ನೀರಿನಂತೆ ನಿರ್ಮಲ – Neerinanthe nirmala Lyrics – Navathare Movie song Lyrics

ಚಿತ್ರ: ನವತಾರೆ
ಗಾಯಕ: ಎಸ್ ಪಿ ಬಿ, ಚಿತ್ರ
ಸಂಗೀತ: ವಿ ಶ್ರೀಧರ್
ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾನಿನಂತೆ ನಿಶ್ಚಲ
♬♬♬♬♬♬♬♬♬♬♬♬♬♬♬♬
ಎಳೆಯ ಬಿಸಿಲಲಿ
ಮಳೆಯ ಹನಿಯಲಿ ಪ್ರೇಮಾ
ಪ್ರೇಮಾ..
ಎದೆಯ ಗೂಡಲಿ
ಮಧುರ ನೆನಪಲಿ ಪ್ರೇಮಾ
ಪ್ರೇಮಾ..
ಪ್ರೇಮ ಅಳಿಯದು ಪ್ರೇಮ ಮರೆಯದು
ಎಂದೂ ಭೂಮಿಯಲಿ
ಭೂಮಿ ತಿರುಗಲು ಜೀವ ಉಳಿಯಲು
ಪ್ರೇಮ ನೆಲಸಿರಲೀ
ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾನಿನಂತೆ ನಿಶ್ಚಲ
♬♬♬♬♬♬♬♬♬♬♬♬♬♬♬♬
ಕಣ್ಣಿನಿಂದ ನೋಟವೋ
ನೋಟದಿಂದ ಸ್ನೇಹವೋ
ಸ್ನೇಹದಿಂದ ಸ್ಪರ್ಶವೋ
ಸ್ಪರ್ಶದಿಂದ ಹರ್ಷವೋ
ಆಗ ಪ್ರೇಮ ವರ್ಷವೋ
♬♬♬♬♬♬♬♬♬♬♬♬♬♬♬♬
ಕೊರೆವ ಚಳಿಯಲಿ
ಬೆರೆವ ತನುವಲಿ ಪ್ರೇಮಾ
ಪ್ರೇಮಾ..
ಬೆಂಕಿ ಎದುರಲಿ
ಬೆಳ್ಳಿ ಮನದಲಿ ಪ್ರೇಮಾ
ಪ್ರೇಮಾ..
ಮಾಗಿ ಋತುವಲಿ ಭೋಗಿ ರಥದಲಿ
ಜೋಡಿ ಪಯಣವಿದು
ಭೂಮಿ ಬಿರಿಯಲಿ ಸಾವೆ ಕರೆಯಲಿ
ಬೇರೆ ಆಗದಿದು
ನೀರಿನಂತೆ ನಿರ್ಮಲ
ಹೂವಿನಂತೆ ಕೋಮಲ
ಮಂಜಿನಂತೆ ಶೀತಲ
ಹಾಡಿನಂತ ಹಂಬಲ
ಬಾನಿನಂತೆ ನಿಶ್ಚಲ

Leave a Reply

Your email address will not be published. Required fields are marked *