ಚಿತ್ರ:
ಭಲೇ ಹುಚ್ಚ
ಭಲೇ ಹುಚ್ಚ
ಬಳ್ಳಿಗೆ ಹೂವು ಚೆಂದ
ಹೂವಿಗೆ ದುಂಬಿ ಚೆಂದ
ದುಂಬಿಯ ಗಾನ ಚೆಂದ
ಗಾನದ ಸವಿಯು ಚೆಂದ
ದುಂಬಿಯ ಗಾನ ಚೆಂದ
ಚೆಂದವೊ ಚೆಂದ ಚೆಂದ
ಕಡಲ ಮುತ್ತೆ ಅಂದ
ಮುತ್ತಿನ ಮೂಗುತಿ ಅಂದ
ಮೂಗುತಿ ಹೆಣ್ಣಿಗೆ ಅಂದ
ಹೆಣ್ಣಿನ ಕಣ್ಣೆ ಅಂದ
ಹೆಣ್ಣಿನ ಕಣ್ಣೆ ಅಂದ
ಅಂದವೊ ಅಂದ ಅಂದ
ಅಂದವೊ ಅಂದ ಅಂದ………
♫♫♫♫♫♫♫♫♫♫♫
ಸಂಜೆಯ ವೇಳೆಯಲಿ
ಆ….. ಆ ಆ..
ತಣ್ಣನೆ ಗಾಳಿಯಲಿ
ಓ….. ಓ ಓ ಓ…
ಸಂಜೆಯ ವೇಳೆಯಲಿ ತಣ್ಣನೆ ಗಾಳಿಯಲಿ
ಬಿಸಿಯು ಏರುತಿಹ ಭಾವನೆ ಏಕೆ
ತಂಪು ಗಾಳಿಯಲಿ ಇಂಪು ಗಾನದಲಿ
ಮನದಿ ಮೋಹ ಮೂಡಿ ಕಾಡಿದೆ ಅದಕೆ
ನಿನ್ನಲಿ ಆಸೆಯು ನನಗೇಕೆ…
ಓ… ಓ…
ನನ್ನನು ಕೆಣಕುವ ಇಂತ ಮಾತೇಕೆ
ಆ… ಆ ಆ..
ಬಳ್ಳಿಗೆ ಹೂವು ಚೆಂದ
ಹೂವಿಗೆ ದುಂಬಿ ಚೆಂದ
ದುಂಬಿಯ ಗಾನ ಚೆಂದ
ಗಾನದ ಸವಿಯು ಚೆಂದ
ದುಂಬಿಯ ಗಾನ ಚೆಂದ
ಚೆಂದವೊ ಚೆಂದ ಚೆಂದ
ಚೆಂದವೊ ಚೆಂದ ಚೆಂದ……
♫♫♫♫♫♫♫♫♫♫♫
ಕಣ್ಣುಗಳ ನುಡಿಯೇನು
ಆ….. ಆ ಆ
ನನ್ನೆದೆ ಹಾಡೇನು
ಆ….. ಆ ಆ ಆ….
ಕಣ್ಣುಗಳ ನುಡಿಯೇನು ನನ್ನೆದೆ ಹಾಡೇನು
ಒಂದೂ ತಿಳಿಯದ ಕಾರಣವೇನು
ಹೇಳುವ ಮಾತಲ್ಲ ಕೇಳುವ ಕಥೆಯಲ್ಲ
ಹೃದಯದ ಹಾಡಿಗೆ ಭಾಷೆ ಇಲ್ಲ
ಏನಿದು ನನ್ನಲಿ ಆನಂದ
ಆ… ಆ..
ಒಲಿದ ದೇವನು ತಂದ ಸಂಬಂಧ
ಆ.. ಆ..ಆ..
ಕಡಲ ಮುತ್ತೆ ಅಂದ
ಮುತ್ತಿನ ಮೂಗುತಿ ಅಂದ
ಮೂಗುತಿ ಹೆಣ್ಣಿಗೆ ಅಂದ
ಹೆಣ್ಣಿನ ಕಣ್ಣೆ ಅಂದ
ಬಳ್ಳಿಗೆ ಹೂವು ಚೆಂದ
ಹೂವಿಗೆ ದುಂಬಿ ಚೆಂದ
ದುಂಬಿಯ ಗಾನ ಚೆಂದ
ಗಾನದ ಸವಿಯು ಚೆಂದ
ಹೆಣ್ಣಿನ ಕಣ್ಣೆ ಅಂದ
ಅಂದವೊ ಅಂದ ಅಂದ
ನಿನ್ನಯ ಸ್ನೇಹ ಚಂದ
ಚೆಂದವೊ… ಚೆಂದ ಚೆಂದ