತಾಯಿ ಭಾರತಿಯೇ
ಭಾವ ಭಾಗೀರಥಿಯೇ
ಹೃದಯವೀಣೆಯ ಮೀಟಿ
ಮಧುರ ಗೀತೆಯ ನೀಡೆ
ಬಾ ತಾಯಿ ಭಾರತಿಯೇ
ಭಾವ ಭಾಗೀರಥಿಯೇ
ಕಾವೇರಿ ಕಾಲ್ತೊಳೆಯೇ ಕಾದಿರುವಳೂ
ಗೋದಾವರಿ ದೇವಿ ಹೂ ಮುಡಿವಳೂ
ಕಾವೇರಿ ಕಾಲ್ತೊಳೆಯೇ ಕಾದಿರುವಳೂ
ಗೋದಾವರಿ ದೇವಿ ಹೂ ಮುಡಿವಳೂ
ಒಡಲೆಲ್ಲ ಸಿಂಗರಿಸೆ ತುಂಗೆ ಇಹಳೂ
ಒಡನಾಡಿ ಭದ್ರೆ ತಾ ಜೊತೆಗಿರುವಳೂ
ಬಾ ತಾಯಿ ಭಾರತಿಯೇ
ಭಾವ ಭಾಗೀರಥಿಯೇ
ಹೃದಯವೀಣೆಯ ಮೀಟಿ
ಮಧುರ ಗೀತೆಯ ನೀಡಿ
ಬಾ ತಾಯಿ ಭಾರತಿಯೇ
ಭಾವ ಭಾಗೀರಥಿಯೇ